ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಹನಿಟ್ರಾಪಿಂಗ್ ಜಾಲ, ಕಾಲ್ ರಿಸೀವ್ ಮಾಡುವ ಮುನ್ನ ಯೋಚಿಸಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆಕ್ನಾಲಜಿ ಬೆಳೆಯುತ್ತಿದ್ದಂತೆ ಅದರ ಉಪಯೋಗದ ಜೊತೆ ದುರುಪಯೋಗ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬೆತ್ತಲೆ ವಿಡಿಯೋ ಕರೆಗಳನ್ನು ಮಾಡಿ, ವಿಡಿಯೋ ಪರಿಚಯದವರಿಗೆ ಕಳಿಸುತ್ತೇವೆ ಎಂದು ಹೇಳಿ ಕಣ ಪೀಕುವ ಹನಿಟ್ರಾಪಿಂಗ್‌ನಿಂದ ಹುಷಾರಾಗಿ ಇರಬೇಕಿದೆ.

ರಾಜ್ಯದಲ್ಲಿ ಹನಿಟ್ರಾಪ್ ಮಾಡುವ ಜನ ಹೆಚ್ಚಾಗಿದ್ದು, ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಇವರ ಟಾರ್ಗೆಟ್ ಆಗಿದ್ದಾರೆ. ಎಲ್ಲೆಡೆ ಈ ಗ್ಯಾಂಗ್ ಆಕ್ಟೀವ್ ಆಗಿದ್ದು, ಇದರ ಬಲೆಗೆ ಬಿದ್ದವರು ಮಾನಸಿಕವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಅನಾಮಧೇಯ ನಂಬರ್‌ನಿಂದ ವಿಡಿಯೋ ಕಾಲ್ ಮಾಡುವುದು, ರಿಸೀವ್ ಮಾಡಿದವರಿಗೆ ಬ್ಲ್ಯಾಕ್‌ಮೇಲ್ ಮಾಡುವಷ್ಟು ಕಂಟೆಂಟ್ ಪಡೆಯುವುದು ನಂತರ ಕೇಳಿದಷ್ಟು ಹಣ ನೀಡುವವರೆಗೂ ಹಿಂಸೆ ನೀಡುವುದು ಇವರ ಕೆಲಸವಾಗಿದೆ.

ಹೇಗಿರುತ್ತದೆ ಇವರ ಪ್ಲಾನ್?

  • ಅನಾಮಧೇಯ ನಂಬರ್‌ನಿಂದ ವಿಡಿಯೋ ಕಾಲ್ ಮಾಡುವುದು.
  • ಮೊದಲೇ ನಗ್ನ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಅದನ್ನು ಪ್ಲೇ ಮಾಡುವುದು.
  • ನೀವು ಅವರ ವಿಡಿಯೋಗೆ ರೆಸ್ಪಾನ್ಸ್ ಮಾಡಲಿ ಬಿಡಲಿ ಎಲ್ಲವನ್ನೂ ರೆಕಾರ್ಡ್ ಮಾಡಿ ಇಟ್ಟುಕೊಳ್ಳುವುದು.
  • ಭಯಬಿದ್ದು ನೀವು ಕರೆ ಕಟ್ ಮಾಡಿದರೆ ತಕ್ಷಣವೇ ನಿಮ್ಮ ವಾಟ್ಸಾಪ್ ನಂಬರ್‌ಗೆ ಅವರು ರೆಕಾರ್ಡ್ ಮಾಡಿದ ವಿಡಿಯೋ ಕಳಿಸುವುದು.
  • ನಂತರ ಏನೂ ರಿಯಾಕ್ಟ್ ಮಾಡದೇ ಹೋದರೆ ಫೋನ್ ಹ್ಯಾಕ್ ಮಾಡಿದ್ದೇವೆ ನಿಮ್ಮ ಪರಿಚಯದವರಿಗೆ ವಿಡಿಯೋ ಕಳಿಸುತ್ತೇವೆ ಎಂದು ಹೆದರಿಸುವುದು.
  • ಫೇಸ್‌ಬುಕ್‌ಗೆ ಹಂಚುತ್ತೀವಿ ಎಂದು ಹೆದರಿಸಿ ಹಣ ಪೀಕುವುದು.
  • ಮೊದಲು ಕಡಿಮೆ ಹಣ ಕೇಳುವುದು, ಒಂದು ಬಾರಿ ನೀವು ಹಣ ಕೊಟ್ಟರೆ ನಿಮ್ಮನ್ನು ಬಿಡುವುದಿಲ್ಲ.
  • ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಮಾನಸಿಕವಾಗಿ ಹಿಂಸೆ ನೀಡುತ್ತಾರೆ.
  • ಯಾರಿಗೂ ಹೇಳುವುದಿಲ್ಲ, ಪೊಲೀಸರ ಬಳಿ ಹೋಗುವುದಿಲ್ಲ. ದುಡ್ಡು ನೀಡುತ್ತಾರೆ ಎಂದು ಗೊತ್ತಾದಲ್ಲಿ ಹಣ ಪೀಕುತ್ತಲೇ ಇರುತ್ತಾರೆ.

    ಏನು ಮಾಡಬೇಕು?

  • ಗೊತ್ತಿಲ್ಲದ ನಂಬರ್‌ನಿಂದ ಕರೆ ಬಂದರೆ ಎತ್ತಬೇಡಿ, ಅದು ವಾಯ್ಸ್ ಕಾಲ್ ಅಥವಾ ವಿಡಿಯೋ ಕಾಲ್ ಎನ್ನುವ ಬಗ್ಗೆ ಗಮನ ಇರಲಿ.
  • ಫ್ರಂಟ್ ಕ್ಯಾಮೆರಾಗೆ ಸ್ಲೈಡಿಂಗ್ ಕವರ್ ಹಾಕಿಕೊಳ್ಳಿ.
  • ಆಕಸ್ಮಿಕವಾಗಿ ಫೋನ್ ರಿಸೀವ್ ಮಾಡಿದ್ದೇ ಆದಲ್ಲಿ ತಕ್ಷಣ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!