ದಿನಭವಿಷ್ಯ | ಯುಗಾದಿಯ ಈ ಶುಭದಿನದಂದು ರಾಶಿ ಫಲಗಳು ಹೀಗಿವೆ…

ಮೇಷ
ಹೊಸ ಕಾರ್ಯ, ವ್ಯವಹಾರ ಆರಂಭಿಸಲು ಸಕಾಲ. ಎಲ್ಲವೂ ಸುಗಮವಾಗಿ ಸಾಗು ವುದು. ಬಂಧುಗಳ ಜತೆ ಮಧುರ ಬಾಂಧವ್ಯ. ಕೌಟುಂಬಿಕ ಶಾಂತಿ.

ವೃಷಭ
ಸಂತೋಷದ ದಿನ. ಎಲ್ಲರೊಡನೆ ಕೂಡಿ ಕಳೆಯುವಿರಿ. ಆದರೆ ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ದಿನ ಹಾಳು ಮಾಡಲು ಅವಕಾಶ ಕೊಡದಿರಿ.

ಮಿಥುನ
ಕೌಟುಂಬಿಕ ಸಾಮರಸ್ಯ. ಬಂಧು ಭೇಟಿ. ಉದ್ಯೋಗದಲ್ಲಿ ನೀವು ಬಯಸಿದ ಬೆಳವಣಿಗೆ. ಆಪ್ತರೊಡನೆ ವಾಗ್ವಾದಕ್ಕೆ ಇಳಿಯದಿರಿ, ಶಾಂತ ಚಿತ್ತತೆ ಕಾಯ್ದುಕೊಳ್ಳಿ.

ಕಟಕ
ಎಂದಿಗಿಂತ ಇಂದು ಹೆಚ್ಚು ಉತ್ಸಾಹದ ದಿನ. ಆತ್ಮೀಯರ ಜತೆ ಕಾಲಕ್ಷೇಪ. ಖರೀದಿ ಉತ್ಸಾಹ ಹೆಚ್ಚು. ಹಣ ಖರ್ಚಾದರೂ ಅದು ನಗಣ್ಯವೆನಿಸುವುದು.

ಸಿಂಹ
ನಿಮ್ಮ ಇಡೀ ದಿನದ ಸಂತೋಷವನ್ನು ಸಣ್ಣ ಘಟನೆ ಅಥವಾ ವಾಗ್ವಾದ ಹಾಳು ಮಾಡಬಹುದು. ಹಾಗಾಗಿ ಸಹನೆ ಕಾಯ್ದುಕೊಳ್ಳಿ.

ಕನ್ಯಾ
ವೃತ್ತಿಯಲ್ಲಿ ಉನ್ನತಿ. ಆರ್ಥಿಕ ಲಾಭ. ಬಡ್ತಿ ಸಿಗಬಹುದು. ಸಂಬಂಧದಲ್ಲಿ ಸುಧಾರಣೆ. ದೂರ ಸರಿದವರು ಹತ್ತಿರ ಆಗುವರು.

ತುಲಾ
ದಿನದ ಆರಂಭದಲ್ಲಿ ಕೆಲವು ಅನಪೇಕ್ಷಿತ ಬೆಳವಣಿಗೆ ಸಂಭವಿಸಿದರೂ ಬಳಿಕ ಎಲ್ಲವೂ ಸುಗಮವಾಗಿ ನಿಮಗೆ ನಿರಾಳತೆ ಲಭಿಸುವುದು.

ವೃಶ್ಚಿಕ
ಭಾವನಾತ್ಮಕ ಏರುಪೇರು. ಸಣ್ಣ ವಿಷಯವೂ ನಿಮ್ಮಲ್ಲಿ ಹೆಚ್ಚಿನ ಭಾವಾವೇಶ ಉಂಟು ಮಾಡುವುದು. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿರಿ.

ಧನು
ಹಣದ ವಿಷಯವು ಇಂದು ಆದ್ಯತೆ ಪಡೆಯುವುದು. ನಿರೀಕ್ಷಿತ ಧನಲಾಭ ಉಂಟಾಗುವುದು. ಬಯಸಿದ ಕಾರ್ಯ ಈಡೇರಿಕೆ.

ಮಕರ
ಅನಿರೀಕ್ಷಿತ ಬೆಳವಣಿಗೆ ನಿಮ್ಮ ಮನಸ್ಸಿನ ಶಾಂತಿ ಕದಡಬಹುದು. ಆದರೆ ಬಳಿಕ ಅದು ನಿರಾಳಗೊಳ್ಳುವುದು. ಯಾವುದಕ್ಕೂ ಅಂಜುವ ಅಗತ್ಯವಿಲ್ಲ.

ಕುಂಭ
ಸಮಯದ ಮಿತಿ ಯೊಳಗೆ ನಿಮ್ಮ ಕಾರ್ಯ ಪೂರೈಸಿಕೊಳ್ಳಿ. ಇಲ್ಲವಾದರೆ ಕಾರ್ಯಗಳು ಬಾಕಿ ಉಳಿದು ನಿಮಗೆ ಒತ್ತಡ ಹೆಚ್ಚಾಗಬಹುದು.

ಮೀನ
ಸಂತೋಷ, ಉಲ್ಲಾಸದ ದಿನ. ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ಯೋಜನೆಗಳು ಸಫಲತೆ ಕಾಣುತ್ತವೆ. ಬಂಧು ಭೇಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!