ದಿನಭವಿಷ್ಯ | ಅದೃಷ್ಟವು ಇಂದು ನಿಮ್ಮನ್ನು ನೆರಳಿನಂತೆ ಹಿಂಬಾಲಿಸಲಿದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ನಿಮ್ಮ ವರ್ತನೆಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕು. ಎಲ್ಲರನ್ನು ಮನವೊಲಿಸಿ ಕಾರ್ಯ ಸಾಧಿಸಬೇಕು. ಸಂಘರ್ಷ ಫಲ  ನೀಡದು.

ವೃಷಭ
ವೃತ್ತಿಯಲ್ಲಿ ಉತ್ತಮ ನಿರ್ವಹಣೆ. ಕಾರ್ಯ ಸಿದ್ಧಿ. ಅದನ್ನೆ ಕೌಟುಂಬಿಕ ವಿಚಾರದಲ್ಲಿ ಹೇಳಲಾಗದು. ಇಲ್ಲಿ ನಿಮ್ಮ ಕೆಲವು ಯೋಜನೆ ವಿಫಲಗೊಳ್ಳುವವು.

ಮಿಥುನ
ನಿಮ್ಮ ಪ್ರಭಾವ ತೋರಲು ಹೋಗುವುದರಿಂದ ಕಾರ್ಯಸಿದ್ಧಿಯಾಗದು. ಇತರರ ಮನಸ್ತಾಪ ಕಟ್ಟಿಕೊಳ್ಳುವಿರಿ. ನೆಮ್ಮದಿ ದೂರವಾಗುವುದು.

ಕಟಕ
ಅದೃಷ್ಟವು ಇಂದು ನಿಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತದೆ. ಅಪರಾಹ್ನ ಶುಭ ಸುದ್ದಿ ಕೇಳುವಿರಿ. ಪ್ರೀತಿಯ ಭಾವನೆ ವ್ಯಕ್ತಪಡಿಸಲು ಹಿಂಜರಿಯದಿರಿ.

ಸಿಂಹ
ಆರೋಗ್ಯಕ್ಕೆ ಸಂಬಂಧಿಸಿ ವಿಚಾರವು ಇಂದು ಆದ್ಯತೆ ಪಡೆಯುವುದು. ಖಾಸಗಿ ಬದುಕಿನಲ್ಲಿ ಎಲ್ಲವೂ ಸುಗಮ. ಅಡ್ಡಿಗಳ ನಿವಾರಣೆ.

ಕನ್ಯಾ
ನಿಮ್ಮ ಹಾಸ್ಯಪ್ರಜ್ಞೆಯು ಇತರರನ್ನು ಸಂತೋಷದಲ್ಲಿ ಇಡು ವುದು. ಆ ಮೂಲಕ ಎಲ್ಲರ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಒತ್ತಡ ಕಡಿಮೆ.

ತುಲಾ
ಖಾಸಗಿ ಬದುಕಿಗೆ ಗಮನ ಹರಿಸದಷ್ಟು ವೃತ್ತಿಕಾರ್ಯದಲ್ಲಿ ಮುಳುಗುತ್ತೀರಿ. ಬಂಧುಗಳ ಜತೆ ಸಂಬಂಧದಲ್ಲಿ ಇರಿಸುಮುರಿಸು.

ವೃಶ್ಚಿಕ
ಇತರರನ್ನು ಆಕರ್ಷಿಸುವ ಕಲೆ ನಿಮಗೆ ಕರಗತ. ಇಂದು ಕೂಡ ಅದೇ ಸಂತೋಷ ಪಡಕೊಳ್ಳುವಿರಿ. ವೈಯಕ್ತಿಕ ಕಾರ್ಯದಲ್ಲಿ ಸಫಲತೆ.

ಧನು
ನೀವು ತಾಳುವ ನಿರ್ಧಾರವು ಭವಿಷ್ಯದಲ್ಲಿ ಮಹತ್ತರ ಪರಿಣಾಮ ಬೀರಬಹುದು. ಹಾಗಾಗಿ ವಿವೇಚಿಸಿ ನಿರ್ಧಾರ ತಾಳಿ. ಸಂಬಂಧ ಕೆಡಿಸಿಕೊಳ್ಳದಿರಿ.

ಮಕರ
ಭಾವನಾತ್ಮಕ ಪ್ರಸಂಗಕ್ಕೆ ಸಾಕ್ಷಿಯಾಗುವಿರಿ. ಮನಸ್ಸಿಗೆ ನೋವು ತರುವ ಬೆಳವಣಿಗೆ. ಇದು ನಿಮ್ಮ ವೃತ್ತಿಯ ಮೇಲೆ ಪರಿಣಾಮ ಬೀರದಂತೆ ನೋಡಿ.

ಕುಂಭ
ಮುಂಜಾನೆ ಅವಧಿ ಆರೋಗ್ಯಕ್ಕೆ ಸಂಬಂಧಿಸಿ ಚಿಂತೆ. ಬಳಿಕ ಎಲ್ಲವೂ ನಿರಾಳ. ಆಪ್ತೇಷ್ಟರ ಜತೆ ಕಾಲ ಕಳೆಯುವ ಅವಕಾಶ ದೊರೆಯುವುದು.

ಮೀನ
ಉದ್ಯೋಗದಲ್ಲಿ ಹೆಚ್ಚು ಹೊಣೆಗಾರಿಕೆ. ಹೆಚ್ಚು ಕಾಲ ಅದರಲ್ಲೇ ಕಳೆಯಬೇಕಾ ಗುವುದು.ಕುಟುಂಬದ ಕಡೆಗೆ ಗಮನ ಹರಿ ಸಲು ಸಮಯವಿರದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!