ದಿನ ಭವಿಷ್ಯ | ಸಿಂಹ ರಾಶಿಗೆ ಖಾಸಗಿ ಬದುಕಲ್ಲಿ ಸವಾಲು, ಕನ್ಯಾ ರಾಶಿಯವರು ನಿರಾಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ಕೌಟುಂಬಿಕ ಪರಿಸರ ಸಂತೋಷಕರ. ಎಲ್ಲರ ಜತೆ ಉತ್ತಮ ಹೊಂದಾಣಿಕೆ. ಹಣದ ವಿಷಯದಲ್ಲಿ ನೀವಿಂದು ಹೆಚ್ಚು ಎಚ್ಚರ ವಹಿಸಬೇಕು.

ವೃಷಭ
ವೃತ್ತಿಯಲ್ಲಿ ನಿಮಗಿಂದು ಪೂರಕವಾಗದು. ನೀವು ಹೆಚ್ಚು ತಾಳ್ಮೆಯಿಂದ ವ್ಯವಹರಿಸಬೇಕು. ಕೆಲ ವಿಷಯಗಳಲ್ಲಿ ನಿಮ್ಮ ಮನೋಭಾವ ಬದಲಿಸಿಕೊಳ್ಳಬೇಕು.

ಮಿಥುನ
ಕಠಿಣ ಗುರಿಯೊಂದನ್ನು ಸಾಧಿಸಲು ಹೆಚ್ಚು ಶ್ರಮಿಸುವಿರಿ. ಅದಕ್ಕೇ ನಿಮ್ಮ ಶ್ರಮ ವ್ಯಯಿಸುವಿರಿ. ಸಂಜೆ ವೇಳೆಗೆ ತೃಪ್ತಿಕರ ಫಲಿತಾಂಶ ಲಭ್ಯ.

ಕಟಕ
ನಿಮ್ಮ ಕೆಲಸವು ತೃಪ್ತಿಕರ ಫಲಿತಾಂಶ ನೀಡುವುದು. ನಿಮ್ಮ ಕಠಿಣ ಶ್ರಮವನ್ನು ಎಲ್ಲರೂ ಗುರುತಿಸುವರು. ಮನಸ್ಸಿನ ಬೇಸರ ನೀಗುವುದು.

ಸಿಂಹ
ಖಾಸಗಿ ಬದುಕಲ್ಲಿ ಇಂದು ಸವಾಲಿನ ದಿನ. ಸೌಹಾರ್ದ ಸಂಬಂಧಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ. ಮಾತಿನಲ್ಲಿ ಸಹನೆ ಅತ್ಯವಶ್ಯಕ.

ಕನ್ಯಾ
ನಿಮಗಿಂದು ನಿರಾಳ ದಿನ. ಪ್ರಮುಖ ಕಾರ್ಯ ತೃಪ್ತಿಕರವಾಗಿ ಮುಗಿಯುವುದು. ಮನೆಯಲ್ಲಿ ಸೌಹಾರ್ದಯುತ ವಾತಾವರಣ.

ತುಲಾ
ಹೆಚ್ಚುವರಿ ಹೊಣೆ ವಹಿಸಬೇಕಾಗುವುದು. ನಿಮ್ಮ ಕೆಲಸದಲ್ಲಿ ಹೆಚ್ಚು ಎಚ್ಚರ ವಹಿಸಿರಿ. ಸಣ್ಣ ತಪ್ಪೂ ದೊಡ್ಡ ಪರಿಣಾಮ ಉಂಟುಮಾಡೀತು. ನಿರ್ಲಕ್ಷ್ಯ ಸಲ್ಲದು.

ವೃಶ್ಚಿಕ
ಪ್ರಗತಿಪರ ದಿನ. ನಿಮ್ಮ ವಿಶ್ವಾಸ ಹೆಚ್ಚಿಸುವ ಬೆಳವಣಿಗೆ ಸಂಭವಿಸುವುದು. ಸ್ವಂತ ಉದ್ದಿಮೆದಾರರಿಗೆ ಧನಲಾಭ. ಕೌಟುಂಬಿಕ ಶಾಂತಿ, ಸಹಕಾರ.

ಧನು
ಹಿಡಿದ ಕಾರ್ಯವನ್ನು ಸಾಧಿಸದೆ ಹಿಂದೆ ಹೆಜ್ಜೆ ಇಡಬೇಡಿ. ನಿಮಗೆ ದೈವಾನುಕೂಲ ಇದೆ. ಸಣ್ಣ ಪುಟ್ಟ ಅಡ್ಡಿಗಳಿಗೆ ನೀವು ಹಿಂಜರಿಯುವ ಅವಶ್ಯಕತೆ ಇಲ್ಲ.

ಮಕರ
ನಿಮ್ಮ ಬದುಕಿಗೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳಲು ಇಂದು ಸೂಕ್ತವಾಗಿದೆ. ಎಲ್ಲವೂ ನಿಮಗೆ ಪೂರಕವಾಗಿ ಸಂಭವಿಸುವುದು.

ಕುಂಭ
ನಿಮ್ಮ ಕಾರ್ಯ ಸುಗಮವಾಗುವುದು. ಆದರೆ ಯಾರ ಜತೆಗೂ ವಾದಕ್ಕೆ ಇಳಿಯದಿರಿ. ಅದರಿಂದ ನಿಮ್ಮ ಮನಶ್ಯಾಂತಿ ಹಾಳಾದಿತಷ್ಟೆ.

ಮೀನ
ಕಷ್ಟವೆಂದುಕೊಂಡ ಕಾರ್ಯ ಸುಲಭದಲ್ಲಿ ನೆರವೇರುವುದು. ಇತರರ ಸಹಕಾರ ಲಭ್ಯ. ಮನೆಯಲ್ಲಿ ನಿಮ್ಮ ಇಷ್ಟಾನುಕೂಲ ಸಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!