ದಿನಭವಿಷ್ಯ| ಮುಂಜಾನೆ ಮೂಡಿದ್ದ ಗೊಂದಲಗಳು ಸಂಜೆ ತಿಳಿಯಾಗುತ್ತವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಸಂತೋಷವು ಇಂದು ನಿಮ್ಮನ್ನು ಹುಡುಕಿಕೊಂಡು ಬರುವುದು. ವೈಯಕ್ತಿಕ ಬದುಕಿನಲ್ಲಿ ಪ್ರೀತಿ, ಸೌಹಾರ್ದ, ಆತ್ಮೀಯತೆ ಎಲ್ಲವೂ ಇರುವುದು.

ವೃಷಭ
ವೃತ್ತಿಯಲ್ಲಿ ಸುಗಮ ದಿನ. ಕಾರ್ಯಸಿದ್ಧಿ. ಧನ ಲಾಭ. ಕೌಟುಂಬಿಕ ವಾಗಿ ಉತ್ತಮ ಹೊಂದಾಣಿಕೆ. ಬಂಧು ಗಳ ಜತೆಗಿನ ವೈಷಮ್ಯವೊಂದು ನಿವಾರಣೆ.

ಮಿಥುನ
ನಿಮ್ಮ ತಾಳ್ಮೆ ಪರೀಕ್ಷಿ ಸುವ ಪ್ರಸಂಗ ಉದ್ಭವಿಸುವುದು. ಉದ್ಯೋಗಾ ಕಾಂಕ್ಷಿಗಳಿಗೆ  ಅವರ ಉದ್ದೇಶ ಫಲಿಸದು. ವಿಘ್ನಗಳು ಎದುರಾದವು.

ಕಟಕ
ಇತರರ ಪ್ರಭಾವಕ್ಕೆ ಒಳಗಾಗಿ ಕಾರ್ಯ ಎಸಗಬೇಡಿ. ನಿಮ್ಮ ಸ್ವಂತ ಚಿಂತನೆಯೂ ಇರಲಿ. ಇತರರು ತಮ್ಮ ಸ್ವಾರ್ಥಕ್ಕೆ ನಿಮ್ಮನ್ನು ಬಳಸಿಕೊಂಡಾರು.

ಸಿಂಹ
ನಿಮ್ಮ ಉತ್ತಮ ಸಂವಹನಾ ಶಕ್ತಿಯಿಂದ ಎಲ್ಲರೊಡನೆ ಉತ್ತಮ ಸಂಬಂಧ ಸಾಧಿಸುವಿರಿ.ಇದರಿಂದ ಕಾರ್ಯ ಸುಲಭ. ಆರ್ಥಿಕ ಸ್ಥಿತಿ ಚೇತರಿಕೆ.

ಕನ್ಯಾ
ಸಾಮಾಜಿಕ ವಿಷಯ ಗಳು ಹೆಚ್ಚು ಆಸಕ್ತಿ ತರುತ್ತವೆ. ಹಲವರ ಜತೆ ಒಡನಾಟ. ಟೀಕೆಗಳನ್ನು ಸ್ಫೂರ್ತಿ ಯಿಂದ ಸ್ವೀಕರಿಸಿ ಮುನ್ನಡೆಯಿರಿ.

ತುಲಾ
ವೃತ್ತಿ ಕ್ಷೇತ್ರದಲ್ಲಿ ಪ್ರಗತಿ. ಮುಂಜಾನೆ ಮೂಡಿದ್ದ ಗೊಂದಲಗಳು ಸಂಜೆ ತಿಳಿಯಾಗುತ್ತವೆ. ಆರೋಗ್ಯ ಸಮಸ್ಯೆ ನಿವಾರಣೆಯಾಗಿ ಮನಸ್ಸು ನಿರಾಳ.

ವೃಶ್ಚಿಕ
ನಿಮಗೆ ಪೂರಕವಾದ ದಿನ. ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಬರೆದಿದೆ. ಹಾಗಾಗಿ ಈ ದಿನ ನಿಮ್ಮದಾಗಿಸಿಕೊಳ್ಳಿ. ಅದರ ಸದುಪಯೋಗ ಪಡೆದುಕೊಳ್ಳಿ.

ಧನು
ಕೆಲಸದ ಒತ್ತಡ. ಸಮಯಮಿತಿಯಲ್ಲಿ ಕೆಲಸ ಮುಗಿಸಲು ಕಷ್ಟ ಪಡುವಿರಿ. ಇತರರ ಒತ್ತಡವೂ ಹೆಚ್ಚು. ಕೌಟುಂಬಿಕ ಪರಿಸರದಲ್ಲಿ ಸಾಂತ್ವನ.

ಮಕರ
ಕೆಲವರು  ನಿಮ್ಮ ಕಾರ್ಯಕ್ಕೆ ಅಡ್ಡಿ ಒಡ್ಡುತ್ತಾರೆ. ನೀವು ಸಫಲರಾಗುವುದು ಅವರಿಗೆ ಬೇಕಿಲ್ಲ. ಅವರ ತಂತ್ರ ಎದುರಿ ಸಲು ನೀವೂ ಸಜ್ಜಾಗಿರಿ.

ಕುಂಭ
ಖಾಸಗಿ ಬದುಕು ಅಥವಾ ವೃತ್ತಿ ಬದುಕು ಎರಡರಲ್ಲೂ ಇಂದು ನಿಮ್ಮದು ಯಶಸ್ವೀ ಸಾಧನೆ. ಹಿನ್ನಡೆಗಳು ನಿಮ್ಮನ್ನು  ಬಾಧಿಸಲಾರವು.

ಮೀನ
ಇಷ್ಟಾರ್ಥ ಸಿದ್ಧಿ. ಪ್ರತಿಕೂಲವೆನಿಸಿದ ವಿಷಯಗಳೂ ನಿಮಗೆ ಪೂರಕವಾಗಿ ಪರಿಣಮಿಸುವವು. ನೀವು ಬಯಸಿದ ಸಂಗತಿ ಘಟಿಸುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!