ದಿನಭವಿಷ್ಯ| ಅನವಶ್ಯ ಮಾನಸಿಕ ಒತ್ತಡ ಅನುಭವಿಸುವ ಪ್ರಸಂಗ ಉದ್ಭವಿಸಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಸಂಬಂಧದಲ್ಲಿ ಮಹತ್ತರ ತಿರುವು ಉಂಟಾದೀತು. ತಪ್ಪು ನಡೆ ಇಟ್ಟರೆ ಅದರಿಂದ ಪ್ರಮಾದ. ವಿವೇಕದಿಂದ ಆಲೋಚಿಸಿ ವರ್ತಿಸಬೇಕು.

ವೃಷಭ
ಇಂದು ಉತ್ಸಾಹದಿಂದ ಕಾರ್ಯ ಎಸಗುವ ಪರಿಸ್ಥಿತಿ ನಿರ್ಮಾಣ. ಎಲ್ಲವೂ ನೀವು ನಿರೀಕ್ಷಿಸಿದಂತೆ ನಡೆಯುವುದು. ಕೌಟುಂಬಿಕ ಸಹಕಾರ.

ಮಿಥುನ
ಅನವಶ್ಯ ಮಾನಸಿಕ ಒತ್ತಡ ಅನುಭವಿಸುವ ಪ್ರಸಂಗ ಉದ್ಭವಿಸಬಹುದು.  ಯಾರದೋ ತಪ್ಪಿನ ಹೊಣೆಗಾರಿಕೆ  ನಿಮ್ಮ ಹೆಗಲೇರಬಹುದು.

ಕಟಕ
ಮಾನಸಿಕ ಉದ್ವಿಗ್ನತೆ ಹೆಚ್ಚಿಸುವ ಬೆಳವಣಿಗೆ.  ಕ್ಷುಲ್ಲಕವೆಂದು ಭಾವಿಸಿದ ವಿಷಯ ಗಂಭೀರವಾದೀತು. ಯೋಚಿಸಿ ಮುಂದಿನ ಹೆಜ್ಜೆಯಿಡಿ.

ಸಿಂಹ
ಆಪ್ತೇಷ್ಟರ ಸಂಗದಲ್ಲಿ ಸಂತೋಷ. ಕೆಲಸದ ಜಂಜಾಟ ಮುಗಿದು ನಿರಾಳತೆ. ಪ್ರಮುಖ ಕಾರ್ಯವೊಂದು ಸುಗಮವಾಗಿ ಮುಗಿಯುವುದು.

ಕನ್ಯಾ
ಹಳೆಯ ನೆನಪಿನಲ್ಲೆ ಕೊರಗಬೇಡಿ. ನೋವಿನ ನೆನಪು ಕೆದಕುವ ಜನರನ್ನು ಮರೆತು ಬದುಕಿರಿ. ನಿಮ್ಮ ಹಿತೈಷಿಗಳಿಗೆ ಹೆಚ್ಚಿನ ಆದ್ಯತೆ ಕೊಡಿ.

ತುಲಾ
ಇತರರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಬೇಡಿ.ಅದರಿಂದ ನಿಮಗೇ ತೊಂದರೆ. ನಿಮ್ಮ ಕಾರ್ಯವು ಅರ್ಧಕ್ಕೆ ನಿಲ್ಲಬಹುದು. ಆರ್ಥಿಕ ಒತ್ತಡ.

ವೃಶ್ಚಿಕ
ಖಾಸಗಿ ಬದುಕಿನಲ್ಲಿ  ಶುಭ ಬೆಳವಣಿಗೆ. ಇಷ್ಠಾರ್ಥ ಸಿದ್ಧಿ. ಉದ್ದಿಮೆಯಲ್ಲಿ ಅವಸರದ ನಿರ್ಧಾರ ತಾಳಬೇಡಿ. ಕೌಟುಂಬಿಕ ಬಿಕ್ಕಟ್ಟು ಪರಿಹಾರ.

ಧನು
ದೇವರ ಅನುಗ್ರಹ ನಿಮಗಿದೆ. ಕಷ್ಟದ ಪರಿಸ್ಥಿತಿಯನ್ನೂ ಸುಲಭದಲ್ಲಿ ನಿಭಾಯಿಸುವಿರಿ. ಆರ್ಥಿಕ ಒತ್ತಡವು ಪರಿಹಾರ ಕಾಣುವುದು.

ಮಕರ
ಕೌಟುಂಬಿಕ ವಿಚಾರ ಮನಸ್ಸು ಕೆಡಿಸುವುದು. ಅದನ್ನು ಸುಲಭದಲ್ಲಿ ಪರಿಹರಿಸುವ ದಾರಿ ಕಂಡುಕೊಳ್ಳಿ.  ವಿಕೋಪಕ್ಕೆ ಕೊಂಡೊಯ್ಯದಿರಿ.

ಕುಂಭ
ಬಂಧುಗಳ ಜತೆ ಸಂಘರ್ಷದ ಸಂಕೇತವು ತೋರುತ್ತಿದೆ. ಅದನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನ ಪಡಿ.  ಇಲ್ಲವಾದರೆ ಮಾನಸಿಕ ನೆಮ್ಮದಿ ಕಳಕೊಳ್ಳುವಿರಿ.

ಮೀನ
ಕೌಟುಂಬಿಕ ಬೆಳವಣಿಗೆ ಮಿಶ್ರ ಫಲ ನೀಡಲಿದೆ. ಸಂತೋಷವೂ ಬೇಸರವೂ ಒಟ್ಟಿಗೇ ಆಗಲಿದೆ. ಹಿತೈಷಿಗಳ ಕಿವಿಮಾತು ಕೇಳುವುದು ವಿಹಿತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!