Saturday, April 1, 2023

Latest Posts

ದಿನಭವಿಷ್ಯ| ಕೆಲವರನ್ನು ನಿರ್ಲಕ್ಷಿಸುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ವಾಗ್ವಾದದಲ್ಲಿ ಇಂದು ಪಾಲ್ಗೊಳ್ಳದಿರಿ. ಆ ಮೂಲಕ ಸಂತೋಷ ಹಾಳು ಮಾಡದಿರಿ. ಎಲ್ಲವನ್ನೂ ಸಹಿಸಿಕೊಂಡು ಹೋಗುವುದುತ್ತಮ.

ವೃಷಭ
ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುವಿರಿ. ಆಪ್ತರಿಂದ ಉತ್ತಮ ಸಹಕಾರ. ಖರ್ಚು ಹೆಚ್ಚಳ, ಆದರೆ ಅದು ಬೇಸರ ತಾರದು.

ಮಿಥುನ
ಟೀಕೆಗಳನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಿ. ಆ ಮೂಲಕ ತಪ್ಪುಗಳನ್ನು ತಿದ್ದಿಕೊಳ್ಳಿ. ಕುಟುಂಬಸ್ಥರ ಜತೆ ಆತ್ಮೀಯ ಕಾಲಕ್ಷೇಪ.

ಕಟಕ
ಆಪ್ತರೊಂದಿಗೆ ಕೂಡಿ ಕಳೆಯುವ ಅವಕಾಶ. ಅವರ ಸಂಗದಲ್ಲಿ ಸಂತೋಷ ಪಡುವಿರಿ. ಕೆಲವು ವಿಷಯಗಳು ಕಿರಿಕಿರಿ ಎನಿಸಿದರೂ ಅದನ್ನು ಸಹಿಸಿಕೊಳ್ಳಿ.

ಸಿಂಹ
ಕೌಟುಂಬಿಕ ಸಂತೋಷ. ಕುಟುಂಬಸ್ಥರ ಜತೆಗೆ ಆತ್ಮೀಯ ಸಮ್ಮಿಲನ. ಬಂಧುಗಳ ಭೇಟಿ ಕುಶಿ ತರಲಿದೆ. ಹಣಕಾಸು ಪರಿಸ್ಥಿತಿ ತೃಪ್ತಿಕರ ಎನಿಸುವುದು.

ಕನ್ಯಾ
ಕೆಲಸದ ಒತ್ತಡವನ್ನು ಮರೆತು ಇಂದು ಸಂಪೂರ್ಣವಾಗಿ ಕೌಟುಂಬಿಕ ಸಂತೋಷದಲ್ಲಿ ಪಾಲ್ಗೊಳ್ಳುವಿರಿ. ಬಂಧುಗಳ ಸಹಕಾರ.

ತುಲಾ
ಬೇರೆಯವರ ಸ್ವಭಾವದ ಕುರಿತಂತೆ ಅತಿಯಾಗಿ ತಲೆಕೆಡಿಸಿಕೊಳ್ಳಲು ಹೋಗಬೇಡಿ. ಕೆಲವರನ್ನು ನಿರ್ಲಕ್ಷಿಸುವುದು ಒಳ್ಳೆಯದು.

ವೃಶ್ಚಿಕ
ಉತ್ತಮ ಸಂವಹನ ಸಾಧಿಸುವಿರಿ. ಹಾಗಾಗಿ ಎಲ್ಲರೊಡನೆ ಉತ್ತಮ ಹೊಂದಾಣಿಕೆ ಸಾಧ್ಯ. ಆತ್ಮೀಯ ಮಾತುಕತೆ, ಸಂಭ್ರಮಾಚರಣೆ ಕುಶಿ ಹೆಚ್ಚಿಸುತ್ತದೆ.

ಧನು
ಆತ್ಮೀಯರ ಜತೆಗಿನ ಸಂಬಂಧವು ಪ್ರಮುಖ ಘಟ್ಟ ತಲುಪುವುದು. ಅವರ ಭಾವನೆ ಅರ್ಥ ಮಾಡಿಕೊಂಡು ವ್ಯವಹರಿಸಿ. ಅದರಿಂದ ನೆಮ್ಮದಿ ಸಾಧ್ಯ.

ಮಕರ
ಹಳೆಯ ತಪ್ಪುಗಳನ್ನು ನೆನಪಿಸುತ್ತಾ ಕೊರಗಬೇಡಿ. ಅದನ್ನು ಮರೆತು ಭವಿಷ್ಯಕ್ಕೆ ಹೆಚ್ಚು ಗಮನ ಕೊಡಿ. ಕಾರ್ಯದಲ್ಲಿ ಸೂಕ್ತ ಯೋಜನೆ ಇರಲಿ.

ಕುಂಭ
ನಿಮ್ಮ ಗುರಿ ಸಾಧನೆಗೆ ಹೆಚ್ಚು ಆದ್ಯತೆ ಕೊಡಿ. ಈ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ನಿಮ್ಮ ಅವಕಾಶವನ್ನು ಇತರರು ಕಸಿದುಕೊಳ್ಳದಂತೆ ನೋಡಿಕೊಳ್ಳಿ.

ಮೀನ
ಸಹನೆಯನ್ನು ಕಾಯ್ದುಕೊಳ್ಳಿ. ಆ ಮೂಲಕ ಮನಸ್ಸನ್ನು ಶಾಂತಿಯಿಂದ ಇಟ್ಟುಕೊಳ್ಳಿ. ಅಸಹನೀಯ ವಿಷಯಗಳನ್ನು ಬದಿಗೆ ಸರಿಸಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!