ದಿನಭವಿಷ್ಯ| ಗೋಮುಖ ವ್ಯಾಘ್ರಗಳ ಕುರಿತು ಎಚ್ಚರದಿಂದಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಮೇಷ
ಗೋಮುಖ ವ್ಯಾಘ್ರಗಳ ಕುರಿತು ಎಚ್ಚರದಿಂದಿರಿ. ನಯವಾಗಿ ಮಾತನಾಡಿ ನಿಮ್ಮ ಬೆನ್ನ ಹಿಂದೆ ಇರಿಯುತ್ತಾರೆ. ನಿಮ್ಮ ಕುಟುಂಬಕ್ಕೆ ಅವರಿಂದ ಸಮಸ್ಯೆಯಿದೆ.

ವೃಷಭ
ವೃತ್ತಿ ಕ್ಷೇತ್ರದಲ್ಲಿ ಜಗಳದಿಂದ ದೂರವಿರಿ. ನಿಮ್ಮ ಸಾಧನೆಗೆ ನೀವೇ ಮುಂದಾಗಬೇಕು. ಇತರರನ್ನು ಅವಲಂಬಿಸದಿರಿ. ಆರ್ಥಿಕ ವ್ಯಯ.

ಮಿಥುನ
ಭಾವನಾತ್ಮಕತೆ ದೂರವಿಟ್ಟು ಪ್ರಾಕ್ಟಿಕಲ್ ಆಗಿ ಚಿಂತಿಸಿ. ಇಲ್ಲವಾದರೆ ಮಾನಸಿಕ ನೋವು ತಿನ್ನುವಿರಿ. ಆಪ್ತ ಸಂಬಂಧ ದಲ್ಲಿ ಬಿರುಕು ಸಂಭವ.

ಕಟಕ
ಮಾನಸಿಕ ತುಮುಲ. ಕ್ಲಿಷ್ಟಕರ ವಿಚಾರದಲ್ಲಿ ನಿಮ್ಮ ಅಂತಃಸಾಕ್ಷಿಯ ಪ್ರಕಾರ ನಡಕೊಳ್ಳಿ. ಅಂತಿಮವಾಗಿ ನಿಮಗೆ ಅದರಿಂದ ಒಳಿತೇ ಆಗುವುದು.

ಸಿಂಹ
ನಿಮ್ಮ ಮೇಲೆ ದೊಡ್ಡ ಹೊಣೆಗಾರಿಕೆ ಹೇರಲ್ಪಡುವುದು. ಅದನ್ನು ನಿಭಾಯಿಸು ವುದು ಅನಿವಾರ್ಯ. ಮಾನಸಿಕವಾಗಿ ತುಂಬಾ ಕುಗ್ಗುವಿರಿ.

ಕನ್ಯಾ
ಅವಿವಾಹಿತರಿಗೆ ವೈವಾಹಿಕ ಸಂಬಂಧ ಕೂಡಿಬಂದೀತು. ನಿಮ್ಮ ಶೋಧ ಫಲ ಕಾಣಬಹುದು. ಆರ್ಥಿಕ ಒತ್ತಡ ಹೆಚ್ಚು, ಖರ್ಚು ಅಧಿಕ.

ತುಲಾ
ಕಷ್ಟದ ದಿನ. ಕಾರ್ಯದಲ್ಲಿ ಅಪಯಶಸ್ಸು. ಮಾನಸಿಕ ತೊಳಲಾಟ. ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಖರ್ಚು ಮಾಡಿರಿ.

ವೃಶ್ಚಿಕ
ವೈಯಕ್ತಿಕ ಬದುಕಿನಲ್ಲಿ ಕೆಲವು ಬದಲಾವಣೆ ಆದೀತು. ಅದು ಮಾನಸಿಕ ಬೇಗುದಿಗೂ ಕಾರಣವಾದೀತು. ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ.

ಧನು
ವೃತ್ತಿ ಕ್ಷೇತ್ರದಲ್ಲಿ ವದಂತಿಗಳಿಂದ ದೂರವಿರಿ. ಅವು ನಿಮಗೆ ಹಾನಿ ಮಾಡಬಹುದು. ಮನೆಯ ಸದಸ್ಯರ ಜತೆ ಸಹನೆಯಿಂದ ವರ್ತಿಸಿರಿ.  ಸಂಘರ್ಷ ಬೇಡ.

ಮಕರ
ಮಾತುಕತೆಯಿಂದ ವೈಮನಸ್ಸು ಪರಿಹಾರ ಸುಲಭ. ಇದನ್ನು ನೀವು ಅರಿಯುವುದು ಒಳಿತು. ಸಂಘರ್ಷದ ನೀತಿ ಮುಂದುವರಿಸದಿರಿ. ಭಾವುಕ ಸನ್ನಿವೇಶ.

ಕುಂಭ
ಚಿಪ್ಪಿನಿಂದ ಹೊರಬನ್ನಿ. ಹೊರಜಗತ್ತಿನ ಜತೆ ಹೆಚ್ಚು ವ್ಯವಹರಿಸಿ. ಇದು  ಗ್ರಹಗತಿ ನಿಮಗೆ ಸೂಚಿಸುತ್ತಿರುವ ಸಲಹೆ. ಅಂತರ್ಮುಖಿಯಾಗಿ ದುಃಖಿಸುತ್ತಿರಬೇಡಿ.

ಮೀನ
ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು. ಮುಖ್ಯವಾಗಿ ಆರೋಗ್ಯಕರ ಆಹಾರವನ್ನೆ ಸೇವಿಸಿರಿ.  ಕೌಟುಂಬಿಕ ಪರಿಸರ ಸೌಹಾರ್ದದಾಯಕ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!