ದಿನಭವಿಷ್ಯ| ಅನಿರೀಕ್ಷಿತ ಬೆಳವಣಿಗೆಗಳಿಂದ ವಿಚಲಿತರಾಗದಿರಿ

ಮೇಷ
ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿ ದೊರಕಬಹುದು. ಇದು ನಿಮ್ಮ ಗತಿಯನ್ನು ಬದಲಿಸಬಹುದು. ಬಂದದ್ದನ್ನು ಹಾಗೇ ಸ್ವೀಕರಿಸಿ.

ವೃಷಭ
ಹಳೆಯ ಪ್ರಸಂಗವೊಂದು ಮತ್ತೆ ನಿಮ್ಮನ್ನು ಕಾಡಬಹುದು. ಅದನ್ನು ತಪ್ಪಿಸಲು ನಿಮ್ಮಿಂದಾಗದು. ಆರೋಗ್ಯ ಸಮಸ್ಯೆ ಉಂಟಾಗಬಹುದು.

ಮಿಥುನ
ಭಾವನಾತ್ಮಕವಾಗಿ ನೀವಿಂದು ಗಟ್ಟಿತನ ಪ್ರದರ್ಶಿಸುವಿರಿ. ಆದರೆ ಸಂಘರ್ಷಕ್ಕೆ ಇಂದು ಸೂಕ್ತ ದಿನವಲ್ಲ. ಸಮಾಧಾನ ಮುಖ್ಯ. ಹೊಂದಾಣಿಕೆಯಿರಲಿ.

ಕಟಕ
ಅನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು. ಅದು ನಿಮ್ಮ ಖಾಸಗಿ ಬದುಕಿನ ಮೇಲೆ ಪರಿಣಾಮ ಬೀರೀತು. ಬಂಧುಗಳ ಭೇಟಿ, ಸಂಬಂಧ ವೃದ್ಧಿ.

ಸಿಂಹ
ಕೆಲಸದಲ್ಲಿ ಸಮಸ್ಯೆ. ಇದರಿಂದ ದಿನವಿಡೀ ಗೊಂದಲದಲ್ಲಿ ಕಳೆಯುವಿರಿ. ಅಪೇಕ್ಷಿತ ಸಹಕಾರವೂ ಲಭ್ಯವಾಗದು. ಖರ್ಚೂ ಹೆಚ್ಚುವುದು.

ಕನ್ಯಾ
ನಿಮ್ಮ ಬದುಕು ಮತ್ತು ಆರೋಗ್ಯದ ಮಧ್ಯೆ ಹೊಂದಾಣಿಕೆ ಸಾಧಿಸಿ. ಜೀವನ ಶೈಲಿ ವ್ಯವಸ್ಥಿತಗೊಳಿಸಿ. ಬಂಧುಗಳ ಜತೆ ಭಿನ್ನಮತ ಸಂಭವ.

ತುಲಾ
ಗ್ರಹಗತಿಗಳು ಇಂದು ನಿಮಗೆ ವಿಶ್ರಾಂತಿ ನೀಡುವುದಿಲ್ಲ. ಸದಾ ಏನಾದರೊಂದು ಚಿಂತೆ ಕಾಡುವುದು. ಕೆಲಸದ ಒತ್ತಡವೂ ಅಧಿಕ. ಆಪ್ತರ ಜತೆ ಕಾಲ ಕಳೆಯಿರಿ.

ವೃಶ್ಚಿಕ
ಮನೆ ಅಥವಾ ಕೆಲಸದಲ್ಲಿ  ಮೂಡುವ ಸಮಸ್ಯೆಯನ್ನು ಹೊಂದಾಣಿಕೆಯಿಂದ ಪರಿಹರಿಸಲು ಶಕ್ತವಾಗುವಿರಿ.  ಸಂಘರ್ಷದ ಅಗತ್ಯ ಇಂದು ಬೀಳಲಾರದು.

ಧನು
ದೊಡ್ಡ ಖರ್ಚು ಇಂದು ಬರಬಹುದು. ವಾಗ್ವಾದದಿಂದ  ಇಂದು ದೂರವಿರಿ. ಏಕೆಂದರೆ ವಾದದಲ್ಲಿ ನೀವು ಗೆಲ್ಲಲಾರಿರಿ. ದೂರ ಪ್ರಯಾಣ ಸಂಭವ.

ಮಕರ
ಧಾರ್ಮಿಕ ವಿಚಾರಗಳು ಇಂದು ಹೆಚ್ಚು ಆಸಕ್ತಿ ಕೆರಳಿಸಬಹುದು. ಆರೋಗ್ಯ ಸಮಸ್ಯೆ ಕೂಡ ಕಾಡೀತು. ವಿವಾಹಿತರ ಪಾಲಿಗೆ ಶುಭ ಬೆಳವಣಿಗೆ ಉಂಟಾಗುವುದು.

ಕುಂಭ
ಕೆಲಸದಲ್ಲಿ ನಿರ್ಲಕ್ಷ್ಯ ನಿಮ್ಮ ಪಾಲಿಗೆ ದುಬಾರಿಯಾದೀತು. ಹಾಗಾಗಿ ಆಸ್ಥೆಯಿಂದ ಕಾರ್ಯ ನಿರ್ವಹಿಸಿ. ಕೌಟುಂಬಿಕ ಪರಿಸರ  ಉಲ್ಲಾಸದಾಯಕ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!