ದಿನಭವಿಷ್ಯ| ಸಂಬಂಧದ ವಿಚಾರದಲ್ಲಿ ಎಚ್ಚರದಿಂದಿರಿ, ಹದತಪ್ಪಿದ ಮಾತು ಸಂಬಂಧವನ್ನು ಕೆಡಿಸಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಮನೆಯಲ್ಲಿ ಸಂತೋಷ, ಸಂಭ್ರಮದ ವಾತಾವರಣ. ಕುಟುಂಬ ಸದಸ್ಯರಿಂದ ಉತ್ತಮ ಸಹಕಾರ. ಚಿಂತೆ ತರುತ್ತಿದ್ದ ವಿಷಯ ಇತ್ಯರ್ಥ ಕಾಣುವುದು.

ವೃಷಭ
ನಿಮ್ಮ ಆಸುಪಾಸಿನ ವ್ಯಕ್ತಿಗಳ ಜತೆ ಸೂಕ್ತ ಹೊಂದಾಣಿಕೆ ಸಾಧಿಸಿ. ನನಗೆ ಯಾರೂ ಅಗತ್ಯವಿಲ್ಲ ಎಂಬ ಧೋರಣೆ ತ್ಯಜಿಸಿ. ಕೌಟುಂಬಿಕ ಸಹಕಾರ.

ಮಿಥುನ
ವಿಶೇಷಗಳಿಲ್ಲದ ಮಾಮೂಲಿ ದಿನ. ಮನೆಯವರ ಜತೆ ಉತ್ತಮ ಹೊಂದಾಣಿಕೆ. ಇದರಿಂದಾಗಿ ಯಾವುದೇ ಭಿನ್ನಮತ ಮೂಡಲಾರದು.

ಕಟಕ
ಬಂಧುಬಾಂಧವರ ಜತೆ ಸೌಹಾರ್ದ ಸಂಬಂಧ. ಹಾಗಾಗಿ ಇಂದಿನ ದಿನ ಉದ್ವಿಗ್ನತೆ ಇಲ್ಲದೆ ಉಲ್ಲಾಸದಿಂದ ಕಳೆಯುವುದು. ಖರೀದಿ ಹುಮ್ಮಸ್ಸು.

ಸಿಂಹ
ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿದರೆ ನಿಮ್ಮ ಗುರಿ ಸಾಧಿಸಬಹುದು. ಮೊದಲಾಗಿ ನಿಮ್ಮ ಉದಾಸೀನತೆ ಬಿಡಬೇಕು. ಸೂಕ್ತವಾಗಿ ಕಾರ್ಯಾಚರಿಸಬೇಕು.

ಕನ್ಯಾ
ಮನಸ್ಸಿಗೆ ತೃಪ್ತಿ ನೀಡುವಂತಹ ಕಾರ್ಯ ಸಾಧಿಸುವಿರಿ. ಇದರಿಂದ ದೊಡ್ಡ ಚಿಂತೆಯೊಂದು ಪರಿಹಾರ. ಆಪ್ತ ಬಂಧುಗಳ ಭೇಟಿ, ಸಮಾಲೋಚನೆ.

ತುಲಾ
ಸಾಂಸಾರಿಕ ಸಮಸ್ಯೆ ಕಾಡಬಹುದು. ಅದನ್ನು ಸಕಾಲದಲ್ಲಿ ಪರಿಹರಿಸಲು ಪ್ರಯತ್ನಿಸಿ. ನಿಧಾನ ಮಾಡಿದಷ್ಟೂ ಅದು ಗಂಭೀರವಾದೀತು.

ವೃಶ್ಚಿಕ
ಸಾಂಸಾರಿಕ ಬದುಕಿನಲ್ಲಿ ಏರಿಳಿತ ಸಂಭವ. ಆಪ್ತೇಷ್ಟರ ಅಸಹಕಾರ. ನಿಮ್ಮ ಮಾತಿಗೆ ಬೆಲೆ ಸಿಗುತ್ತಿಲ್ಲ ಎಂಬ ಕೊರಗು ಕಾಡಬಹುದು. ಆರ್ಥಿಕ ಅಡಚಣೆ.

ಧನು
ನಿಮ್ಮ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸಿರಿ. ಇದರಿಂದ ಕೆಲಸದ ಒತ್ತಡ ನಿವಾರಿಸಬಹುದು. ಆಪ್ತೇಷ್ಟರ ಬೇಡಿಕೆ ಈಡೇರಿಸಿರಿ.

ಮಕರ
ಸಂಬಂಧದ ವಿಚಾರದಲ್ಲಿ ಎಚ್ಚರವಿರಲಿ. ಹದತಪ್ಪಿದ ಮಾತು ಅಥವಾ ವರ್ತನೆ ಸಂಬಂಧವನ್ನು ಕೆಡಿಸಬಹುದು. ಅದಕ್ಕೆ ಅವಕಾಶ ಕೊಡದಿರಿ. ಹೊಂದಾಣಿಕೆ ಮುಖ್ಯ.

ಕುಂಭ
ನಿಮ್ಮ ಮೇಲೆ ಇಂದು ಹಲವಾರು ಒತ್ತಡಗಳು ಹೇರಲ್ಪಡುತ್ತವೆ. ಇದರಿಂದಾಗಿ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಅಸಾಧ್ಯವಾಗುತ್ತದೆ.

ಮೀನ
ಮನೆಯವರ ಜತೆ ಭಿನ್ನಾಭಿಪ್ರಾಯ ಮೂಡಬಹುದು. ಅದನ್ನು ದೀರ್ಘಕಾಲ ಎಳೆಯದಿರಿ. ಬೇಗನೆ ಅದನ್ನು ಶಮನಗೊಳಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!