ದಿನಭವಿಷ್ಯ | ಈ ರಾಶಿಯವರಿಗಿಂದು ಅನಿರೀಕ್ಷಿತ ಧನಲಾಭ…

ಮೇಷ
ದಿನದ ಸವಾಲು ಎದುರಿಸುವಲ್ಲಿ ಇತರರಿಂದ ಉತ್ತಮ ಸಹಕಾರ, ಬೆಂಬಲ ಸಿಗುವುದು. ಇದರಿಂದ ನಿಮ್ಮ ಕೆಲಸವು ಸುಗಮವಾಗಲಿದೆ.

ವೃಷಭ
ಹೆಚ್ಚು ಹೊಣೆಗಾರಿಕೆ.  ಹಾಗಾಗಿ ಉಳಿದ ವಿಷಯಗಳಿಗೆ ಬಿಡುವು ಸಿಗದು. ಕೆಲಸಕ್ಕೆ ಸಂಬಂಸಿ ಪ್ರಯಾಣ ಸಂಭವ. ಆರ್ಥಿಕ ಪರಿಸ್ಥಿತಿ ಉತ್ತಮ.

ಮಿಥುನ
ವೃತ್ತಿಯಲ್ಲಿ ಕಠಿಣ ನಿಲುವು ತಾಳ ಬೇಕಾದೀತು. ನಿಮಗೆ ಇಷ್ಟವಿಲ್ಲದಿದ್ದರೂ ಇದು ಅನಿವಾರ್ಯ. ಮನೆಯಲ್ಲಿ ಅಭಿಪ್ರಾಯ ಭೇದ.

ಕಟಕ
ಕೆಲಸ ಮಾಡುತ್ತಾ ಹೋದರೆ ಸಾಲದು. ಅದು ನಿರೀಕ್ಷಿತ ಫಲಿತಾಂಶ ನೀಡಿದೆಯೆ ಎಂದೂ ಪರಿಶೀಲಿಸ ಬೇಕು. ಇಲ್ಲವಾದರೆ ಕಾರ್ಯವ್ಯರ್ಥ.

ಸಿಂಹ
ನಿಮ್ಮ ಕೆಲಸದಲ್ಲಿ ತೋರುವ ನಿರಾಸಕ್ತಿ ಪ್ರಶ್ನಿಸಲ್ಪಡಬಹುದು. ನಿಮ್ಮ ತಪ್ಪು ಸಮರ್ಥಿಸುವ ಬದಲು ತಿದ್ದಿಕೊಳ್ಳುವುದು ಉತ್ತಮ.

ಕನ್ಯಾ
ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲ ಪಡೆಯುವಿರಿ. ಕೆಲವರ ಟೀಕೆಗಳು ನಿಮ್ಮನ್ನು ಬಾಸಲಾರವು. ಮನೆಯಲ್ಲಿ ಇತರರ ಸಹಕಾರ ಲಭ್ಯ.

ತುಲಾ
ನಿಮ್ಮ ಆತ್ಮವಿಶ್ವಾಸ ಹೆಚ್ಚಿ ಸುವಂತಹ ಬೆಳವಣಿಗೆ ಸಂಭವಿಸುವುದು. ಹಣಕ್ಕೆ ಸಂಬಂಸಿ ಮುಖ್ಯ ನಿರ್ಧಾರ ತಾಳದಿರಿ. ಕೌಟುಂಬಿಕ ಸಹಕಾರ.

ವೃಶ್ಚಿಕ
ಅನವಶ್ಯ ವಾದವಿವಾದಕ್ಕೆ ಆಸ್ಪದ ಕೊಡದಿರಿ. ಅದರಿಂದ ನಿಮ್ಮ ಮನಸ್ಸಿಗೆ ಹಾಳೇ ಹೊರತು ಬೇರಾವ ಫಲವಿಲ್ಲ. ಇತರರ ಜತೆ ಹೊಂದಾಣಿಕೆಯಿರಲಿ.

ಧನು
ಕುಟುಂಬ ಸದಸ್ಯರಿಂದ ನಿಮ್ಮ ಪ್ರಯತ್ನಗಳಿಗೆ ಬೆಂಬಲ ಪಡೆಯುವಿರಿ. ಆಪ್ತರಿಂದ ಶುಭ ಸುದ್ದಿ ಕೇಳುವಿರಿ. ಸಮಸ್ಯೆ ಪರಿಹಾರದ ಸಂಕೇತ ತೋರುವುದು.

ಮಕರ
ಅನಿರೀಕ್ಷಿತ ಧನ ಲಾಭ. ಮನಸ್ಸು ಕೆಡಿಸುವಂತಹ ಪ್ರಸಂಗ ಸಂಭವಿಸಿದರೂ ನೀವು ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಆರ್ಥಿಕ ಸ್ಥಿತಿ ಉತ್ತಮ.

ಕುಂಭ
ಎಲ್ಲರ ಬೇಕುಬೇಡ ಗಳಿಗೆ ಸ್ಪಂದಿಸುವ ನಿಮ್ಮ ಗುಣ ಮೆಚ್ಚುಗೆ ಗಳಿಸುವುದು. ಆರ್ಥಿಕ ನೆರವು ನೀಡುವಾಗ
ಎಚ್ಚರ. ಹಣ ಮರಳಿ ಬಾರದಿರಬಹುದು.

ಮೀನ
ನಿಮ್ಮ ಚಿಂತನೆಗೆ, ವಿಷಯ ಮಂಡನೆಗೆ ಮೆಚ್ಚುಗೆ ಲಭಿಸುವುದು. ಸಾಂಸಾರಿಕ ಸಮಸ್ಯೆ ಪರಿಹಾರ. ಬಿಕ್ಕಟ್ಟು ದೂರ. ಮನಶ್ಯಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!