ದಿನಭವಿಷ್ಯ| ಋಣಾತ್ಮಕ ಚಿಂತನೆಗಳು ಮನಸ್ಸನ್ನು ಆವರಿಸಲು ಅವಕಾಶ ಕೊಡಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಕೆಲಸ, ನಿಮ್ಮ ವ್ಯಕ್ತಿತ್ವದ ಬಗ್ಗೆ ಹೆಮ್ಮೆಯಿರಲಿ. ತಲೆ ಎತ್ತಿ ನಡೆಯಿರಿ. ಇತರರ ಟೀಕೆಗಳಿಗೆ ನೀವು ಕಿವಿಗೊಡಬೇಕಾಗಿಲ್ಲ. ಆತ್ಮವಿಶ್ವಾಸದ ದಿನ.

ವೃಷಭ
ಪ್ರಮುಖ ಯೋಜನೆ ನಿಮ್ಮ ಕೈಗೆ ಬರಬಹುದು. ಅದನ್ನು ಸರಿಯಾಗಿ ಪೂರೈಸುವುದು ನಿಮ್ಮ ಹೊಣೆಗಾರಿಕೆ. ಈ ವಿಷಯದಲ್ಲಿ ಉದಾಸೀನತೆ ಬೇಡ.

ಮಿಥುನ
ನಿಮಗೆ ಇಂದು ಸಹೋದ್ಯೋಗಿಗಳ ಬೆಂಬಲ ದೊರಕುವುದು. ಹಾಗಾಗಿ ಕಾರ್ಯಗಳು ಸುಗಮ. ಮನೆಯಲ್ಲಿ ಮಾತ್ರ ಅಶಾಂತಿಯ ವಾತಾವರಣ.

ಕಟಕ
ನಿಮಗೆ ಪೂರಕ ಬೆಳವಣಿಗೆಗಳು. ಋಣಾತ್ಮಕ ಚಿಂತನೆಗಳು ಮನಸ್ಸನ್ನು ಆವರಿಸಲು ಅವಕಾಶ ಕೊಡಬೇಡಿ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು.

ಸಿಂಹ
ಕೆಲವು ಗೊಂದಲಗಳು, ದ್ವಂದ್ವಗಳು ಇಂದು ಮಾಯವಾಗಿ ಎಲ್ಲವೂ ನಿಚ್ಚಳವಾಗುವುದು. ಮುಂದಿನ ದಾರಿಯ ಕುರಿತಂತೆ ಸ್ಪಷ್ಟವಾಗುವುದು.

ಕನ್ಯಾ
ಆತ್ಮೀಯ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾದೀತು. ಭಾವುಕತೆಗಿಂತ ವಿವೇಚನೆಗೆ ಆದ್ಯತೆ ಕೊಡಿ. ಕೆಲವರ ಕುರಿತಾದ ಪೂರ್ವಗ್ರಹ ಬಿಟ್ಟುಬಿಡಿ.

ತುಲಾ
ಕುಟುಂಬಸ್ಥರ ಜತೆ ಭಿನ್ನಮತ. ಅದನ್ನು ನಿವಾರಿಸಬೇಕಾದ ಕಾಲ ಬಂದಿದೆ. ನೀವೇ ಮೊದಲ ಹೆಜ್ಜೆ ಇಡಬೇಕು. ಹೊಂದಾಣಿಕೆ ಉತ್ತಮ.

ವೃಶ್ಚಿಕ
ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿ. ವೈರುಧ್ಯಮಯ ಭಾವನೆಗಳು ಕಾಡುತ್ತವೆ. ಆದರೆ ಚಿಂತೆ ಬೇಡ, ಇವು ನಿಮಗೆ ಹಾನಿ ಮಾಡಲಾರವು.

ಧನು
ಸಂಬಂಧವನ್ನು ಯಾವಾಗಲೂ ನೀವೇ ನಿರ್ದೇಶಿಸಬೇಡಿ. ನೀವೂ ಹೊಂದಾಣಿಕೆಗೆ ತೆರೆದುಕೊಳ್ಳಿ. ಆರೋಗ್ಯಕ್ಕೆ ಹಾನಿಕರ ಅಭ್ಯಾಸ ತ್ಯಜಿಸಿರಿ.

ಮಕರ
ಹೆಚ್ಚು ಎಚ್ಚರದಿಂದ ಕಾರ್ಯ ನಿರ್ವಹಿಸಿ. ಯಾವುದೇ ತಪ್ಪು ಘಟಿಸದಂತೆ ನೋಡಿಕೊಳ್ಳಿ. ನಿಮ್ಮ ತಪ್ಪು ಹುಡುಕಲು ಕಾದು ಕೂತವರಿರುತ್ತಾರೆ.

ಕುಂಭ
ಹಣದ ಬಿಕ್ಕಟ್ಟು ಉಂಟಾಗಬಹುದು. ನಿರೀಕ್ಷಿಸಿದ ಆರ್ಥಿಕ ಉನ್ನತಿ ಸಾಧ್ಯವಾಗದು. ತಲೆನೋವು ಅಥವಾ ಹೊಟ್ಟೆ ನೋವು ಕಾಡಬಹುದು.

ಮೀನ
ಕೆಲಸದ ಒತ್ತಡ ನಿಮ್ಮ ಆರೋಗ್ಯದ ಮೇಲೂ  ಪರಿಣಾಮ ಬೀರಬಹುದು.ಕುಟುಂಬಸ್ಥರ ಸಂಗದಲ್ಲಿ  ಸಾಂತ್ವನ ದೊರಕುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!