ದಿನಭವಿಷ್ಯ| ಇತರರು ಏನು ಹೇಳುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಕರ್ತವ್ಯ ಮಾಡುತ್ತಾ ಹೋಗಿ. ಇತರರು ಏನು ಹೇಳುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ. ಸಮಸ್ಯೆ ಪರಿಹಾರಕ್ಕೆ ಅಡ್ಡ ದಾರಿ ಹಿಡಿಯದಿರಿ. ಪ್ರಾಮಾಣಿಕತೆ ಇರಲಿ.ವೃಷಭ
ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಬೇಕಾದೀತು. ಅದರಿಂದ ಎಲ್ಲವೂ ಒಳಿತಾಗುವುದು. ಸಾಂಸಾರಿಕ ಸಮಸ್ಯೆ ಉಲ್ಬಣಗೊಳ್ಳಬಹುದು.

ಮಿಥುನ
ನಿಮ್ಮ ವಿರೋಧಿಗಳ ಎದುರು ಹಿನ್ನಡೆ ಅನುಭವಿಸುವಿರಿ. ಮಾನಸಿಕ ಖಿನ್ನತೆ. ಕೌಟುಂಬಿಕ ಪರಿಸರದಲ್ಲಿ ಸಾಂತ್ವನ ಪಡೆಯುವಿರಿ. ಆರ್ಥಿಕ ಒತ್ತಡ.

ಕಟಕ
ಬಂಧುಗಳಿಂದ ಅನಿರೀಕ್ಷಿತ ಭೇಟಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದಕ್ಕೆ ಹೆಚ್ಚಿನ ಗಮನ ಕೊಡಿ. ಭಾವುಕ ವಿಷಯಗಳು ಮನಸ್ಸು ಕೆಡಿಸುತ್ತವೆ.

ಸಿಂಹ
ಯಾವುದೇ ಕಾರ್ಯ ಮಾಡಿದರೂ ನಿಮಗೆ ಯಶಸ್ಸು ಸಿಗುವುದು. ಖಾಸಗಿ ವಿಷಯದಲ್ಲಿ ರಹಸ್ಯ ಕಾಪಾಡಿ. ಎಲ್ಲವನ್ನೂ ಬಹಿರಂಗ ಮಾಡಬೇಡಿ.

ಕನ್ಯಾ
ವೃತ್ತಿಯಲ್ಲಿ, ಖಾಸಗಿ ಬದುಕಿನಲ್ಲಿ ಇಂದು ಮೆಚ್ಚುಗೆ ಪಡೆಯುವ ಬೆಳವಣಿಗೆ. ಆಪ್ತರಿಂದ ನಿಮಗೆ ಹೆಚ್ಚಿನ ಪ್ರೋತ್ಸಾಹ ದೊರಕುವುದು.

ತುಲಾ
ಸಣ್ಣ ಆರೋಗ್ಯ ಸಮಸ್ಯೆ ಕಾಡಬಹುದು. ಮುಖ್ಯವಾಗಿ ಆಹಾರದಲ್ಲಿ ಹಿತಮಿತ ಸಾಧಿಸಿರಿ. ಪ್ರಯಾಣದ ಅವಕಾಶವಿದೆ. ಖರ್ಚು ಹೆಚ್ಚುವುದು.

ವೃಶ್ಚಿಕ
ಪ್ರೀತಿಯ ವಿಷಯ ನಿಭಾಯಿಸುವಲ್ಲಿ ನಿಮ್ಮಲ್ಲೇ ಗೊಂದಲವಿದೆ. ಮೊದಲು ನಿಲುವು ಸ್ಪಷ್ಟ ಪಡಿಸಿಕೊಳ್ಳಿ. ಆರೋಗ್ಯಕ್ಕೆ ಹಾನಿಕರವಾದ ಅಭ್ಯಾಸ ತ್ಯಜಿಸಿರಿ.

ಧನು
ಯಾವುದೇ ನಿರ್ಧಾರವನ್ನು ಶಾಂತವಾಗಿ ಆಲೋಚಿಸಿ ತೆಗೆದುಕೊಳ್ಳಿ. ಆವೇಶದಿಂದ ದುಡುಕಿನ ನಿರ್ಧಾರ ತಾಳದಿರಿ. ಕೌಟುಂಬಿಕ ಬಿಕ್ಕಟ್ಟು.

ಮಕರ
ನಿಮಗೆ ಕೇಡು ಬಗೆಯಲು ಯತ್ನಿಸುತ್ತಿರುವ ಸ್ನೇಹಿತರ ಕುರಿತಂತೆ ಎಚ್ಚರವಿರಲಿ. ಎಲ್ಲರನ್ನೂ, ಎಲ್ಲವನ್ನೂ ಕುರುಡಾಗಿ   ನಂಬಬೇಡಿ.

ಕುಂಭ
ಮನಸ್ಸಿನಲ್ಲಿರುವ ಗೊಂದಲ ಇಂದು ಪರಿಹಾರ ಕಾಣುವುದು. ಅಸ್ಪಷ್ಟ ಪರಿಸ್ಥಿತಿ ತಿಳಿಯಾಗುವುದು. ನಿಮ್ಮ ನಿರ್ಧಾರ ಉತ್ತಮ ಫಲ ನೀಡುವುದು.

ಮೀನ
ಅನಿರೀಕ್ಷಿತ ಕಾರ್ಯ ನಿಮ್ಮ ಹೆಗಲೇರುವುದು. ಬಂಧುಗಳಿಂದ ಉಂಟಾಗಿರುವ ಕಿರುಕುಳ ನಿವಾರಣೆ. ಚರ್ಮದ ಅಲರ್ಜಿ ಕಾಣಿಸಿಕೊಂಡೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!