ದಿನಭವಿಷ್ಯ| ದೈನಂದಿನ ಕಾರ್ಯಗಳಿಂದ ವಿಮುಖರಾಗಿ ಹೊಸತನಕ್ಕೆ ತುಡಿಯುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಬೇರೆಯವರ ಸಮಸ್ಯೆ ಪರಿಹರಿಸಲು ಮುಂದಾಗುವಿರಿ. ಇದರಿಂದ ಅವರ ಮೆಚ್ಚಿಕೆ ಪಡೆಯುವಿರಿ. ಕೌಟುಂಬಿಕ ಭಿನ್ನಮತ ನಿವಾರಣೆ.

ವೃಷಭ
ಕಾನೂನಿನ ತೊಡಕುಗಳು ಇಂದು ನಿವಾರಣೆ. ಕೌಟುಂಬಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.ಸಂಜೆ ವೇಳೆಗೆ ಬಂಧುಗಳ ಜತೆ ಸಮ್ಮಿಲನ.

ಮಿಥುನ
ದೈನಂದಿನ ಕಾರ್ಯಗಳಿಂದ ವಿಮುಖರಾಗಿ ಹೊಸತನಕ್ಕೆ ತುಡಿಯುವಿರಿ. ಪ್ರಯಾಣದಲ್ಲಿ ಕುಶಿ ಕಾಣುವಿರಿ.

ಕಟಕ
ಕುಟುಂಬ ಸದಸ್ಯರ ಉದ್ದೇಶದ ಬಗ್ಗೆ ಅನುಮಾನ ಬಿಡಿ. ಅವರು ನಿಮ್ಮ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂದು ಇಂದು ತಿಳಿದುಬರಲಿದೆ.

ಸಿಂಹ
ವೃತ್ತಿಯಲ್ಲಿ  ಯಶಸ್ಸು. ನಿಮ್ಮ ನಿರ್ವಹಣೆ ಇತರರ ಗಮನ ಸೆಳೆಯುವುದು. ಆರ್ಥಿಕವಾಗಿ ಲಾಭ. ವಿದ್ಯಾರ್ಥಿಗಳಿಗೆ ಶುಭಕರ ಬೆಳವಣಿಗೆ. ಸಂಬಂಧ ವೃದ್ಧಿಸುವುದು.

ಕನ್ಯಾ
ಪ್ರೀತಿಪಾತ್ರರೊಂದಿಗೆ ಹೆಚ್ಚು ಕಾಲ ಕಳೆಯುವ ಅವಕಾಶ. ನಿಮ್ಮ ಏಳಿಗೆ ಕಂಡು ಸಹಿಸಲಾಗದವರು ನಿಮ್ಮ ವಿರುದ್ಧ ಪಿತೂರಿ ಮಾಡಿಯಾರು.

ತುಲಾ
ಪ್ರತಿ ಸಮಸ್ಯೆಗೂ ಪರಿಹಾರವಿದೆ. ಇದನ್ನು ನೀವು ಇಂದು ಅರಿತುಕೊಳ್ಳಬೇಕು. ಹತಾಶರಾಗಿ ಕೈಚೆಲ್ಲದಿರಿ. ಹದಗೆಟ್ಟ ಸಂಬಂಧ ಸರಿಮಾಡಿಕೊಳ್ಳಿ.

ವೃಶ್ಚಿಕ
ವಿವೇಕಕ್ಕಿಂತಲೂ ಹೃದಯದ ಭಾವನೆಗೆ ಇಂದು ಹೆಚ್ಚು ಬೆಲೆ ಕೊಡುವಿರಿ. ಅತಾರ್ಕಿಕವಾಗಿ ಚಿಂತಿಸುವಿರಿ. ಭಾವನಾತ್ಮಕ ನೋವು.

ಧನು
ನಿಮ್ಮ ಉತ್ಸಾಹವು ಕಠಿಣ ಕಾರ್ಯವನ್ನೂ ಸುಲಭವಾಗಿಸುವುದು. ಬೇರೆಯವರೂ ನಿಮ್ಮ ಮಾರ್ಗ ಅನುಸರಿಸುತ್ತಾರೆ. ಧನಲಾಭವಿದೆ.

ಮಕರ
ಬಯಸಿದ ಕಾರ್ಯ ವಾಗದಿದ್ದರೆ ಹತಾಶರಾಗದಿರಿ. ಅದರಿಂದ ವಿನಾಶ ವೇನೂ ಸಂಭವಿಸದು. ಗ್ರಹಗತಿ ಬದಲಾಗುವ ಲಕ್ಷಣವಿದೆ.

ಕುಂಭ
ಅದೃಷ್ಟ ಇಂದು ನಿಮ್ಮ ಜತೆಗಿದೆ. ಮುಖವಾಡ ಧರಿಸಿ ಬದುಕುವವರ ಕುರಿತು ಎಚ್ಚರವಿರಿ. ನಗುತ್ತಲೇ ನಿಮ್ಮ ವಿರುದ್ಧ ಕಾರ್ಯಾಚರಿಸುತ್ತಾರೆ ಅವರು.

ಮೀನ
ಸುತ್ತಲಿನ ಪರಿಸ್ಥಿತಿ ಯನ್ನು ಸೂಕ್ಷ್ಮವಾಗಿ ಗಮನಿಸಿ ಕಾರ್ಯ ಎಸಗಬೇಕು. ಭಾವುಕತೆ ಯಿಂದ ವರ್ತಿಸದಿರಿ. ಕೌಟುಂಬಿಕ ಅಸಮಾಧಾನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!