ದಿನಭವಿಷ್ಯ| ಈ ರಾಶಿಯವರಿಗೆ ಇಂದು ಆರೋಗ್ಯ ಸಮಸ್ಯೆ ಬಾಧಿಸುತ್ತದೆ

ಮೇಷ
ಮನಸ್ಸಿನಲ್ಲಿ ಇರುವುದನ್ನೆಲ್ಲ ಹೊರಗೆ ಹಾಕಬೇಡಿ. ಅದು ನಿಮ್ಮನ್ನು ಇಕ್ಕಟ್ಟಿಗೆ ನೂಕಬಹುದು. ವದಂತಿಗಳಿಗೆ ಕಿವಿ ಕೊಡಬೇಡಿ.

ವೃಷಭ
ವೃತ್ತಿ ಬದುಕು ಮತ್ತು ಖಾಸಗಿ ಬದುಕಿನ ಮಧ್ಯೆ ಸಮತೋಲನ ಸಾಧಿಸಿ. ಮಹತ್ವದ ನಿರ್ಧಾರ ತಾಳುವುದು, ಹೂಡಿಕೆ ಮಾಡುವುದು ಇಂದು ಸೂಕ್ತವಲ್ಲ.

ಮಿಥುನ
ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಕ್ಲಿಷ್ಟಕರ ಪರಿಸ್ಥಿತಿಗೆ ಸಿಲುಕುತ್ತೀರಿ. ಕುಟುಂಬಸ್ಥರ ಜತೆ ಸಣ್ಣಪುಟ್ಟ ವಾಗ್ವಾದ ಸಂಭವಿಸಬಹುದು.

ಕಟಕ
ಉದಾಸೀನತೆ ಕಾಡಬಹುದು. ಕೆಲಸದಲ್ಲಿ ನಿರಾಸಕ್ತಿ. ಆರ್ಥಿಕ ವಿಷಯಕ್ಕೆ ಸಂಬಂಧಿಸಿ ಜಾಗರೂಕತೆ ಯಿಂದ ವರ್ತಿಸಿ. ನಷ್ಟವಾದೀತು.

ಸಿಂಹ
ಉದ್ಯಮದಲ್ಲಿ, ವ್ಯಾಪಾರದಲ್ಲಿ ಪ್ರಗತಿ. ಆರ್ಥಿಕ ಕೊರತೆ ನೀಗಲಿದೆ. ಹೊಸ ಸಂಪನ್ಮೂಲ ಒದಗಿ ಬರಲಿದೆ. ಕೌಟುಂಬಿಕ ಸಹಕಾರ.

ಕನ್ಯಾ
ಖಾಸಗಿ ವಿಚಾರದಲ್ಲಿ ಹೆಚ್ಚು ಒತ್ತಡ. ಕೌಟುಂಬಿಕ ಸಾಮರಸ್ಯ ಕಾಪಾಡಲು ಯತ್ನಿಸುತ್ತೀರಿ. ಅದಕ್ಕೆ ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಬೇಕು.

ತುಲಾ
ಸಂತೋಷದ ದಿನ. ಮನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ಸಹಕಾರದ ವಾತಾವರಣ. ಕೌಟುಂಬಿಕ ಆವಶ್ಯಕತೆಗಳು ಈಡೇರುತ್ತವೆ.

ವೃಶ್ಚಿಕ
ನಿಮ್ಮ ವಿರೋಧಿಗಳು ನಿಮ್ಮನ್ನು ಮಣಿಸಲು ಯತ್ನಿಸುತ್ತಾರೆ. ಆದರೆ ಅಂತಿಮವಾಗಿ ನಿಮ್ಮದೇ ಮೇಲುಗೈ. ಆರೋಗ್ಯದಲ್ಲಿ ಏರುಪೇರು ಸಂಭವ.

ಧನು
ನಿಮ್ಮ ಮನಸ್ಸನ್ನು ಮುಕ್ತವಾಗಿ ತೆರೆದಿಡಲು ಸಕಾಲ. ಭಾವನೆಗಳನ್ನು ಅದುಮಿಟ್ಟುಕೊಳ್ಳ ಬೇಡಿ. ಸೂಕ್ತ ಸ್ಪಂದನೆ ದೊರಕುವುದು. ಆರ್ಥಿಕ ಸ್ಥಿತಿ ಸ್ಥಿರ.

ಮಕರ
ಅನವಶ್ಯ ಖರ್ಚು ವೆಚ್ಚ ಬರಬಹುದು. ನಿಮ್ಮ ಆರೋಗ್ಯದ ಕುರಿತಂತೆ ತುಸು ಎಚ್ಚರಿಕೆಯಿಡಿ. ಸಂಬಂಧದಲ್ಲಿ ಏರುಪೇರು ಉಂಟಾಗಬಹುದು.

ಕುಂಭ
ಬದಲಾಗುವ ಹವಾಮಾನವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ತುಸು ಎಚ್ಚರಿಕೆ ವಹಿಸಿ. ಕೌಟುಂಬಿಕ ಒತ್ತಡ.

ಮೀನ
ನಿಮ್ಮ ಕ್ರಿಯಾಶೀಲ ತೆಯು ಇತರರಿಗೂ ಪ್ರೇರಣೆ ನೀಡಲಿದೆ. ದೂರ ಪ್ರಯಾಣ ಸಾಧ್ಯತೆ. ಸೊತ್ತಿನ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ. ಆರೋಗ್ಯ ಸುಧಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!