ದಿನಭವಿಷ್ಯ| ಮಕರ ಸಂಕ್ರಾಂತಿಯಂದು ಹೇಗಿದೆ ನಿಮ್ಮ ರಾಶಿ ಭವಿಷ್ಯ…?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಸಮಾನಮನಸ್ಕರ ಜತೆ  ಇಂದು ಸಂವಾದ. ವಿಚಾರ ವಿನಿಮಯ. ಆಪ್ತರೊಂದಿಗಿನ ಸಂಬಂಧದಲ್ಲಿ ಸುಧಾರಣೆ. ಕೌಟುಂಬಿಕ ಸಾಮರಸ್ಯ.

ವೃಷಭ
ಇಂದು ನಿಮಗೆ ಪೂರಕ ದಿನವಲ್ಲ. ಏನೇ ಕೆಲಸ ಮಾಡಿದರೂ ಸಮಸ್ಯೆ ತಲೆದೋರುವುದು. ಪ್ರಮುಖ ಕಾರ್‍ಯ ಮಾಡಲು ಇಂದು ಹೋಗದಿರಿ.

ಮಿಥುನ
ಕೆಲವು ಕಾರಣಗಳಿಂದ ನಿಮ್ಮ ಮನಸ್ಸು ಇಂದು ಗೊಂದಲ ಭರಿತ. ಉದ್ವಿಗ್ನತೆ ಕಾಡುತ್ತದೆ. ಯಾರೊಂದಿಗೂ ಹೇಳಿಕೊಳ್ಳಲಾಗದ ಪೇಚಾಟ.

ಕಟಕ
ಇಂದಿನ ದಿನ ನಿಧಾನವಾಗಿ ಸಾಗುವುದು. ಕೆಲಸ ಈಡೇರುವುದಾದರೂ ಅದು ನಿಧಾನ ಗತಿಯಲ್ಲಿ. ಹಾಗಾಗಿ ತಾಳ್ಮೆ ಅತ್ಯಗತ್ಯ.

ಸಿಂಹ
ಎಲ್ಲಾ ವಿಚಾರಗಳಲ್ಲಿ ಇತರರ ಸಲಹೆ ಕೇಳಲು ಹೋಗದಿರಿ. ಇದರಿಂದ ನಿಮಗೆ ಗೊಂದಲವೇ ಹೆಚ್ಚು. ನಿಮ್ಮದೇ ಸ್ವಂತ ನಿರ್ಧಾರ ತಾಳುವುದು ಉತ್ತಮ.

ಕನ್ಯಾ
ವೃತ್ತಿಯ ಮೇಲೆ ಖಾಸಗಿ ಬದುಕು ಪರಿಣಾಮ ಬೀರುವುದು. ಖಾಸಗಿ ಸಮಸ್ಯೆಗಳು ನಿಮ್ಮ ಉತ್ಸಾಹ ಕುಂದಿಸುವುದು.

ತುಲಾ
ಬಾಕಿ ಇರುವ ಕಾನೂನು ತೊಡಕು ಇಂದು ಪರಿಹಾರ ಕಂಡೀತು. ವೃತ್ತಿಯಲ್ಲಿನ ಒತ್ತಡಗಳು ಕಡಿಮೆಯಾಗುತ್ತವೆ. ನೆಮ್ಮದಿಯ ದಿನ.

ವೃಶ್ಚಿಕ
ಕೆಲಸಗಳಲ್ಲಿ ಪರಿಪೂರ್ಣತೆಯನ್ನು ನೀವು ಬಯಸುವಿರಿ. ಕೆಲವರ ಕಾರ್ಯವೈಖರಿ ಬೇಸರ ಹುಟ್ಟಿಸುವುದು. ಹೊಂದಿಕೊಂಡು ನಡೆಯಿರಿ.

ಧನು
ನಿಮ್ಮ ಕೆಲಸದಲ್ಲಿ ಹಠಾತ್ ವಿಘ್ನ ತಲೆದೋರಬಹುದು. ಅದನ್ನು ಜಾಣ್ಮೆಯಿಂದ ಪರಿಹರಿಸಿಕೊಳ್ಳಿ. ಪ್ರೀತಿಯಲ್ಲಿ ಮಹತ್ವದ ಬೆಳವಣಿಗೆ.

ಮಕರ
ಅಧಿಕ ಹೊಣೆಗಾರಿಕೆ ನಿಮ್ಮ ಹೆಗಲೇರುವುದು. ಅದನ್ನು ನಿಭಾಯಿಸಲು  ಸಿದ್ದರಾಗಿ. ಇತರರ ನೆರವಿಗೆ ಕಾಯುತ್ತಾ ಕೂರಬೇಡಿ. ಆರ್ಥಿಕ ಒತ್ತಡ ಅಧಿಕ.

ಕುಂಭ
ನಿಮ್ಮ ಸಮರ್ಥ ಕಾರ್‍ಯ ನಿರ್ವಹಣೆ ಮೆಚ್ಚುಗೆ ಪಾತ್ರವಾಗುವುದು. ಕೌಟುಂಬಿಕ ಸಮಸ್ಯೆಯೊಂದರ  ಪರಿಹಾರಕ್ಕೆ ಬಂಧುಗಳ ನೆರವು ಲಭ್ಯ.

ಮೀನ
ಗ್ರಹಗತಿ ನಿಮಗಿಂದು ಪೂರಕವಾಗಿಲ್ಲ.  ಹೊಸ ಕಾರ್‍ಯ ಆರಂಭಿಸಬೇಡಿ. ಉದ್ಯಮಿಗಳು ವ್ಯವಹಾರದಲ್ಲಿ ಜಾಗ್ರತೆ ವಹಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!