ದಿನಭವಿಷ್ಯ| ವೃತ್ತಿಗೆ ಪ್ರಾಧಾನ್ಯತೆ ಕೊಟ್ಟು ಕುಟುಂಬ ನಿರ್ಲಕ್ಷಿಸಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ವೃತ್ತಿಗೇ ಪ್ರಾಧಾನ್ಯತೆ ಕೊಟ್ಟು ಕುಟುಂಬ ನಿರ್ಲಕ್ಷಿಸಬೇಡಿ. ಪ್ರೀತಿಪಾತ್ರರಿಗೆ ನೋವು ನೀಡಬೇಡಿ. ಆರ್ಥಿಕ ವಿಷಯದಲ್ಲಿ ನಿಮಗೆ ಒಳಿತಾಗಲಿದೆ.

ವೃಷಭ
ವೃತ್ತಿಕ್ಷೇತ್ರದಲ್ಲಿ ಎಲ್ಲವೂ ಸುಗಮ. ಯಾವುದೇ ಪ್ರತಿಕೂಲ ಬೆಳವಣಿಗೆ ಕಾಣದು. ಆದರೆ ಖಾಸಗಿ ಬದುಕಿನಲ್ಲಿ ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು.

ಮಿಥುನ
ಅತಿಯಾದ ಭಾವುಕತೆ ನಿಮ್ಮ ವಿವೇಕ ಮರೆಸಬಹುದು. ಇದರಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ಸಮಸ್ಯೆಗೆ ಪ್ರಾಕ್ಟಿಕಲ್ ಪರಿಹಾರ ಹುಡುಕಿರಿ.

ಕಟಕ
ಕೌಟುಂಬಿಕ ಚಿಂತೆ. ಕೆಲವು ವಿಷಯದಲ್ಲಿ ಸತ್ಯ ಅರಿಯಲು ಯತ್ನಿಸಿರಿ. ಭಾವುಕತೆಯು ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದಿರಲಿ.

ಸಿಂಹ
ನಿಮ್ಮ ಉದ್ದೇಶ ಸಾಧಿಸಲು ಅಡ್ಡ ದಾರಿ ಹಿಡಿಯುವ ಮನಸ್ಸು ಮೂಡಬಹುದು. ಅದಕ್ಕೆ ನಿಯಂತ್ರಣ ಹಾಕಿ. ಪ್ರಬುದ್ಧತೆಯಿಂದ ವರ್ತಿಸಿರಿ.

ಕನ್ಯಾ
ಆತ್ಮೀಯ ಸಂಬಂಧ ನಿಮ್ಮನ್ನು ಕೋಟಲೆಗೆ ಸಿಲುಕಿಸುವುದು. ಪ್ರೀತಿಯ ವಿಷಯದಲ್ಲಿ ಅಂಧರಂತೆ ವರ್ತಿಸದಿರಿ. ಎಲ್ಲವನ್ನೂ ಕಣ್ಣು ಬಿಟ್ಟು ಅವಲೋಕಿಸಿರಿ.

ತುಲಾ
ವೃತ್ತಿಯಲ್ಲಿ ಏರುಪೇರು. ಭಾವನಾತ್ಮಕ ತಾಕಲಾಟ. ಆಪ್ತೇಷ್ಟರಿಂದ ಭಾವನಾತ್ಮಕ ಬೆಂಬಲ ಪಡೆಯುವಿರಿ. ಆರ್ಥಿಕ  ಏರುಪೇರು ಕಾಡಬಹುದು.

ವೃಶ್ಚಿಕ
ಬದುಕಿನಲ್ಲಿ ಕೆಲವು ಕಟ್ಟುಪಾಡು ನಿಮ್ಮನ್ನು ಬಾಧಿಸಬಹುದು. ನಿಮ್ಮ ಕಾರ್ಯಶೈಲಿ ಬದಲಿಸಿಕೊಳ್ಳಲು ಗಮನ ಕೊಡಿ. ಕೌಟುಂಬಿಕ ಭಿನ್ನಾಭಿಪ್ರಾಯ.

ಧನು
ನಿಮ್ಮ ಮನದಲ್ಲಿ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಬಹುದು. ಅನುಭವಿಗಳ ಹಿತವಚನಕ್ಕೆ ಕಿವಿಗೊಡಿ. ಆರ್ಥಿಕ ಸ್ಥಿತಿ ಸುಧಾರಣೆ.

ಮಕರ
ನಿಮ್ಮ ಭಾವುಕ ನಿರ್ಧಾರ ನಿಮಗೆ ಪ್ರತಿಕೂಲ ಪರಿಣಾಮ ತರಬಹುದು. ಕೌಟುಂಬಿಕ ಭಿನ್ನಮತದ ವಿಷಯದಲ್ಲಿ ಪಕ್ಷಪಾತ ಎಸಗದಿರಿ.

ಕುಂಭ
ಸಂಬಂಧಗಳನ್ನು ನಿಭಾಯಿಸುವಲ್ಲಿ ಎಚ್ಚರ ವಹಿಸಿರಿ. ತಮ್ಮನ್ನು ಕಡೆಗಣಿಸಿದ ಭಾವನೆ ಆಪ್ತರಿಗೆ ತಟ್ಟದಂತೆ ನೋಡಿಕೊಳ್ಳಿ. ಎಲ್ಲರ ಸಹಕಾರ ಪಡೆಯಿರಿ.

ಮೀನ
ಹೆಚ್ಚು ಉತ್ಸಾಹದ ದಿನ. ಕೌಟುಂಬಿಕ ಪರಿಸರದಲ್ಲಿ ಸಂತೋಷ ಕಾಣುವಿರಿ. ಬಂಧುಗಳಿಂದ ನಿಮಗೆ ಪೂರಕ ಸುದ್ದಿ ಕೇಳುವಿರಿ. ಅನಿರೀಕ್ಷಿತ ಖರ್ಚು ಹೆಚ್ಚಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!