ದಿನಭವಿಷ್ಯ| ಗುರುವಾರದ ಜಾತಕಫಲಗಳು ಹೀಗಿವೆ…

ಮೇಷ
ದೈನಂದಿನ ಕಾರ್ಯ ಗಳು ಏಕತಾನತೆ ಎನಿಸುತ್ತದೆ. ಇದರಿಂದ ಮನಸ್ಸಿಗೆ ಬೇಸರ. ಹೊಸತನಕ್ಕೆ ತುಡಿಯು
ವಿರಿ. ಆದರೆ ಅವಕಾಶಗಳು ಕಡಿಮೆ.

ವೃಷಭ
ಉದ್ಯೋಗದಲ್ಲಿ ಅನಿಶ್ಚಿತತೆ. ಸಹೋದ್ಯೋಗಿಗಳ ಅಸಹಕಾರ. ಹೊಸ ಉದ್ಯೋಗಕ್ಕೆ ಪ್ರಯತ್ನಿಸುವಿರಿ.  ಸಾಂಸಾರಿಕ ಉದ್ವಿಗ್ನತೆ.

ಮಿಥುನ
ಕೌಟುಂಬಿಕವಾಗಿ ಖುಷಿ.  ಕುಟುಂಬ ಸದಸ್ಯರೊಬ್ಬರು ಉತ್ತಮ ಸಾಧನೆ ಮಾಡುತ್ತಾರೆ. ಹಿರಿಯರ ಹಿತವಚನಕ್ಕೆ ಕಿವಿಗೊಡಿ.

ಕಟಕ
ನಿಮ್ಮ ಸುತ್ತಲಿನ ಬೆಳವಣಿಗೆ ಸೂಕ್ಷ್ಮವಾಗಿ ವೀಕ್ಷಿಸಬೇಕು. ಅದು ನಿಮ್ಮ ಮೇಲೂ ಪರಿಣಾಮ ಬೀರಬಹುದು. ಕೌಟುಂಬಿಕ ಬಿಕ್ಕಟ್ಟು.

ಸಿಂಹ
ಯಾವುದೇ ಕೆಲಸವನ್ನು ಅರೆಮನಸ್ಸಿನಿಂದ ಮಾಡದಿರಿ. ಅದು ನಿಮಗೆ ಉತ್ತಮ ಫಲ ನೀಡಲಾರದು. ಮನಸ್ಸಿಲ್ಲದ ಕೆಲಸ ಮಾಡಲೇ ಬೇಡಿ.

ಕನ್ಯಾ
ವೃತ್ತಿಯಲ್ಲಿ ಮತ್ತು ಕೌಟುಂಬಿಕವಾಗಿ ಕಷ್ಟಗಳು ಬರಬಹುದು. ಅದರಿಂದ ಪಾರಾಗಲು ಧಾರ್ಮಿಕ ವಿಚಾರಗಳ ಮೊರೆ ಹೋಗುವಿರಿ. ನಿಮ್ಮ ಕಷ್ಟ ತಾತ್ಕಾಲಿಕ.

ತುಲಾ
ನಿಮ್ಮ ಹಿತಕ್ಕಿಂತಲೂ ಬೇರೆಯವರ ಹಿತಕ್ಕಾಗಿ ಇಂದು ಶ್ರಮಿಸುವಿರಿ. ಆದರೆ ಅವರಿಂದ ಕೃತಜ್ಞತೆ ನಿರೀಕ್ಷಿಸದಿರಿ. ನೆರವು ಮರೆಯುವವರೇ ಅಧಿಕ.

ವೃಶ್ಚಿಕ
ಆರ್ಥಿಕ ಸಮಸ್ಯೆಗೆ ಸಿಲುಕುವಿರಿ. ಕೆಲಸವೊಂದನ್ನು ಪೂರೈಸಲು ಹಣದ ಅಡಚಣೆ ಕಾಡುವುದು. ಕೌಟುಂಬಿಕ ಒತ್ತಡವೂ ಅಧಿಕ.

ಧನು
ಆರ್ಥಿಕವಾಗಿ ಮತ್ತು ಸಂಬಂಧದ ವಿಚಾರದಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ಆಪ್ತರೊಬ್ಬರು ದೂರವಾಗಬಹುದು. ಭಿನ್ನಮತ ನಿವಾರಿಸಿ.

ಮಕರ
ಇಂದು ದೈಹಿಕ ಹಾಗೂ ಮಾನಸಿಕವಾಗಿ ಶ್ರಮಬೇಡುವಂತಹ ಕಾರ್ಯನಿರ್ವಹಿಸಬೇಕಾಗುವುದು. ಸಹನೆಗೆಟ್ಟು ವರ್ತಿಸ ದಿರಿ. ಅದರಿಂದ ತೊಂದರೆ.

ಕುಂಭ
ಹಿರಿಯರೊಬ್ಬರ ಆರೋಗ್ಯವು ಕಳವಳ ತರುವುದು. ದುಗುಡ ಹೆಚ್ಚುವುದು. ಹಣದ ಮೂಲವೊಂದು ಕೊನೆಗೊಳ್ಳುವುದು. ಮಾನಸಿಕ ಅಶಾಂತಿ.

ಮೀನ
ಆರ್ಥಿಕ ಗಳಿಕೆ ಕುಂಠಿತ. ಅದನ್ನು ಸುಧಾರಿಸಲು ನೀವು ಕ್ರಮ ತೆಗೆದು ಕೊಳ್ಳಬೇಕು. ಹೊಸ ದಾರಿ ಹುಡುಕಬೇಕು. ಅವಶ್ಯ ನೆರವು ದೊರಕುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!