Sunday, April 18, 2021

Latest Posts

ಬಿಹಾರಿ ರೈತ ಹಾಪ್ ಶೂಟ್ ಬೆಳೆದ ಸುದ್ದಿ ನಕಲಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿಹಾರ ಮೂಲದ ರೈತರೊಬ್ಬರು ವಿಶ್ವದ ಅತ್ಯಂತ ದುಬಾರಿ ತರಕಾರಿಯಾದ ಹಾಪ್ ಶೂಟ್ ಬೆಳೆದಿದ್ದು, ಪ್ರತಿ ಕೆ.ಜಿ.ಗೆ 1 ಲಕ್ಷ ರೂ. ಬೆಲೆ ನಿಗದಿಪಡಿಸಿದ್ದಾರೆ ಎಂಬ ಸುದ್ದಿ ಒಂದೆರಡು ದಿನದಿಂದ ಹರಿದಾಡಿತ್ತು.ಆದರೀಗ ಈ ಸುದ್ದಿ ನಕಲಿ ಎಂದು ತಿಳಿದುಬಂದಿದೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು  ಬಿಹಾರದ ಅಮರೇಶ್ ಸಿಂಗ್ ಹಾಪ್ ಶೂಟ್ ಬೆಳೆದಿದ್ದು, ಒಂದು ಕೆ.ಜಿ. ತರಕಾರಿಯನ್ನು 1 ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ತರಕಾರಿ ರೈತರ ಜೀವನ ಬದಲಿಸಲಿದೆ ಎಂದು ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೇ ಈ ಸುದ್ದಿ ಸಾಕಷ್ಟು ವೈರಲ್ ಆಗಿತ್ತು.

ಆದರೆ ಸುದ್ದಿಯ ಜಾಡುಹಿಡಿದು ಬಿಹಾರಕ್ಕೆ ಹಿಂದಿಯ ದೈನಿಕ್ ಜಾಗರಣ್ ಪ್ರತಿಕೆ ತಂಡ ತೆರಳಿದಾಗ, ಅಲ್ಲಿ ಈ ತರಕಾರಿ ಬೆಳೆದೇ ಇಲ್ಲ ಎಂದು ಗೊತ್ತಾಗಿದೆ.  ಆಗ ಅಮರೇಶ್ ಸಿಂಗ್‌ಗೆ ಕರೆ ಮಾಡಿದರೆ, ತರಕಾರಿಯನ್ನು ಔರಂಗಬಾದ್‌ನಿಂದ 172ಕಿ.ಮೀ. ದೂರದಲ್ಲಿರುವ ನಳಂದಾ ಜಿಲ್ಲೆಯಲ್ಲಿ ಬೆಳೆಯಲಾಗಿದೆ ಎಂದು ಹೇಳಿದ್ದಾರೆ. ಬೇರೊಂದು ತಂಡವನ್ನು ಪ್ರತಿಕಾ ಸಂಸ್ಥೆ ನಳಂದಾಗೆ ಕಳುಹಿಸಿದಾಗ, ಅಲ್ಲೂ ಯಾರೂ ಈ ತರಕಾರಿ ಬೆಳೆದಿಲ್ಲ. ಅಸಲಿಗೆ  ಹಾಪ್ ಶೂಟ್ ಬಗ್ಗೆ ಜನರಿಗೆ ತಿಳಿದೇ ಇಲ್ಲ ಎಂಬುದು ಬಹಿರಂಗವಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss