ದಿನಭವಿಷ್ಯ | ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನ ಲಾಭ

ಮೇಷ
ವೃತ್ತಿ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬದಲಾವಣೆ ನಿಮ್ಮ ಖಾಸಗಿ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಸಂಗಾತಿ ಜತೆಗೆ ವಾಗ್ವಾದ ಬೇಡ.

ವೃಷಭ
ಇಂದಿನ ದಿನ ನಿಮ್ಮ ಪಾಲಿಗೆ ಎಂದಿನಂತಲ್ಲ. ಕೆಲವು ಅಸಹಜ ಘಟನೆ ಸಂಭವಿಸಬಹುದು. ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರಬಹುದು.

ಮಿಥುನ
ಆರ್ಥಿಕ ವಿಷಯಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರ ತೆಗೆದುಕೊಳ್ಳ ಬೇಕಾಗುವುದು. ನಿಮ್ಮ ಕೌಶಲದಿಂದ ಕಾರ್ಯಸಾಧನೆ. ಸಾಂಸಾರಿಕ ನೆಮ್ಮದಿ.

ಕಟಕ

ಸುಗಮ ದಿನ. ಉದ್ಯೋಗ ಸಂಬಂ ಆತಂಕ ಪರಿಹಾರ. ಆರ್ಥಿಕ ಲಾಭಕ್ಕೆ ಯೋಜನೆ ಸಿದ್ಧಪಡಿಸಿ. ಆಹಾರದ ವಿಷಯದಲ್ಲಿ ಎಚ್ಚರ ವಹಿಸಿ.

ಸಿಂಹ
ಆರ್ಥಿಕ ಪರಿಸ್ಥಿತಿಗೆ ಸಂಬಂಸಿ ಯಾವುದೇ ಅವಸರದ ನಿರ್ಧಾರ ತಾಳದಿರಿ. ಇತರರಿಗೆ ಸಾಲ ಕೊಡುವುದು, ಸಾಲ ಪಡೆಯುವುದು ಸೂಕ್ತವೆನಿಸದು.

ಕನ್ಯಾ
ನಿಮ್ಮ ಕಾರ್ಯಕ್ಕೆ ಎಲ್ಲರ ಬೆಂಬಲ ದೊರಕುವುದು. ಅನಿರೀಕ್ಷಿತ ವಲಯದಿಂದ ಆರ್ಥಿಕ ಲಾಭ ಉಂಟಾಗಲಿದೆ. ಕೌಟುಂಬಿಕ ಶಾಂತಿ.

ತುಲಾ
ಬಾಕಿ ಉಳಿದ ಕೆಲಸ ಪೂರೈಸಲು ಶ್ರಮ ಪಡಬೇಕಾಗುತ್ತದೆ. ಅವಸರ ಮಾಡಿ ತಪ್ಪೆಸಗದಿರಿ. ಸಾವಧಾನದಿಂದ ಕಾರ್ಯ ನಿರ್ವಹಿಸಿ.

ವೃಶ್ಚಿಕ
ಕಠಿಣವಾದರೂ ಗುರಿ ಸಾಸುವುದು ಕಷ್ಟವೇನಲ್ಲ. ವೃತ್ತಿಯಲ್ಲಿ  ಉತ್ಸಾಹದ ದಿನ. ಇತರರ ಸಹಕಾರ ಮನಸ್ಸಿಗೆ ನೆಮ್ಮದಿ ತರುತ್ತದೆ. ಸಾಂಸಾರಿಕ ಸಮಾಧಾನ.

ಧನು
ನಿಮ್ಮ ದೌರ್ಬಲ್ಯವನ್ನು ಇತರರು ದುರು ಪಯೋಗ ಮಾಡದಂತೆ ಎಚ್ಚರ ವಹಿಸಿ. ಕೆಲವರ ಮೆದು ಮಾತಿಗೆ ಮರುಳಾಗಬೇಡಿ. ಕೌಟುಂಬಿಕ ನೆಮ್ಮದಿ.

ಮಕರ
ಕೆಲಸದ ಒತ್ತಡದಿಂದ ವಿರಾಮ ಪಡೆಯುವಿರಿ. ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯುವ ಅವಕಾಶ. ಬಂಧುಗಳ ಬೇಡಿಕೆ ಈಡೇರಿಸಲು ಕಷ್ಟ ಪಡುವಿರಿ.

ಕುಂಭ
ವಾಗ್ವಾದಕ್ಕೆ ಮುಂದಾಗಬೇಡಿ. ಅದು ಗಂಭೀರ ಸ್ವರೂಪ ತಾಳಬಹುದು. ಆರ್ಥಿಕ ಅಡಚಣೆ ಉಂಟಾಗಬಹುದು. ನೆರವಿಗೆ ಕಾಯಬೇಡಿ.

ಮೀನ
ನಿಮ್ಮ ಬುದ್ದಿಮತ್ತೆಗೆ ಸವಾಲೊಡ್ಡುವ ಪ್ರಸಂಗ ಉದ್ಭವಿಸು ತ್ತದೆ. ಅದರಲ್ಲಿ  ಉತ್ತೀರ್ಣರಾಗುವಿರಿ. ಕೌಟುಂಬಿಕ ಸಮಸ್ಯೆ ಪರಿಹಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!