ದಿನಭವಿಷ್ಯ | ಈ ರಾಶಿಯವರ ಸಾಮಾಜಿಕ ಸ್ಥಾನಮಾನಗಳಿಂದು ಹೆಚ್ಚುವುದು

ಮೇಷ
ಮಾಡುವ ಕಾರ್ಯದಲ್ಲಿ ಪೂರ್ಣ ಸ್ವಾತಂತ್ರ್ಯ ಬಯಸುವಿರಿ. ಆದರೆ ನಿಮಗೆ ಅಂತಹ ಮುಕ್ತತೆ ಸಿಗುವುದಿಲ್ಲ. ಹಲವು ಅಡೆತಡೆಗಳು ಬಾಧಿಸುತ್ತವೆ.

ವೃಷಭ
ಆರ್ಥಿಕ ಸಮಸ್ಯೆ ಪರಿಹಾರ. ಹಣದ ಹರಿವು ಹೆಚ್ಚುವುದು. ಉದ್ಯೋಗದಲ್ಲಿ ಅಭಿವೃದ್ಧಿ, ಬಡ್ತಿ ಸಂಭವ. ಕೌಟುಂಬಿಕ ಶಾಂತಿ, ಸಮಾಧಾನ.

ಮಿಥುನ
ಸಾಮಾಜಿಕವಾಗಿ ನಿಮ್ಮ ಸ್ಥಾನಮಾನ ಹೆಚ್ಚುವುದು. ಇತರರ ಮುಖಂಡತ್ವ ವಹಿಸುವಿರಿ. ನಿಮ್ಮ ಮಾರ್ಗದರ್ಶನ ಪಾಲಿಸುವರು.

ಕಟಕ
ನೀವು ಬಯಸಿದ ಕಾರ್ಯ ಈಡೇರುವುದು. ಕಷ್ಟವೆಂದು ಭಾವಿಸಿದ ಕೆಲಸ ಸುಗಮವಾಗುವುದು. ಅನಿರೀಕ್ಷಿತ ಸಹಕಾರ ಒದಗುವುದು.

ಸಿಂಹ
ಮನೆಯಲ್ಲಿನ ಕಾರ್ಯಕ್ಕೆ ಇಂದು ಹೆಚ್ಚು ಗಮನ ಕೊಡಬೇಕಾಗುವುದು. ಕುಟುಂಬಸ್ಥರ ಹಿತಾಸಕ್ತಿಯನ್ನು ಗಮನಿಸಿ. ಅವರ ಬೇಡಿಕೆಗೆ ಸ್ಪಂದಿಸಿ.

ಕನ್ಯಾ
ದಿನವಿಡೀ ಅಸಹನೆ ಕಾಡಬಹುದು. ಅದಕ್ಕೆ ನಿರ್ದಿಷ್ಟ ಕಾರಣ ಇರಬೇಕೆಂದಿಲ್ಲ. ಸಣ್ಣ ಸಣ್ಣ ವಿಷಯವೂ ನಿಮ್ಮ ಸಹನೆಯನ್ನು ಕೆಣಕುತ್ತವೆ.

ತುಲಾ
ಸಣ್ಣ ಸಮಸ್ಯೆಗೆ ಸಿಲುಕುವಿರಿ. ಅದರ ಪರಿಹಾರಕ್ಕೆ ಹಠಾತ್ ಮಾರ್ಗವೂ ಹೊಳೆಯುತ್ತದೆ. ಒಟ್ಟಿನಲ್ಲಿ ದಿನದಂತ್ಯಕ್ಕೆ ಮನಸ್ಸಿಗೆ ನೆಮ್ಮದಿ.

ವೃಶ್ಚಿಕ
ಕೌಟುಂಬಿಕ ಹಿತಾಸಕ್ತಿ ಕಡೆಗಣಿಸುವುದು ಪ್ರತಿಕೂಲ ಪರಿಣಾಮ ಉಂಟು ಮಾಡೀತು. ಅದಕ್ಕೆ ಆಸ್ಪದ ಕೊಡದಿರಿ. ಆರ್ಥಿಕ ಒತ್ತಡ ಕಾಡಬಹುದು.

ಧನು
ಮುಖ್ಯ ವಿಷಯದಲ್ಲಿ ದ್ವಂದ್ವ ಉಂಟಾದೀತು.  ಹೇಗೆ ಮುಂದುವರಿಯ ಬೇಕು ಎಂಬುದು ಅರಿಯದೆ ಗೊಂದಲ. ಅನಿರೀಕ್ಷಿತವಾಗಿ ಅದಕ್ಕೆ ಪರಿಹಾರ ಲಭ್ಯ.

ಮಕರ
ಕಠಿಣ ಹೊಣೆಯೊಂದು ಹೆಗಲೇರುವುದು. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಕುಟುಂಬಸ್ಥರ ಸೂಕ್ತ ನೆರವಿನಿಂದ ಎಲ್ಲವೂ ಸುಗಮವಾಗಲಿದೆ.

ಕುಂಭ
ವಿಭಿನ್ನ  ಕ್ಷೇತ್ರಗಳ ಜನರೊಂದಿಗೆ ಬೆರೆಯುವ ಅವಕಾಶ. ಅವರ ಸಂಗಡ ವಿಚಾರ ವಿನಿಮಯ. ಕೌಟುಂಬಿಕ ಸಮಸ್ಯೆಯೊಂದು ಪರಿಹಾರ ಸಂಭವ.

ಮೀನ
ವೃತ್ತಿಯಲ್ಲಿ ಅಡ್ಡಿ ಎದುರಿಸುತ್ತಿದ್ದರೆ ಅದಕ್ಕೆ ಇಂದು ಪರಿಹಾರ ದೊರಕುವುದು. ನಿಮ್ಮ ಮುಂದಿನ ದಾರಿ ಸುಗಮವಾಗುವುದು. ಆರ್ಥಿಕ ಲಾಭ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!