Monday, October 2, 2023

Latest Posts

ದಿನಭವಿಷ್ಯ| ನಿಮ್ಮ ಕ್ರಿಯಾಶೀಲತೆ ಇತರರಿಗೂ ಪ್ರೇರಣೆ ನೀಡಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಖಾಸಗಿ ವಿಚಾರದಲ್ಲಿ ಹೆಚ್ಚು ಒತ್ತಡ. ಕೌಟುಂಬಿಕ ಸಾಮರಸ್ಯ ಕಾಪಾಡಲು ಯತ್ನಿಸು ತ್ತೀರಿ. ಅದಕ್ಕೆ ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಬೇಕು.

ವೃಷಭ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಸಮತೋಲನ ಸಾಧಿಸಿ. ಮಹತ್ವದ ನಿರ್ಧಾರ ತಾಳುವುದಕ್ಕೆ,ಹೂಡಿಕೆಗೆ ಇಂದು ಸೂಕ್ತ ದಿನವಲ್ಲ.

ಮಿಥುನ
ನಿಮ್ಮ ಮನಸ್ಸನ್ನು ಮುಕ್ತವಾಗಿ ತೆರೆದಿಡಿ. ಭಾವನೆಗಳನ್ನು ಅದುಮಿಟ್ಟುಕೊಳ್ಳ ಬೇಡಿ. ಇತರರ ಸೂಕ್ತ ಸ್ಪಂದನೆ ದೊರಕುವುದು. ಆರ್ಥಿಕ ಸ್ಥಿತಿ ಸ್ಥಿರ.

ಕಟಕ
ನಿಮ್ಮ ಕ್ರಿಯಾಶೀಲತೆ  ಇತರರಿಗೂ ಪ್ರೇರಣೆ ನೀಡಲಿದೆ. ಅವರಿಂದ ಮೆಚ್ಚುಗೆ. ದೂರ ಪ್ರಯಾಣ ಸಾಧ್ಯತೆ. ಸೊತ್ತಿನ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ.

ಸಿಂಹ
ನಿಮ್ಮ ವಿರೋಧಿಗಳು ನಿಮ್ಮನ್ನು ಮಣಿಸಲು ಯತ್ನಿಸುತ್ತಾರೆ. ಆದರೆ ಅಂತಿಮವಾಗಿ ನಿಮ್ಮದೇ ಮೇಲುಗೈ. ಆರೋಗ್ಯದಲ್ಲಿ ಏರುಪೇರು ಸಂಭವ.

ಕನ್ಯಾ
ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಕ್ಲಿಷ್ಟಕರ ಪರಿಸ್ಥಿತಿಗೆ ಸಿಲುಕುತ್ತೀರಿ. ಕುಟುಂಬಸ್ಥರ ಜತೆ ಸಣ್ಣಪುಟ್ಟ ವಾಗ್ವಾದ ಸಂಭವಿಸಬಹುದು.

ತುಲಾ
ಸಂತೋಷದ ದಿನ. ಮನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ಸಹಕಾರದ ವಾತಾವರಣ. ಕೌಟುಂಬಿಕ ಆವಶ್ಯಕತೆಗಳು ಈಡೇರುತ್ತವೆ.

ವೃಶ್ಚಿಕ
ಅನವಶ್ಯ ಖರ್ಚುವೆಚ್ಚ ಬರಬಹುದು. ಮಿತಿಯಿಂದ ವ್ಯಯಿಸಿ. ನಿಮ್ಮ ಆರೋಗ್ಯದ ಕುರಿತಂತೆ ಎಚ್ಚರಿಕೆಯಿರಲಿ. ಸಂಬಂಧ ಸ್ಥಿರ.

ಧನು
ಉದ್ಯಮದಲ್ಲಿ, ವ್ಯಾಪಾರದಲ್ಲಿ ಪ್ರಗತಿ. ಆರ್ಥಿಕ ಕೊರತೆ ನೀಗಲಿದೆ. ಹೊಸ ಸಂಪನ್ಮೂಲ ಒದಗಿ ಬರಲಿದೆ. ಕೌಟುಂಬಿಕ ಸಹಕಾರ.

ಮಕರ
ಮನಸ್ಸಿಗೆ ಬರುವುದ ನ್ನೆಲ್ಲ ಹೊರಗೆ ಹಾಕಬೇಡಿ. ಅದು ನಿಮ್ಮನ್ನು ಇಕ್ಕಟ್ಟಿಗೆ ನೂಕ ಬಹುದು. ವದಂತಿಗಳಿಗೆ ಕಿವಿ ಕೊಡಬೇಡಿ. ಸಂಯಮವಿರಲಿ.

ಕುಂಭ
ಬದಲಾಗುವ ಹವಾಮಾನವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ತುಸು ಎಚ್ಚರಿಕೆ ವಹಿಸಿ. ಕೌಟುಂಬಿಕ ಒತ್ತಡ.

ಮೀನ
ನಿಮಗಿಂದು ಉದಾ ಸೀನತೆ ಕಾಡಬಹುದು.  ಆರ್ಥಿಕ ವಿಷಯಕ್ಕೆ ಸಂಬಂಧಿಸಿ ಜಾಗರೂಕತೆಯಿಂದ ವರ್ತಿಸಿ. ಇಲ್ಲವಾದರೆ ನಷ್ಟವಾದೀತು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!