ದಿನಭವಿಷ್ಯ| ಸವಾಲಿನ ದಿನ, ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಸವಾಲಿನ ದಿನ. ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ. ಅದಕ್ಕಾಗಿ ಇತರರನ್ನು ಅವಲಂಬಿಸದಿರಿ. ಖರ್ಚು ಹೆಚ್ಚುವುದು. ಮಿತವ್ಯಯ ಸಾಧಿಸಿ.

ವೃಷಭ
ಶೀತ ಪ್ರಕೃತಿಯವರು ಹೆಚ್ಚು ಎಚ್ಚರ ವಹಿಸಿ. ಆರೋಗ್ಯ ಕೆಡುವ ಸಂಭವವಿದೆ. ಖರ್ಚು ನಿಯಂತ್ರಣ ಅವಶ್ಯ. ಸಂಬಂಧದಲ್ಲಿ ಸುಧಾರಣೆ.

ಮಿಥುನ
ಹಣಕಾಸು ವಿಚಾರಕ್ಕೆ ಸಂಬಂಧಿಸಿ ನಿಮಗೆ ಪೂರಕ ಬೆಳವಣಿಗೆ. ಸಂಬಂಧದಲ್ಲಿ ಸಣ್ಣ ಅಸಮಾಧಾನ ಮೊಳೆತರೂ ಅದನ್ನು ಬೇಗನೆ ನಿವಾರಿಸಿ.

ಕಟಕ
ಎಲ್ಲರ ಜತೆ ಹೊಂದಾಣಿಕೆಯಿಂದ ನಡಕೊಳ್ಳಿ. ಅನವಶ್ಯ ವಾಗ್ವಾದಕ್ಕೆ ಆಸ್ಪದ ಕಲ್ಪಿಸದಿರಿ. ಸಹನೆ ಕೆಣಕುವ ಪ್ರಸಂಗ ಉಂಟಾದೀತು.

ಸಿಂಹ
ಮಾತಿನ ಮೇಲೆ ನಿಯಂತ್ರಣವಿರಲಿ. ದುಡುಕಿನ ಮಾತು ಸಂಬಂಧ ಕೆಡಿಸದಂತೆ ನೋಡಿಕೊಳ್ಳಿ. ಗಂಟು ನೋವು ಬಾಧಿಸಬಹುದು.

ಕನ್ಯಾ
ಇತರರ ಕುರಿತಂತೆ ನಿಮ್ಮ ಮನಸ್ಸು ಮುಕ್ತವಾಗಿ ಇಟ್ಟುಕೊಳ್ಳಿ. ಪೂರ್ವಗ್ರಹದಿಂದ ವರ್ತಿಸದಿರಿ. ನಡೆನುಡಿ  ನೋಡಿ ಬಳಿಕ ಅವರನ್ನು ನಿರ್ಧರಿಸಿರಿ.

ತುಲಾ
ವೃತ್ತಿಕ್ಷೇತ್ರದಲ್ಲಿ ಸವಾಲು. ಅದನ್ನು ಎದುರಿಸಲು ಸಹನೆ ಅತೀ ಅವಶ್ಯ. ದುಡುಕಿನ ಕ್ರಮ ಪ್ರತಿಕೂಲವಾದೀತು. ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ.

ವೃಶ್ಚಿಕ
ಇಂದು ನಿಮಗೆ ಎಂದಿನಂತಿಲ್ಲದ ದಿನ. ನಿಮ್ಮ ಮನಸ್ಥಿತಿ ಕೆಡಿಸುವ ಪ್ರಸಂಗ. ವೃತ್ತಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಬಹುದು. ಕೌಟುಂಬಿಕ ಏರುಪೇರು.

ಧನು
ಇತರರ ನೋವು, ದುಮ್ಮಾನಗಳಿಗೆ  ಕಿವಿಗೊಡಿ. ಅವರೂ ನಿಮಗೆ ಸ್ಪಂದಿಸುವರು.ಮನೆಯಲ್ಲಿನ ಪರಿಸ್ಥಿತಿ ನೆಮ್ಮದಿ ಕೆಡಿಸಿದರೂ ಬಳಿಕ ಸರಿಯಾಗುವುದು

ಮಕರ
ಇತರರ ನಡವಳಿಕೆ ನಿಮಗೆ ಅಸಹನೆ ಸೃಷ್ಟಿಸಬಹುದು.  ನಿಮ್ಮ ಕುರಿತಾದ ಟೀಕೆಗಳಿಗೆ ಮನಸ್ಸು ಕೆಡಿಸದಿರಿ. ನಿಮ್ಮ ನಿಲುವಿನಲ್ಲಿ ಸಡಿಲಿಕೆ ಬೇಡ.

ಕುಂಭ
ಹಣದ ಸಮಸ್ಯೆ ನಿವಾರಣೆ. ಆದರೆ ಇನ್ನಿತರ ಕೆಲವು ಸಮಸ್ಯೆ ಕಾಡುತ್ತದೆ. ತಾಳ್ಮೆಯಿಂದ ವ್ಯವಹರಿಸಬೇಕು. ಸಣ್ಣ ವಿಚಾರಕ್ಕೂ ಹತಾಶೆ ತೋರದಿರಿ.

ಮೀನ
ಕೆಲಸದ ಒತ್ತಡ ಅಧಿಕ. ಹದಗೆಟ್ಟ ಆರ್ಥಿಕ ಪರಿಸ್ಥಿತಿ ನಿರಾಶೆಗೆ ಕಾರಣವಾದೀತು. ಅಧಿಕ ಖರ್ಚು. ಕೌಟುಂಬಿಕ ಉದ್ವಿಗ್ನತೆ ಹೆಚ್ಚುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!