ದಿನಭವಿಷ್ಯ| ಕೆಲ ರಾಶಿಗಳವರು ಆರ್ಥಿಕ ತೊಂದರೆ ಅನುಭವಿಸಬೇಕಾದೀತು..

ಮೇಷ
ನಿಮ್ಮ ಸ್ನೇಹಿತ ಬಳಗ ದೊಡ್ಡದು. ಅವರ ನೆರವು ಇಂದು ನಿಮಗೆ ಬೇಕಾಗುವುದು. ಆ ಮೂಲಕ ಎದುರಾಗುವ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ.

ವೃಷಭ
ನಿಮ್ಮ ಮಹತ್ವಾಕಾಂಕ್ಷೆ ಈಡೇರಿಸುವ ಯತ್ನ ನಡೆಸುವಿರಿ. ಆದರೆ ಅದು ಸಫಲವಾಗದು. ಕೆಲವು ಸಮಸ್ಯೆಗಳನ್ನು ಎದುರಿಸುವಿರಿ. ಆರ್ಥಿಕ ಕೊರತೆ.

ಮಿಥುನ
ಕೆಲವು ಕಟ್ಟುಪಾಡುಗಳನ್ನು ಉಲ್ಲಂಘಿಸಬೇಕೆಂಬ ತುಡಿತ ಮೂಡುವುದು ಸಹಜ. ಆದರೆ ಅದರಲ್ಲಿ ಅಪಾಯವೂ ಇದೆ, ತಿಳಿದಿರಲಿ.

ಕಟಕ
ಬಾಕಿ ಇರುವ ಕಾರ್ಯವನ್ನು ಪೂರೈಸಲು ಆದ್ಯತೆ ಕೊಡಿ. ಖಾಸಗಿ ಜೀವನದಲ್ಲಿ ಉದ್ವಿಗ್ನತೆ ಎದುರಿಸುವಿರಿ. ಬಂಧುಗಳ ಒತ್ತಡ.

ಸಿಂಹ
ನಿಮ್ಮ ಆಪ್ತರನ್ನು ಮೆಚ್ಚಿಸಲು ನೀವಿಂದು ಪ್ರಯತ್ನಿಸ ಬೇಕಾಗುವುದು. ತಪ್ಪಭಿಪ್ರಾಯ ನಿವಾರಿಸಲು ಮೊದಲು ಪ್ರಯತ್ನ ಪಡಿ.

ಕನ್ಯಾ
ನಿಮ್ಮ ಭಾವನೆಗಳಿಗೆ ಕೆಲವರು ಬೆಲೆ ಕೊಡುತ್ತಿಲ್ಲ ಎಂಬ ನೋವು ನಿಮ್ಮದು. ಆಪ್ತರ ಮೇಲಿನ ಪ್ರೀತಿಯಲ್ಲಿ ವ್ಯತ್ಯಯವಾಗದಿರಲಿ.

ತುಲಾ
ಹೊಸ ವಿಷಯಗಳನ್ನು ಅರಿತುಕೊಳ್ಳಬೇಕಾದ ಕಾಲ. ಇಲ್ಲವಾದರೆ ನೀವು ಸ್ಪರ್ಧೆಯಲ್ಲಿ ಹಿಂದೆ ಉಳಿಯುವಿರಿ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ.

ವೃಶ್ಚಿಕ
ನಿಮ್ಮ ಕಾಲ  ಕೆಳಗಿನ ಭೂಮಿ ಸ್ಥಿರವಾಗಿಲ್ಲ ಎಂಬ ಭಾವನೆ ಉದಿಸಬಹುದು. ಭವಿಷ್ಯದ ಅಭದ್ರತೆಯೇ ಅದಕ್ಕೆ ಕಾರಣ.

ಧನು
ಆತ್ಮೀಯರ ದೃಷ್ಟಿಯಲ್ಲಿ ನಿಮ್ಮ ಸ್ಥಾನ ಉನ್ನತಿಗೇರಲಿದೆ. ನಿಮ್ಮ ಕಾರ್ಯಗಳು ಅವರ ಮೆಚ್ಚುಗೆ ಗಳಿಸಲಿದೆ. ಕೌಟುಂಬಿಕ ಬಿಕ್ಕಟ್ಟು ನಿವಾರಣೆ ಆಗುವುದು.

ಮಕರ
ನಿಮ್ಮ ಪ್ರೀತಿಪಾತ್ರರ ಒಳಿತಿಗೆ ನೀವಿಂದು ಪ್ರಯತ್ನ ಪಡಬೇಕಾಗುತ್ತದೆ. ಹಿನ್ನಡೆಗಳು ನಿಮ್ಮ ಸ್ಥೈರ್ಯವನ್ನು ಕುಂದಿಸದಿರಲಿ.

ಕುಂಭ
ಕೌಟುಂಬಿಕ ಬಿಕ್ಕಟ್ಟು  ಪರಿಹರಿಸಲು ಹೆಚ್ಚಿನ ಗಮನ ಕೊಡಬೇಕು. ಬಂಧುಗಳ ನೆರವು ಪಡೆಯಬೇಕಾದೀತು. ಆರ್ಥಿಕ ಸಂಕಷ್ಟ ಬಾಸುವುದು.

ಮೀನ
ಹಣ ಈಗ ಅಗತ್ಯ ಎಂಬ ಅರಿವು ನಿಮ್ಮದು. ಉಳಿತಾಯಕ್ಕೆ ಹೆಚ್ಚು ಆದ್ಯತೆ ಕೊಡುವಿರಿ. ಖರ್ಚು ಕಡಿಮೆ ಮಾಡಲು ಯೋಜಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!