ದಿನಭವಿಷ್ಯ| ಸಮಸ್ಯೆಗಳ ಬಗ್ಗೆಯೇ ಚಿಂತಿಸುತ್ತಾ ಕೂರದಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೇಷ
ಸಮಸ್ಯೆಗಳ ಬಗ್ಗೆಯೇ ಚಿಂತಿಸುತ್ತಾ ಕೂರದಿರಿ. ಅದರಿಂದ ನೆಮ್ಮದಿ ಹಾಳೇ ಹೊರತು ಪರಿಹಾರ ಸಿಗದು. ಗುಣಾತ್ಮಕ ವಿಚಾರ ಕೂಡಾ ಗಮನಿಸಿ.

ವೃಷಭ
ಹೊರಗೆ ಬದಲಾವಣೆ ಬಯಸುವ ಬದಲಾಗಿ ಮೊದಲು ನಿಮ್ಮೊಳಗೆ ಬದಲಾವಣೆ ಮಾಡಿಕೊಳ್ಳಿ. ಕೌಟುಂಬಿಕ ಬದುಕಿನಲ್ಲಿ ಏರುಪೇರು ಸಂಭವ.

ಮಿಥುನ
ಆರೋಗ್ಯಕ್ಕೆ ಸಂಬಂಧಿಸಿದ ಚಿಂತೆ ಪರಿಹಾರ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಆರ್ಥಿಕ ಸಮಸ್ಯೆಗೆ ಕೂಡಾ ಪರಿಹಾರ ಸಿಗುವುದು. ಬಂಧುಗಳ ಭೇಟಿ.

ಕಟಕ
ನಿಮ್ಮ ಕೆಲಸದಲ್ಲಿ ಹೆಚ್ಚಿನ ಸುಧಾರಣೆ ಕಾಣುವುದು. ಆಪ್ತರ ಜತೆ ಅಭಿಪ್ರಾಯ ಹಂಚಿಕೆ. ಕಠಿಣ ಕೆಲಸವೊಂದು ಕೈಗೂಡುವುದು. ಅಧಿಕ ಧನವ್ಯಯ.

ಸಿಂಹ
ಪ್ರಮುಖ ವಿಷಯದಲ್ಲಿ ಸಮಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಏಕಪಕ್ಷೀಯ ನಿರ್ಧಾರ ನಿಮಗೆ ಪ್ರತಿಕೂಲ ಪರಿಣಾಮ ತಂದೀತು. ಕೌಟುಂಬಿಕ ಸಂಘರ್ಷ.

ಕನ್ಯಾ
ಕುಟುಂಬ ಸದಸ್ಯರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಅದು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ವಾದದಿಂದ ದೂರ ಉಳಿಯುವುದು ದಾರಿ.

ತುಲಾ
ನಿಮ್ಮ ಬದುಕಲ್ಲಿ ಮಹತ್ವದ ಬದಲಾವಣೆ ಉಂಟಾದೀತು. ಅದು ಪೂರಕವೂ ಆಗಬಹುದು, ಅಥವಾ ಪ್ರತಿಕೂಲವೂ ಆಗಬಹುದು.

ವೃಶ್ಚಿಕ
ಇತರರಿಗೆ ನೀಡುವ ಆರ್ಥಿಕ ನೆರವು ನಿಮಗೆ ಹಾನಿ ತಂದೀತು. ಹಾಗಾಗಿ ವಿವೇಚನೆಯಿಂದ ಮುಂದಿನ ಹೆಜ್ಜೆಯಿಡಿ. ಕೌಟುಂಬಿಕ ಭಿನ್ನಮತ.

ಧನು
ನೀವೀಗ ಕೈಗೊಂಡಿರುವ ಕಾರ್ಯವು ಉತ್ತಮ ಫಲ ನೀಡುತ್ತದೆ. ಹಾಗಾಗಿ ಈ ಕುರಿತು ಚಿಂತೆ ಬೇಡ. ಆಪ್ತೇಷ್ಟರ ಹಿತಾಸಕ್ತಿ ಉತ್ತಮಗೊಳ್ಳುವುದು.

ಮಕರ
ಕುಟುಂಬವು ನಿಮ್ಮ ಆದ್ಯತೆಯ ಕೇಂದ್ರ. ಅವರ ಇಷ್ಟಾರ್ಥ ಪೂರೈಸಲು ಹೆಚ್ಚಿನ ಗಮನ ಕೊಡುವಿರಿ. ಯಾವುದೇ ಕೆಲಸ ಸಮಯದಲ್ಲಿ ಮುಗಿಸಿ.

ಕುಂಭ
ಎಲ್ಲವೂ ಸರಿಯಾಗಿದ್ದರೂ ಯಾವುದೋ ಕೊರತೆ ನಿಮ್ಮನ್ನು ಬಾಧಿಸುವುದು. ಮನಸ್ಸಿನಲ್ಲಿ ಅಸಂತೋಷ. ಅಧ್ಯಾತ್ಮದತ್ತ ಮನಸ್ಸು.

ಮೀನ
ದಿನವಿಡೀ ಉಲ್ಲಾಸ. ಕಾರ್ಯದಲ್ಲಿ ಹುರುಪು. ಬಂಧುಮಿತ್ರರ ಭೇಟಿ ಸಂಭವ. ಆಪ್ತರಿಂದ ನಿಮಗೆ ಅನುಕೂಲಕರ ಸುದ್ದಿ ಕೇಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!