ದಿನಭವಿಷ್ಯ| ಕೌಟುಂಬಿಕ ಶಾಂತಿ ಸಾಧಿಸಲು ಹೆಚ್ಚು ಆದ್ಯತೆ ಕೊಡುವಿರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಷ
ಕೆಲವು ಸಮಸ್ಯೆ ಕಾಡುವುದು. ಇದು ನಿಮ್ಮ ಚಿಂತಿಸುವ ಶಕ್ತಿ ಮರೆಸಿಬಿಡಬಹುದು. ಶಾಂತಚಿತ್ತರಾಗಿ ವರ್ತಿಸಿದರೆ ಪರಿಹಾರ  ಕಾಣಬಹುದು.

ವೃಷಭ
ಕೌಟುಂಬಿಕ ಶಾಂತಿ ಸಾಧಿಸಲು ಇಂದು ನೀವು ಹೆಚ್ಚು ಆದ್ಯತೆ ಕೊಡುವಿರಿ. ಕುಟುಂಬ ನಿರ್ಲಕ್ಷಿಸಿದ್ದೇನೆ ಎಂಬ ಭಾವನೆ ತೊಡೆಯಲು ಯತ್ನಿಸುವಿರಿ.

ಮಿಥುನ
ಪ್ರೀತಿಪಾತ್ರರನ್ನು ಸಂತುಷ್ಟಗೊಳಿಸಲು ಇಂದು ಪ್ರಯತ್ನಿಸುವಿರಿ. ಖರೀದಿಯ ಸಂಭ್ರಮ. ಆಪ್ತರೊಡನೆ ಹೆಚ್ಚು ಕಾಲ ಕಳೆಯುವ ಅವಕಾಶ.

ಕಟಕ
ಇತರರ ಜಗಳದಲ್ಲಿ ಮಧ್ಯವರ್ತಿಯ  ಕಾರ್ಯನಿರ್ವಹಿಸುವ ಪ್ರಸಂಗ ಒದಗಬಹುದು. ನಿಮ್ಮ ಸಂಧಾನ ಕಾರ್ಯ ಯಶಸ್ಸು ಕಾಣುವುದು. ಮಾನಸಿಕ ನೆಮ್ಮದಿ.

ಸಿಂಹ
ನಿಮಗೆ ಆಗದವರನ್ನು ಮಾತಿನಿಂದ ಚುಚ್ಚುವುದನ್ನು ನೀವು ಇಷ್ಟ ಪಡುವಿರಿ. ಅದರಿಂದ ಸಂಬಂಧ ಹಾಳಾಗಬಹುದು, ವೈರ ಕಟ್ಟಿಕೊಳ್ಳಬಹುದು.

ಕನ್ಯಾ
ಇಂದು ಎಲ್ಲವೂ ನಿಮ್ಮ ಹಿಡಿತಕ್ಕೆ ಸಿಗುವುದು. ನಿಮ್ಮ ಗುರಿಯನ್ನು ಸಾಧಿಸುವಿರಿ. ಅಡ್ಡಿಗಳು ತಾನಾಗಿ ನಿವಾರಣೆ ಆಗುವವು. ಕೌಟುಂಬಿಕ ಶಾಂತಿ, ಸಮಾಧಾನ.

ತುಲಾ
ಎಡವುದು ಸಹಜ. ಆದರೆ ತಕ್ಷಣವೇ ಎದ್ದು ನಿಲ್ಲುವುದು ಮುಖ್ಯ. ಇದನ್ನು ನೀವಿಂದು ನೆನಪಲ್ಲಿಡಬೇಕು. ಸಣ್ಣ ಹಿನ್ನಡೆಗಳಿಂದ ಎದೆಗುಂದದಿರಿ.

ವೃಶ್ಚಿಕ
ಸ್ನೇಹಿತರು ಅಥವಾ ಬಂಧುಗಳ ಜತೆ ಭಿನ್ನಾಭಿಪ್ರಾಯ. ಬಾಕಿಯುಳಿದ ಕೆಲಸ ಮುಗಿಸಲು ಗಮನ ಕೊಡಿ. ಆರ್ಥಿಕ ಸಂಕಷ್ಟ ಕಾಡುವುದು.

ಧನು
ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ದೊರಕು ವುದು. ಇದರಿಂದ ಕೆಲಸಗಳು ಸುಗಮ ವಾಗಿ ನಡೆಯುವವು. ಕೌಟುಂಬಿಕ ಪರಿಸ್ಥಿತಿ ಉಲ್ಲಾಸದಾಯಕ.

ಮಕರ
ನಿಮ್ಮ ಮನಸ್ಸಲ್ಲಿ ಏನೋ ಗಹನವಾದುದು ಕೊರೆಯುತ್ತಿರುತ್ತದೆ. ಅಗತ್ಯ ಸಂದರ್ಭದಲ್ಲಿ ಅದನ್ನು ಹೊರಹಾಕಲು ಹಿಂಜರಿಯದಿರಿ. ಧೈರ್ಯವಿರಲಿ.

ಕುಂಭ
ಆಪ್ತರ ಸಂಗದಲ್ಲಿ ಸಂತೋಷ. ಸಣ್ಣಪುಟ್ಟ ಸಮಸ್ಯೆ ತಲೆದೋರ ಬಹುದಾದರೂ ಅದನ್ನು ನಿಭಾಯಿಸಿಕೊಳ್ಳುವಿರಿ. ಕುಟುಂಬಸ್ಥರು ನಿಮ್ಮ ಬೆಂಬಲಕ್ಕಿದ್ದಾರೆ.

ಮೀನ
ಪ್ರೀತಿಪಾತ್ರ ವ್ಯಕ್ತಿಯೊಂದಿಗೆ ಇಂದು ಹೆಚ್ಚು ಕಾಲ ಕಳೆಯುವಿರಿ. ಭವಿಷ್ಯದ ಯೋಜನೆ ಹಾಕಿಕೊಳ್ಳಿ. ಹಣಕಾಸು ಕೊರತೆ ಕಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!