ಹೊಸದಿಗಂತ ಡಿಜಿಟಲ್
ರಾಷ್ಟ್ರಜಾಗೃತಿಯ ದೈನಿಕ ಹೊಸ ದಿಗಂತ ತನ್ನ ಡಿಜಿಟಲ್ ವಿಭಾಗಕ್ಕೆ ಬೆಂಗಳೂರಿನಲ್ಲಿ ಸುಸಜ್ಜಿತ ಕಚೇರಿಯನ್ನು ಹೊಂದುತ್ತಿದೆ. ಹಲಸೂರಿನ ಸಂಗಮ ರಸ್ತೆಯ ಸಿವನ್ಚೆಟ್ಟಿ ಗಾರ್ಡನ್ ನಲ್ಲಿರುವ ನೂತನ ಕಚೇರಿ ಇಂದು ಉದ್ಘಾಟನೆಯಾಗುತ್ತಿದೆ.
ಮುಖ್ಯ ಅತಿಥಿಗಳಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ ನಿರಾಣಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ ಇರುತ್ತಾರೆ. ಜ್ಞಾನಭಾರತಿ ಪ್ರಕಾಶನದ ಅಧ್ಯಕ್ಷರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಅಧ್ಯಕ್ಷತೆ ಹಾಗೂ ಜ್ಞಾನಭಾರತಿ ಪ್ರಕಾಶನದ ನಿರ್ದೇಶಕರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಆದ ನಿರ್ಮಲ ಕುಮಾರ್ ಸುರಾಣಾ ಅವರ ಉಪಸ್ಥಿತಿ ಇರುತ್ತದೆ.