ಕುದುರೆ ಸವಾರಿಯಲ್ಲಿ ಭಾರತಕ್ಕೆ ಕಂಚು ತಂದ ಅನುಷ್​ ಅಗರ್‌ವಾಲಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಕುದುರೆ ಸವಾರಿ ವೈಯಕ್ತಿಕ ಸ್ಪರ್ಧೆಯಲ್ಲಿ ಅನುಷ್ ಅಗರ್‌ವಾಲಾ ಕಂಚಿನ ಪದಕ ಗೆದ್ದಿದ್ದಾರೆ.

ಅಗರ್‌ವಾಲಾ 73.030 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದರು. ಈ ಮೂಲಕ ಏಷ್ಯನ್ ಗೇಮ್ಸ್‌ನ ಎರಡನೇ ಪದಕಕ್ಕೆ ಅಗರ್ವಾಲ್​ ಮುತ್ತಿಟ್ಟರು.

ಇದೇ ಸ್ಪರ್ಧೆಯಲ್ಲಿ ಮಲೇಷಿಯಾದ ಬಿನ್ ಮಹಮದ್ ಫಾತಿಲ್ ಮೊಹಮ್ಮದ್ ಕಬಿಲ್ ಅಂಬಾಕ್ ಅವರು 75.780 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮತ್ತೊಂದೆಡೆ ಹಾಂಕಾಂಗ್‌ನ ಜಾಕ್ವೆಲಿನ್ ವಿಂಗ್ ಯಿಂಗ್ ಸಿಯು 73.450 ಅಂಕ ಗಳಿಸುವ ಮೂಲಕ ಬೆಳ್ಳಿ ಪದಕ ಪಡೆದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!