ದಿನಭವಿಷ್ಯ| ಬೇರೆಯವರ ಸ್ವಭಾವದ ಕುರಿತಂತೆ ಅತಿಯಾಗಿ ತಲೆಕೆಡಿಸಿಕೊಳ್ಳಲು ಹೋಗಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಉತ್ತಮ ಸಂವಹನ ಸಾಧಿಸುವಿರಿ. ಹಾಗಾಗಿ ಎಲ್ಲರೊಡನೆ ಉತ್ತಮ ಹೊಂದಾಣಿಕೆ ಸಾಧ್ಯ. ಆತ್ಮೀಯ ಮಾತುಕತೆ, ಸಂಭ್ರಮಾಚರಣೆ ಕುಶಿ ಹೆಚ್ಚಿಸುತ್ತದೆ.

ವೃಷಭ
ನಿಮ್ಮ ಗುರಿ ಸಾಧನೆಗೆ ಹೆಚ್ಚು ಆದ್ಯತೆ ಕೊಡಿ. ಈ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ನಿಮ್ಮ ಅವಕಾಶವನ್ನು ಇತರರು ಕಸಿದುಕೊಳ್ಳದಂತೆ ನೋಡಿಕೊಳ್ಳಿ.

ಮಿಥುನ
ಆಪ್ತರೊಂದಿಗೆ ಕೂಡಿ ಕಳೆಯುವ ಅವಕಾಶ. ಅವರ ಸಂಗದಲ್ಲಿ ಸಂತೋಷ ಪಡುವಿರಿ. ಕೆಲವು ವಿಷಯಗಳು ಕಿರಿಕಿರಿ ಎನಿಸಿದರೂ ಅದನ್ನು ಸಹಿಸಿಕೊಳ್ಳಿ.

ಕಟಕ
ಬೇರೆಯವರ ಸ್ವಭಾವದ ಕುರಿತಂತೆ ಅತಿಯಾಗಿ ತಲೆಕೆಡಿಸಿಕೊಳ್ಳಲು ಹೋಗಬೇಡಿ. ಕೆಲವರನ್ನು ನಿರ್ಲಕ್ಷಿಸುವುದು ಒಳ್ಳೆಯದು.

ಸಿಂಹ
ಸಹನೆಯನ್ನು ಕಾಯ್ದುಕೊಳ್ಳಿ. ಆ ಮೂಲಕ ಮನಸ್ಸನ್ನು ಶಾಂತಿಯಿಂದ ಇಟ್ಟುಕೊಳ್ಳಿ. ಅಸಹನೀಯ ವಿಷಯಗಳನ್ನು ಬದಿಗೆ ಸರಿಸಿರಿ.

ಕನ್ಯಾ
ಆತ್ಮೀಯರ ಜತೆಗಿನ ಸಂಬಂಧವು ಪ್ರಮುಖ ಘಟ್ಟ ತಲುಪುವುದು. ಅವರ ಭಾವನೆ ಅರ್ಥ ಮಾಡಿಕೊಂಡು ವ್ಯವಹರಿಸಿ. ಅದರಿಂದ ನೆಮ್ಮದಿ ಸಾಧ್ಯ.

ತುಲಾ
ವಾಗ್ವಾದದಲ್ಲಿ ಇಂದು ಪಾಲ್ಗೊಳ್ಳದಿರಿ. ಆ ಮೂಲಕ ಸಂತೋಷ ಹಾಳು ಮಾಡದಿರಿ. ಎಲ್ಲವನ್ನೂ ಸಹಿಸಿಕೊಂಡು ಹೋಗುವುದುತ್ತಮ.

ವೃಶ್ಚಿಕ
ಹಳೆಯ ತಪ್ಪುಗಳನ್ನು ನೆನಪಿಸುತ್ತಾ ಕೊರಗಬೇಡಿ. ಅದನ್ನು ಮರೆತು ಭವಿಷ್ಯಕ್ಕೆ ಹೆಚ್ಚು ಗಮನ ಕೊಡಿ. ಕೈಗೊಳ್ಳುವ ಕಾರ್ಯದಲ್ಲಿ ಸೂಕ್ತ ಯೋಜನೆ, ಸುವ್ಯವಸ್ಥೆ ಇರಲಿ.

ಧನು
ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುವಿರಿ. ಆಪ್ತರಿಂದ ಉತ್ತಮ ಸಹಕಾರ. ಖರ್ಚು ಹೆಚ್ಚಳ, ಆದರೆ ಅದು ಬೇಸರ ತಾರದು.  ಖರೀದಿ ಹುಮ್ಮಸ್ಸು.

ಮಕರ
ಕೆಲವರ ಟೀಕೆಗಳನ್ನು
ಸ್ಫೂರ್ತಿಯಿಂದ ಸ್ವೀಕರಿಸಿ.  ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿ.  ಕುಟುಂಬ ಸದಸ್ಯರ  ಜತೆ ಆತ್ಮೀಯ ಕಾಲಕ್ಷೇಪ.

ಕುಂಭ
ಕೌಟುಂಬಿಕ ಸಂತೋಷ. ಕುಟುಂಬಸ್ಥರ ಜತೆಗೆ ಆತ್ಮೀಯ ಸಮ್ಮಿಲನ. ಬಂಧುಗಳ ಭೇಟಿ ಕುಶಿ ತರಲಿದೆ. ಹಣಕಾಸು ಪರಿಸ್ಥಿತಿ ತೃಪ್ತಿಕರ ಎನಿಸುವುದು.

ಮೀನ
ಕೆಲಸದ ಒತ್ತಡವನ್ನು ಮರೆತು ಇಂದು ಸಂಪೂರ್ಣವಾಗಿ ಕೌಟುಂಬಿಕ ಸಂತೋಷದಲ್ಲಿ ಪಾಲ್ಗೊಳ್ಳುವಿರಿ. ಬಂಧುಗಳ ಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!