ದಿನಭವಿಷ್ಯ| ಈ ರಾಶಿಯವರ ಪಾಲಿಗೆ ಇಂದಿನ ದಿನ ಅತ್ಯಂತ ಸಂತೋಷದಾಯಕವಾಗಿರಲಿದೆ!

ಮೇಷ
ಕಾಡುತ್ತಿದ್ದ ಸಮಸ್ಯೆ ಪರಿಹಾರ ಕಾಣುವ ಮೂಲಕ ಮನಸ್ಸಿಗೆ ನಿರಾಳತೆ. ಆಪ್ತರಿಂದ ಕೊಡುಗೆ ಪಡೆಯುವಿರಿ. ಬಂಧುಗಳಿಂದ ಒಳ್ಳೆಯ ಸುದ್ದಿ ಸಿಗಬಹುದು.

ವೃಷಭ
ಇಂದು ಹಣದ ವಿಷಯ ಬದಿಗಿಟ್ಟು ನಿಮ್ಮ ಭಾವನಾತ್ಮಕ ಬೇಡಿಕೆ ಈಡೇರಿಸಲು ಆದ್ಯತೆ ಕೊಡಿ. ಹಣದಿಂದಲೇ ಎಲ್ಲ ಸಂತೋಷ ಸಿಗಲಾರದು.

ಮಿಥುನ
ಮನೆಯ ಪರಿಸರದಲ್ಲಿ ಹೆಚ್ಚು ಕಾಲ ಕಳೆಯುವ ಉದ್ದೇಶ ನಿಮ್ಮದು. ಅದರಿಂದಲೇ ನಿಮಗೆ ಹೆಚ್ಚು ಸಂತೋಷ ಕೂಡ. ಕುಟುಂಬದ ಹಿರಿಯರಿಗೆ ಅನಾರೋಗ್ಯ ಕಾಡೀತು.

ಕಟಕ
ನಿಮ್ಮ ಬದುಕಿನಲ್ಲಿ ಹೊಸ ವ್ಯಕ್ತಿ ಪ್ರವೇಶಿಸಬಹುದು. ಅವರೊಂದಿಗೆ ಆತ್ಮೀಯತೆ ಬೆಳೆಯಬಹುದು. ಆರೋಗ್ಯದತ್ತ ಹೆಚ್ಚು ಗಮನ ಹರಿಸಿ.

ಸಿಂಹ
ಸಹೋದ್ಯೋಗಿ ಜತೆ ವಾಗ್ವಾದ ನಡೆಯ ಬಹುದು. ಮಾತಿನ ಮೇಲೆ ನಿಯಂತ್ರಣವಿಡಿ. ಉದ್ಯೋಗ ಬದಲಾವಣೆ ಯೋಚನೆಯಿದ್ದರೆ ಅದನ್ನು ಬಿಡಿ.

ಕನ್ಯಾ
ಇತರರನ್ನು ಆಕರ್ಷಿಸುವ ಸ್ವಭಾವ ನಿಮ್ಮದು. ಅದು ಇಂದು ಬೆಳಕಿಗೆ ಬರಲಿದೆ. ಆಪ್ತರ ಸಂಗದಲ್ಲಿ  ಸಂತೋಷ ಪಡುವಿರಿ. ಆರ್ಥಿಕ ಸ್ಥಿತಿ ಉತ್ತಮ.

ತುಲಾ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಹೆಚ್ಚು ಹೊಣೆಗಾರಿಕೆ ನಿಮ್ಮ ಹೆಗಲೇರುವುದು. ಅದನ್ನು ನಿಭಾಯಿಸಲು ಇತರರ ನೆರವು ಬೇಕಾಗಬಹುದು.

ವೃಶ್ಚಿಕ
ಏಕಾಂಗಿತನ ಕಾಡುವುದು. ಎಲ್ಲರಿಂದ ದೂರವಾದ ಮನಸ್ಥಿತಿ. ನಿಜವಾಗಿ ನೀವೇ ಬದಲಾಗಬೇಕಾದ ಅಗತ್ಯವಿದೆ. ಸಿಟ್ಟು ಸೆಡವು ದೂರ ಮಾಡಿಕೊಳ್ಳಿ.

ಧನು
ಅನವಶ್ಯ ವೆಚ್ಚಗಳನ್ನು ಕಡಿಮೆ ಮಾಡಿ. ವೃತ್ತಿಯ ಕೆಲಸ ಮತ್ತು ಖಾಸಗಿ ಬದುಕಿನ ಮಧ್ಯೆ ಹೊಂದಾಣಿಕೆ ಸಾಧಿಸಿಕೊಳ್ಳಿ. ಯಾವುದನ್ನೂ ಕಡೆಗಣಿಸಬೇಡಿ.

ಮಕರ
ನಿಮ್ಮ ಜನಪ್ರಿಯತೆ ಹೆಚ್ಚುವಂತಹ ಬೆಳವಣಿಗೆ ಸಂಭವಿಸುವುದು. ಆರ್ಥಿಕ ಲಾಭ. ಕೌಟುಂಬಿಕ ಬಿಕ್ಕಟ್ಟು ಪರಿಹಾರ ಕಂಡು ಮನಸ್ಸಿಗೆ ನಿರಾಳತೆ.

ಕುಂಭ
ಪ್ರಮುಖ ಕಾರ್ಯ ಇದ್ದರೆ ಅದನ್ನು ನಾಳೆಗೆ ಮುಂದೂಡಿ. ಇಂದಿನ ದಿನ ನಿಮಗೆ ಪೂರಕವಾಗಿಲ್ಲ.  ಸಮಾಧಾನ ಕಾಯ್ದುಕೊಳ್ಳಿ.

ಮೀನ
ಕೈಗೊಂಡ ಕಾರ್ಯ ಇಂದು ಮುಕ್ತಾಯ ಕಾಣುವುದು. ಅಡ್ಡಿಗಳ ನಿವಾರಣೆ. ಆರೋಗ್ಯದಲ್ಲಿ ಸುಧಾರಣೆ. ಆಪ್ತರಿಂದ ಸಂತೋಷ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!