ದಿನಭವಿಷ್ಯ | ನಿಮ್ಮಿಷ್ಟದ ಕ್ಷೇತ್ರದಲ್ಲಿ ಉತ್ತಮ ಅವಕಾಶ ಸಿಗಲಿದೆ, ಸೂಕ್ತವಾಗಿ ಬಳಸಿಕೊಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ಕನಸು ನನಸಾಗುವುದು ಕಷ್ಟವಲ್ಲ. ಆದರೆ ಅದಕ್ಕೆ ನಿಮ್ಮಿಂದ ಕಠಿಣ ಪ್ರಯತ್ನವೂ ಬೇಕು. ಅಹಂ ಬಿಟ್ಟು ಕಾರ್ಯವೆಸಗಿ. ಎಲ್ಲ ಸಲೀಸಾಗುವುದು.

ವೃಷಭ
ಮನದಲ್ಲಿ ಅಸಮಾಧಾನ, ಅಸಹನೆ. ಏಕೆಂಬ ಸ್ಪಷ್ಟ ಅರಿವು ನಿಮಗೂ ಇಲ್ಲ. ಸಂಬಂಧದಲ್ಲಿನ ಒಡಕು ನಿಮ್ಮ ಈ ಮನಸ್ಥಿತಿಗೆ ಕಾರಣವಾಗಿರಬಹುದು. ತಾಳ್ಮೆ ಮುಖ್ಯ.

ಮಿಥುನ
ನಿಮ್ಮ ಸುತ್ತಲಿನ ಜನರೊಂದಿಗೆ ವ್ಯವಹರಿಸಲು, ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಇಂದು ಕಷ್ಟಪಡುವಿರಿ. ಇದರಿಂದ ಹತಾಶೆ.

ಕಟಕ
ನಿಮ್ಮ ಉದ್ವಿಗ್ನತೆ ಶಮನ ಮಾಡಲು ಆಪ್ತರೊಂದಿಗೆ ಕಾಲ ಕಳೆಯಿರಿ. ಸಣ್ಣ ವಿಷಯಗಳನ್ನು ಅತಿಯಾಗಿ ಹಚ್ಚಿಕೊಳ್ಳುವುದನ್ನು ನಿಲ್ಲಿಸಿ.

ಸಿಂಹ
ಆರ್ಥಿಕ ಪರಿಸ್ಥಿತಿ ಚಿಂತೆಗೆ ಕಾರಣವಾದೀತು. ಆದರೆ ಎಲ್ಲವೂ ಬೇಗದಲ್ಲೆ ಸರಿಸ್ಥಿತಿಗೆ ಬರುವುದರಿಂದ ಅನವಶ್ಯ ಚಿಂತೆ ಮಾಡಲು ಹೋಗದಿರಿ.

ಕನ್ಯಾ
ನೀವು ಮಾಡುವ ಕಾರ್ಯದಲ್ಲಿ ಬದ್ಧತೆಯಿರಲಿ. ಬೇಕಾಬಿಟ್ಟಿ ಕೆಲಸದಿಂದ ಒಳ್ಳೆಯ ಫಲ ದೊರಕದು. ಇತರರ ಸಹಕಾರ ಪಡೆಯಿರಿ.

ತುಲಾ
ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಉತ್ತಮ ಅವಕಾಶ ಸಿಗಲಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಿ. ಕಚೇರಿಯಲ್ಲಿ  ಒತ್ತಡ. ಆದರೆ ಅಂತ್ಯದಲ್ಲಿ ತೃಪ್ತಿಕರ ನಿರ್ವಹಣೆ.

ವೃಶ್ಚಿಕ
ನೀವು ತೋರುವ ಪ್ರೀತಿಯು ನಿಮಗೆ ಮರಳಿ ಸಿಗದಿದ್ದರೆ ಹತಾಶರಾಗದಿರಿ. ಸೂಕ್ತ ಸಂಗಾತಿ ನಿಮಗೆ ಸಿಗಲಿದ್ದಾರೆ. ನಿರಾಶೆ ದೂರವಾಗಲಿದೆ.

ಧನು
ಕೌಟುಂಬಿಕ ಒತ್ತಡವು ನಿಮ್ಮ ಮನಸ್ಸನ್ನು ಹಾಳು ಮಾಡದಂತೆ ನೋಡಿಕೊಳ್ಳಿ. ವಿವೇಚನೆಯಿಂದ ನಡಕೊಂಡರೆ ಎಲ್ಲ ಸರಿಯಾಗುವುದು.

ಮಕರ
ಆರ್ಥಿಕ ಲಾಭ ದೊರಕುವುದು. ಹಣದ ಮುಗ್ಗಟ್ಟು ಪರಿಹಾರ. ಬಂಧುಗಳ ಜತೆ ಹೆಚ್ಚು ವ್ಯವಹರಿಸಬೇಕಾದ ಪ್ರಸಂಗ ಒದಗುವುದು. ಶುಭ ಕಾರ್ಯಕ್ರಮ.

ಕುಂಭ
ಭಾವುಕತೆ ಬದಿಗಿಟ್ಟು ವಿವೇಚನೆ ಬೆಳೆಸಿಕೊಳ್ಳಿ. ಸಂಬಂಧ ಹಾಳಾದರೆ ಹತಾಶರಾಗಿ ಕೂರದಿರಿ. ನಿಮ್ಮ ಸ್ವಂತಿಕೆಯನ್ನು ಇತರರಿಗಾಗಿ ಬಲಿಕೊಡಬೇಡಿ.

ಮೀನ
ಆರೋಗ್ಯ ಸಂಬಂಧಿ ಚಿಂತೆ ಪರಿಹಾರ. ಮನಸ್ಸಿಗೆ ನೆಮ್ಮದಿ. ಕಠಿಣವೆಂದು ಭಾವಿಸಿದ್ದ ಕಾರ್ಯವೊಂದು ಸುಗಮವಾಗಿ ನೆರವೇರುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!