ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಕ್ಯಾಟರ್ ಪಿಲ್ಲರ್ ಕೀಟ ಕಾಣಿಸಿಕೊಂಡಿದ್ದು, ಇದು ಮನುಷ್ಯನಿಗೆ ಕಚ್ಚಿದರೆ ಸಾವಿಗೀಡಾಗುತ್ತಾನೆ ಎಂಬ ಸುಳ್ಳು ವದಂತಿ ಜಿಲ್ಲೆಯಲ್ಲಿ ಹರಡಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಈ ಕೀಟದ ಪೋಟೋ ವೈರಲ್ ಮಾಡುವ ಮೂಲಕ ಕೆಲವು ಪುಂಡರು ಸಾರ್ವಜನಿಕ ವಲಯದಲ್ಲಿ ಸುಳ್ಳು ವದಂತಿಯನ್ನು ಹರಿದು ಬಿಟ್ಟಿದ್ದಾರೆ.
ಇನ್ನೂ ಕ್ಯಾಟರ್ ಪಿಲ್ಲರ್ ಕೀಟ ಯಾವುದೇ ರೀತಿಯ ಜೀವ ಹಾನಿ ಮಾಡುವುದಿಲ್ಲ,ಹೀಗಾಗಿ ಜನರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಟನೆ ನೀಡಿದೆ.