ದಿನಭವಿಷ್ಯ | ವಿವಾಹಾಕಾಂಕ್ಷಿ ಗಳಿಗೆ ಸಂಬಂಧ ಕೂಡಿಬಂದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಯೋಜಿಸಿ ಕಾರ್ಯ ಮಾಡಿ. ಆ ಮೂಲಕ ಒತ್ತಡ ನಿವಾರಿಸಿಕೊಳ್ಳಬಹುದು. ಕೆಲವರಿಂದ ನಿಮ್ಮ ಕಾರ್ಯಕ್ಕೆ ಅಡ್ಡಿ ಬಂದೀತು. ಕೌಟುಂಬಿಕ ಅಸಮಾಧಾನ.

ವೃಷಭ
ಎಲ್ಲರೊಂದಿಗೂ ಉತ್ತಮ ಹೊಂದಾಣಿಕೆ ಸಾಧಿಸಿಕೊಳ್ಳಿ. ಇಲ್ಲ ವಾದರೆ ಅಸಮಾಧಾನ ಉಂಟಾಗಬಹುದು.ಅದರಿಂದ ಸಂಬಂಧ ಕೆಡಬಹುದು.

ಮಿಥುನ
ಅತಿಯಾದ ಕೆಲಸವು ನಿಮ್ಮ ಉಲ್ಲಾಸ ಕಸಿಯುವುದು. ಮಾನಸಿಕವಾಗಿಯೂ ತುಂಬ ರೋಸಿರುವಿರಿ. ಕೌಟುಂಬಿಕ ಭಿನ್ನಮತ ಉಂಟಾದೀತು.

ಕಟಕ
ಎಲ್ಲರೊಂದಿಗೆ ಉತ್ತಮ ಸಂವಹನ ಸಾಧಿಸಲು ಸಫಲರಾಗುವಿರಿ. ಹಾಗಾಗಿ ಕಠಿಣ ಕಾರ್ಯ ಸುಲಭವಾಗುವುದು. ಆರ್ಥಿಕ ಒತ್ತಡ ಕಾಡುವುದು.

ಸಿಂಹ
ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ದೇಹಕ್ಕೆ ಒಗ್ಗದ ಆಹಾರ ಸೇವಿಸಬೇಡಿ. ಮನೆಯಲ್ಲಿನ ಅಸಮಾಧಾನ ಇಂದು ನಿವಾರಣೆ.

ಕನ್ಯಾ
ಹೆಚ್ಚುವರಿ ಕೆಲಸದ ಹೊಣೆ ನಿಮ್ಮ ಹೆಗಲೇರುವುದು. ಚಿಂತೆ ಬೇಡ, ಅದನ್ನು ಸರಿಯಾಗಿ ನಿಭಾಯಿಸುವಿರಿ. ಕೌಟುಂಬಿಕ ನೆಮ್ಮದಿ.

ತುಲಾ
ವೃತ್ತಿಯಲ್ಲಿ ಬಿಡುವಿಲ್ಲದ ದಿನ. ಆದರೂ ಕಾಲಮಿತಿಯಲ್ಲಿ ಕಾರ್ಯ ಪೂರೈಸುವಿರಿ. ವಿವಾಹಾಕಾಂಕ್ಷಿ ಗಳಿಗೆ ಸಂಬಂಧ ಕೂಡಿಬಂದೀತು.

ವೃಶ್ಚಿಕ
ಉದ್ಯೋಗಾ ಕಾಂಕ್ಷಿಗಳಿಗೆ ಶುಭ ಬೆಳವಣಿಗೆ. ಆಪ್ತರೊಂದಿಗೆ ಮಾತಿನ ಚಕಮಕಿ ನಡೆದೀತು. ಚರ್ಮಕ್ಕೆ ಸಂಬಂಧಿಸಿದ ಅಲರ್ಜಿ ಬಾಧೆ ಕಾಡಬಹುದು.

ಧನು
ಬಾಕಿ ಇರುವ ಕಾರ್ಯ ಮುಗಿಸಲು ಇಂದು ಸಫಲರಾಗುವಿರಿ. ಹಿರಿಯರು ನಿಮ್ಮ ಮೇಲೆ ಒತ್ತಡ ಹೇರ
ಬಹುದು. ಆರ್ಥಿಕ ಪರಿಸ್ಥಿತಿ ಉತ್ತಮ.

ಮಕರ
ವೃತ್ತಿಯಲ್ಲಿ ಸುಗಮ ದಿನ. ಹಾಗಾಗಿ ಉಲ್ಲಾಸದ ಮನಸ್ಥಿತಿ. ಕಾರ್ಯ ಸಾಫಲ್ಯ. ಪ್ರೀತಿಯ ಬಂಧ ಇನ್ನಷ್ಟು ಬಿಗಿ. ಆರ್ಥಿಕ ಕೊರತೆ ಕಾಡಬಹುದು.

ಕುಂಭ
ಉದ್ಯೋಗದಲ್ಲಿ ಮೂಡಿದ್ದ ಅನಿಶ್ಚಿತತೆ ಕೊನೆಯಾಗುವುದು. ಮನಸ್ಸಿಗೆ ನಿರಾಳತೆ. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನ ಸಾಧಿಸಿ.

ಮೀನ
ಕುಟುಂಬದಲ್ಲಿ ಅನಪೇಕ್ಷಿತ ಬೆಳವಣಿಗೆ ಸಂಭವಿಸಿದರೂ ಬಳಿಕ ಎಲ್ಲವೂ ಸರಿಯಾಗುವುದು. ಕೆಟ್ಟ ಮಾತು ಆಡಲು ಹೋಗಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!