ದಿನಭವಿಷ್ಯ| ಯೋಚಿಸಿ ಕಾರ್ಯವೆಸಗಿ, ಮಾತು ನಿಯಂತ್ರಣದಲ್ಲಿರಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕೆಲಸ ಆರಂಭಿಸುವ ಮೊದಲೇ ‘ಇದು ಸಫಲವಾಗದು’ ಎಂಬ ಮಾನಸಿಕತೆ ಬೇಡ. ಕಠಿಣ ಕೆಲಸವೂ ಸಫಲ ವಾಗುವ ಅದೃಷ್ಟ
ಇಂದು ನಿಮಗಿದೆ.

ವೃಷಭ
ನಿಮಗೆ ಅಚ್ಚರಿಯೆನಿಸುವ ಬೆಳವಣಿಗೆ ಸಂಭವಿಸುವುದು. ಕೆಲವರ ವರ್ತನೆಯೂ ಅನಿರೀಕ್ಷಿತ ಎನಿಸುವುದು. ಶಾಪಿಂಗ್ ಖರ್ಚು ಹೆಚ್ಚು.

ಮಿಥುನ
ಕುಟುಂಬ ಸದಸ್ಯರ ಜತೆಗಿನ ಮುಕ್ತ ಮಾತುಕತೆಯು ಭಿನ್ನಾಭಿಪ್ರಾಯ ನಿವಾರಿಸುವುದು. ಸೌಹಾರ್ದತೆ ವೃದ್ಧಿ. ಆರೋಗ್ಯ ಸ್ಥಿರ.

ಕಟಕ
ಕೌಟುಂಬಿಕ ಉದ್ದೇಶವೊಂದು ಇಂದು ಈಡೇರುವುದು. ಇದರಿಂದ ಬಾಂಧವ್ಯ ವೃದ್ಧಿಯಾಗಲಿದೆ. ವಸ್ತು ಖರೀದಿಯ ಉತ್ಸಾಹ, ಹೆಚ್ಚು ಖರ್ಚು.

ಸಿಂಹ
ವೃತ್ತಿಯಲ್ಲಿ ತೃಪ್ತಿಕರ ದಿನ. ಮಾಡಿದ ಕಾರ್ಯದಲ್ಲಿ ಸಂತೋಷ. ಆರೋಗ್ಯ ವೃದ್ಧಿ. ಸಣ್ಣಪುಟ್ಟ ಸಮಸ್ಯೆಗಳು ಇಂದು ನಿಮ್ಮ ಮನಸ್ಸು ಕೆಡಿಸಲಾರವು.

ಕನ್ಯಾ
ಯಾವುದೇ ಕಾರ್ಯ ಇಂದು ಸಫಲತೆ ಕಾಣುವುದು. ಅದು ವೃತ್ತಿಗೆ ಸಂಬಂಧಿಸಿದ್ದು ಆಗಿರಬಹುದು ಅಥವಾ ಖಾಸಗಿಯೂ ಆಗಿರಬಹುದು.

ತುಲಾ
ಆಪ್ತೇಷ್ಟರ ಜತೆ ಹೆಚ್ಚು ಸಮಯ ಕಳೆಯುವ ಅವಕಾಶ. ಕೌಟುಂಬಿಕ ಬಿಕ್ಕಟ್ಟು ಶಮನ. ಹಣದ ವಿಷಯದಲ್ಲಿ ಮೂಡಿದ್ದ ಚಿಂತೆಯೂ ಪರಿಹಾರ ಕಾಣುವುದು.

ವೃಶ್ಚಿಕ
ಯಾವ ಗುರಿ ಇರಿಸಿಕೊಂಡಿದ್ದೀರೋ ಅದು ಸಾಧಿತವಾಗುವ ಲಕ್ಷಣ ತೋರುವುದು. ಇಂದಿನದು ನಿಮ್ಮ ಪಾಲಿಗೆ ಫಲಪ್ರದ ಮತ್ತು ಆನಂದದ ದಿವಸ.

ಧನು
ಸಂಬಂಧದಲ್ಲಿ ಸಣ್ಣಪುಟ್ಟ ಕಿರಿಕಿರಿ ಕಾಣಿಸಿಕೊಂಡೀತು. ಅತಿರೇಕದ ಪ್ರತಿಕ್ರಿಯೆ ತೋರದಿರಿ. ಯೋಚಿಸಿ ಕಾರ್ಯವೆಸಗಿ. ಮಾತು ನಿಯಂತ್ರಣದಲ್ಲಿರಲಿ.

ಮಕರ
ಕೆಲವರ ಸಂಗ ನಿಮಗಿಂದು ಹೆಚ್ಚು ಸಂತೋಷ ತರುತ್ತದೆ. ಚಿಂತೆಗಳನ್ನು ಮರೆಯುವಿರಿ. ಅನಿರೀಕ್ಷಿತ ಧನಲಾಭದ ಸಂಕೇತವಿದೆ.

ಕುಂಭ
ಆತ್ಮವಿಶ್ವಾಸ ಹೆಚ್ಚಿಸುವ ಪ್ರಸಂಗ ಸಂಭವಿಸುವುದು. ಆರಂಭಿಕ ಕಷ್ಟಗಳಿಗೆ ಹಿಂಜರಿಯಬೇಡಿ. ಮುಂದೆ ನಿಮಗೆ ಉತ್ತಮ ಫಲ ಕಾದಿದೆ.

ಮೀನ
ಪ್ರತಿದಿನ ಹೊಸ ಆಯ್ಕೆ ಯನ್ನು ಹೊತ್ತು ತರು
ವುದು. ಇತರರ ಭಾವನೆಗಳನ್ನು ಅರ್ಥ ಮಾಡಿಕೊಂಡರೆ ನಿಮ್ಮ
ಸಮಸ್ಯೆ ಪರಿಹಾರ ಕಾಣುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!