ದಿನ ಭವಿಷ್ಯ | ಸಣ್ಣ ವಿಷಯವೊಂದು ನಿಮ್ಮ ಮನಶ್ಯಾಂತಿ ಕಲಕಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಸಂಕೀರ್ಣ ವಿಷಯಗಳಲ್ಲಿ ನಿಮ್ಮ ಆತ್ಮಸಾಕ್ಷಿಯಂತೆ ನಡಕೊಳ್ಳಿ. ಇತರರ ಸಲಹೆ ಕೇಳಿ ತಪ್ಪು ದಾರಿ ತುಳಿಯದಿರಿ. ಒತ್ತಡಕ್ಕೆ ಮಣಿಯದಿರಿ.

ವೃಷಭ
ದಿನವಹಿ ಜಂಜಾಟದಿಂದ ಬದಲಾವಣೆ ಬಯಸುವಿರಿ. ವೃತ್ತಿಯ ಒತ್ತಡ ಮರೆತು ಕೌಟುಂಬಿಕ ವಿಷಯಕ್ಕೆ ಗಮನ ಕೊಡಿ. ಆಪ್ತರ ಹಿತವಚನ ಪಾಲಿಸಿ.

ಮಿಥುನ
ವೃತ್ತಿಯಲ್ಲಿ ನಿಮ್ಮ  ಕಠಿಣ ಧೋರಣೆಯು ಸಮಸ್ಯೆ ಹುಟ್ಟಿಸಬಹುದು. ಕೆಲವರ ಅಸಹಕಾರ ಎದುರಿಸುವಿರಿ.  ಹೊಂದಾಣಿಕೆ ದಾರಿ ಉತ್ತಮ.

ಕಟಕ
ಸಣ್ಣ ವಿಷಯವೊಂದು ನಿಮ್ಮ ಮನಶ್ಯಾಂತಿ ಕಲಕಬಹುದು. ಅದರ ಪರಿಹಾರಕ್ಕೆ ಆದ್ಯತೆ ಕೊಡಿ.  ಅದನ್ನು ಪರಿಹರಿಸದೆ ಮುಂದೂಡದಿರಿ.

ಸಿಂಹ
ಇತರರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡದಿರಿ.  ಅವರು ಅದನ್ನು ಇಷ್ಟಪಡಲಾರರು. ಇದು ನಿಮ್ಮೊಳಗಿನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಕನ್ಯಾ
ನಿಮ್ಮ ಸಾಮರ್ಥ್ಯಕ್ಕೆ ಸಾಧ್ಯವಾಗುವ ಕಾರ್ಯ ಮಾತ್ರ ಮಾಡಿರಿ. ಇಲ್ಲವಾದರೆ ಹಿನ್ನಡೆ ಕಾಣುವಿರಿ. ಖಾಸಗಿ ಸಂಬಂಧದಲ್ಲಿ ಏರುಪೇರು ಸಂಭವ.

ತುಲಾ
ಅಧಿಕ ಕೆಲಸ. ಅದರ ಒತ್ತಡದಲ್ಲೆ ದಿನ ಕಳೆಯುವಿರಿ. ಹಾಗಾಗಿ ಇನ್ನಿತರ ಕೌಟುಂಬಿಕ ವಿಷಯಗಳಿಗೆ ಸಮಯ ಸಾಲದು. ಆರ್ಥಿಕ ಕೊರತೆ ಕಾಡುವುದು.

ವೃಶ್ಚಿಕ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಬಹುದು. ಖಾಸಗಿ ಬದುಕಲ್ಲಿ ನಿಮಗೆ ಪೂರಕ ಆಗದಿರಲೂಬಹುದು.

ಧನು
ಹಣದ ವಿಚಾರದಲ್ಲಿ ನಿಮಗೆ ಪೂರಕ ಬೆಳವಣಿಗೆ. ಆರ್ಥಿಕವಾಗಿ ಸದೃಢ ಪರಿಸ್ಥಿತಿ. ನೆರವು ಕೇಳಿ ಬಂದವರಿಗೆ ನಿರಾಶೆ ಮಾಡಬೇಡಿ.

ಮಕರ
ವೃತ್ತಿಯಲ್ಲಿ ನಿಮಗೆ ಸಿಕ್ಕುವ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಪ್ರೀತಿಪಾತ್ರರಿಂದ ಭಾವನಾತ್ಮಕ ಪ್ರತಿಸ್ಪಂದನೆ.

ಕುಂಭ
ಕೌಟುಂಬಿಕ ವಿಷಯಗಳಿಗೆ ಹೆಚ್ಚು ಗಮನ ಕೊಡಿ. ನಿಮ್ಮ ಆಪ್ತರನ್ನು ಕಡೆಗಣಿಸಬೇಡಿ.  ಆರ್ಥಿಕವಾಗಿ ಶುಭ ಬೆಳವಣಿಗೆ.

ಮೀನ
ನಿಮ್ಮ ಆರೋಗ್ಯವನ್ನು ಕಡೆಗಣಿಸಬೇಡಿ.  ತಿನ್ನುವ ವಿಷಯದಲ್ಲಿ ಹೆಚ್ಚು ನಿಯಂತ್ರಣ ಸಾಧಿಸಿ. ಮನಸ್ಸಿನ ಏಕಾಗ್ರತೆ ಕಾಯ್ದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!