Thursday, August 11, 2022

Latest Posts

ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ  ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮೇಳಕ್ಕೆ ಚಾಲನೆ

ಹೊಸದಿಗಂತ ವರದಿ, ಕೊಪ್ಪಳ:

ರೈತರಿಂದ ನೇರವಾಗಿ ಗ್ರಾಹಕರಿಗೆ ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಕೈಗೊಳ್ಳುವ ಉದ್ಧೇಶದಿಂದ  ತೋಟಗಾರಿಕೆ ಇಲಾಖೆ ವತಿಯಿಂದ ಇಂದಿನಿಂದ ನಾಲ್ಕು ದಿನಗಳ ಕಾಲ ವಿವಿಧ ಹಣ್ಣುಗಳ ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಅವರು ಉದ್ಘಾಟಿಸಿದರು.

ಜಿಲ್ಲಯಲ್ಲಿ ಈಗಾಗಲೇ ಆಯೋಜಿಸಿದ್ದ ವಿವಿಧ ಮೇಳದಂತಹ ಕಾರ್ಯಕ್ರಮಗಳು ಭರ್ಜರಿ ಯಶಸ್ಸು ಕಂಡು ಇದರಿಂದ ಉತ್ತೇಜಿತಗೊಂಡಿರುವ ತೋಟಗಾರಿಕೆ ಇಲಾಖೆ ಈಗ ದ್ರಾಕ್ಷಿ, ದಾಳಿಂಬೆ ಹಾಗೂ  ಕರಬೂಜ, ಪೇರಲ, ಅಂಜೂರ, ಕಲ್ಲಂಗಡಿ, ಮೊಸಂಬಿ, , ಬಾಳೆ, ಪಪ್ಪಾಯಿ, ಜೇನು  ಮತ್ತು ಅಣಭೆ, ಹಣ್ಣು ಬೆಳೆಗಾರರಿಗೆ ಕಾರ್ಯಗಾರ ಹಾಗೂ ಮಾರಾಟ ಮೇಳವನ್ನು ಆಯೋಜಿಸಿವುದರ ಮೂಲಕ  ರೈತರಲ್ಲಿ  ಆತ್ಮಸ್ಥೈರ್ಯ ಶಕ್ತಿ ತುಂಬುವ ಕೆಲಸ ಮುಂದಾಗಿರುವುದು ವಿಶೇಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕೃಷಿ ಹಾಗೂಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ ಗೋನಾಳ, ಅಪರ ಜಿಲ್ಲಾಧಿಕಾರಿ ಮಾರುತಿ. ಎಂ.ಪಿ. ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಯಂಕಣ್ಣ ಯರಾಶಿ,  ತೋಟಗಾರಿಕಾ ಉಪನಿರ್ಧೇಶಕ ಕೃಷ್ಣಾ ಉಕ್ಕುಂದ್, ವಿಷಯ ತಜ್ಣ ವಾಮನಮೂರ್ತಿ, ಅನೇಕ ರೈತರು ಭಾಗವಹಿಸಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss