ದಿನಭವಿಷ್ಯ| ಹೊಸ ವರ್ಷದ ದಿನ ನಿಮ್ಮ ಜೀವನದಲ್ಲಿರಲಿವೆ ಮಧುರ ಕ್ಷಣಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಭವಿಷ್ಯದ ಬಗ್ಗೆ ಚಿಂತಿಸುತ್ತಾ ಕೂರಬೇಡಿ. ವರ್ತಮಾನವನ್ನು ಸುಂದರಗೊಳಿಸಲು ಯತ್ನಿಸಿ. ಆಪ್ತೇಷ್ಠರ ಜತೆ ಸಂತೋಷದ ಕಾಲಕ್ಷೇಪ. ಮಿತ್ರರ ಭೇಟಿ.

ವೃಷಭ
ಖಾಸಗಿ ಬದುಕಿನಲ್ಲಿ ಸಂತೋಷದ ಬೆಳವಣಿಗೆ. ನಿಮಗೆ ಪೂರಕವಾದ ಬೆಳವಣಿಗೆ. ಬಂಧುಮಿತ್ರರ ಭೇಟಿ. ಹಣ ಹೆಚ್ಚು ಖರ್ಚಾಗಬಹುದು.

ಮಿಥುನ
ಹೆಚ್ಚು ಉತ್ಸಾಹದ ದಿನ. ನಿಮ್ಮ ಕ್ರಿಯಾಶೀಲತೆ ಎಲ್ಲರಿಗೂ ತಿಳಿದುಬರುವುದು. ಅದರ ನಡುವೆಯೇ ಟೀಕೆಯನ್ನೂ ಎದುರಿಸುವಿರಿ.

ಕಟಕ
ಅಲ್ಪಾವಧಿ ಗುರಿ ಈಡೇರಿಸುವಿರಿ. ಕೆಲಸದ ಒತ್ತಡ ಹೆಚ್ಚಿದರೂ ನಿಮಗಿಂದು ಭಾರವೆನಿಸದು. ಅಧಿಕ ವ್ಯಯವಾದರೂ, ಸಂತೋಷ ಪಡುವಿರಿ.

ಸಿಂಹ
ಯಾವುದೇ ಕಾರ್ಯವಾದರೂ ನೀವಿಂದು ಗೆಲುವಿನ ಹಾದಿ ಹಿಡಿಯುವಿರಿ.ದೊಡ್ಡ ಸವಾಲನ್ನು ಎದುರಿಸಲೂ ಹಿಂಜರಿಕೆ ತೋರದಿರಿ.

ಕನ್ಯಾ
ಕೆಲಸದಲ್ಲಿ ಯಶಸ್ಸು. ಹೊಸ ವ್ಯವಹಾರಕ್ಕೆ ಕಾಲ ಪಕ್ವವಿದೆ. ಆದರೆ ಯಾರ ಜತೆಗೂ ಚರ್ಚೆಗೆ ಮುಂದಾಗದಿರಿ.ಅದರಿಂದ ನಿಮ್ಮ ನೆಮ್ಮದಿ ಹಾಳಾದೀತು.

ತುಲಾ
ಸಣ್ಣ ವಿಷಯಗಳಿಗೆ ಹೆಚ್ಚೆಚ್ಚು ಚಿಂತಿಸುವಿರಿ. ಅದನ್ನು ಬಿಟ್ಟುಬಿಡಿ. ಇದ್ದುದರಲ್ಲೆ ಸಂತೋಷ ಕಾಣಲು ಯತ್ನಿಸಿ. ಶಾಪಿಂಗ್, ಖರೀದಿ ಉತ್ಸಾಹ.

ವೃಶ್ಚಿಕ
ಕುಟುಂಬ ಸದಸ್ಯರ ಜತೆ ಕಾಲ ಕಳೆಯುವ ಅವಕಾಶ. ಅದರ ಮಧ್ಯೆಯೇ ಭಿನ್ನಾಭಿಪ್ರಾಯ ಹುಟ್ಟಬಹುದು. ಸಹನೆ ಕಳಕೊಳ್ಳದಿರಿ.

ಧನು
ಖಾಸಗಿ ಬದುಕಿನಲ್ಲಿ ಹೆಚ್ಚು ಹೊಣೆಗಾರಿಕೆ. ಇತರರನ್ನು ಸಂತೋಷಪಡಿಸಲು ನಿಮ್ಮ ಶ್ರಮ ಹಾಕುವಿರಿ. ಸಂಜೆ ವೇಳೆಗೆ ಉತ್ಸಾಹಭಂಗ.

ಮಕರ
ಇಂದು ನಿಮ್ಮ ಅತಿ ಉತ್ಸಾಹವು ನಿರುತ್ಸಾಹಕ್ಕೆ ಬದಲಾಗಲೂಬಹುದು.  ಕೆಲವರ ವರ್ತನೆ ನಿರಾಶೆ ತರುವುದು. ಅವರ ಮೇಲೆ ಅವಲಂಬನೆ ಬಿಟ್ಟುಬಿಡಿರಿ.

ಕುಂಭ
ಭಾವುಕ ವಿಷಯದಲ್ಲಿ ಅತಿರೇಕದಿಂದ ವರ್ತಿಸುವ ಸಂಭವ. ಇದರಿಂದ ಇತರರ ಮನಸ್ಸಿಗೂ ನೋವು ತರುವಿರಿ. ಸಂಯಮ ಒಳ್ಳೆಯದು.

ಮೀನ
ಎಲ್ಲವನ್ನೂ ಅತಿಯಾಗಿ ಮಾಡುವುದು ನಿಮ್ಮ ಸ್ವಭಾವ. ಸ್ವಲ್ಪ ಮಿತಿ ಹೇರುವುದು ಒಳಿತು. ದೂರಸಂಬಂಧದಲ್ಲಿ ಒಡಕು ಮೂಡೀತು. ತಾಳ್ಮೆಯಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!