ದಿನಭವಿಷ್ಯ | ಸೋಮವಾರದ ರಾಶಿಫಲಗಳು ಹೀಗಿವೆ..

ಮೇಷ
ಇದ್ದುದರಲ್ಲೆ ಸಂತೋಷ ಪಡುವ ದಿನವಿದು. ಇರುವುದರಲ್ಲೇ ತೃಪ್ತಿ. ಪ್ರೀತಿಯ ವಿಷಯವು ನಿಮ್ಮ ಮನಸ್ಸನ್ನು ಆವರಿಸುತ್ತದೆ. ಆಪ್ತರ ಜತೆಗೆ ಕಾಲಕ್ಷೇಪ.

ವೃಷಭ
ವೃತ್ತಿ ಕ್ಷೇತ್ರದಲ್ಲಿ ನಿಮಗೆ ಪೂರಕ ವಾದ ದಿನ. ಎಲ್ಲವೂ ಸಲೀಸು. ಸಂಜೆ ವೇಳೆಗೆ ನಿಮ್ಮ ಮನಸ್ಸು ಕೆಡಿಸುವ ಪ್ರಸಂಗ ಸಂಭವಿಸಬಹುದು. ಆರ್ಥಿಕ ಒತ್ತಡ.

ಮಿಥುನ
ಉತ್ಸಾಹದ ದಿನ. ನಿಮ್ಮ ಗುರಿಯ ಕುರಿತು ಸ್ಪಷ್ಟತೆಯಿರಲಿ. ಬೇರೆ ಕಡೆಗೆ ಮನಸ್ಸು ವಾಲದಂತೆ ನೋಡಿಕೊಳ್ಳಿ. ಕೌಟುಂಬಿಕ ಸಹಕಾರ.

ಕಟಕ
ನಿಮ್ಮ ಹಣಕಾಸು ವ್ಯವಹಾರದ ಕುರಿತಂತೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯ. ಪ್ರಮುಖ ಖರ್ಚುಗಳಿಗೆ ಹಣ ಹೊಂದಿಸಬೇಕಾಗಿದೆ.

ಸಿಂಹ
ನಿಮ್ಮ ಕಾರ್ಯ ವ್ಯವಹಾರ ಕೆಲವರನ್ನು ಪ್ರೇರೇಪಿಸುವುದು. ನಿಮಗೆ ಪೂರಕವಾಗಿ ಸ್ಪಂದಿಸುವ ವ್ಯಕ್ತಿಗಳ ಜತೆ ಒಡನಾಟ. ಒಟ್ಟಿನಲ್ಲಿ ಕುಶಿಯ ದಿನ.

ಕನ್ಯಾ
ವೃತ್ತಿಯಲ್ಲಿ ಕೆಲವು ವಿಷಯಗಳು ನಿಮಗೆ ಪೂರಕವಾಗಿ ನಡೆಯುತ್ತವೆ. ಆದರೆ ಕೌಟುಂಬಿಕವಾಗಿ ನಿಮಗೆ ಅಸಮಾಧಾನ ಹೆಚ್ಚುವ ಬೆಳವಣಿಗೆ.

ತುಲಾ
ನಿಮಗೆ ಇಷ್ಟದ ವಿಷಯದಲ್ಲಿ ತೊಡಗಿಕೊಳ್ಳುವ ಅವಕಾಶ. ಇಂದು ಯಾವುದೇ ಕಾರ್ಯದಲ್ಲೂ ನಿಮಗೆ ಯಶಸ್ಸು ದೊರಕುವುದು.

ವೃಶ್ಚಿಕ
ಮಾನಸಿಕ ಒತ್ತಡ. ವೈಯಕ್ತಿಕ ಬದುಕಿನಲ್ಲಿ  ಕೆಲವು ಅನಪೇಕ್ಷಿತ ಬೆಳವಣಿಗೆ. ಆಪ್ತರು ನಿಮ್ಮನ್ನು ಕಡೆಗಣಿಸುತ್ತಿದ್ದಾರೆಂಬ ನೋವು.

ಧನು
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಆದರೆ ನಿಮ್ಮ ಬದ್ಧತೆಯನ್ನು ಕದಲಿಸಲು ಸಾಧ್ಯವಾಗದು. ಹಿನ್ನಡೆಗೆ ಅಂಜದಿರಿ, ಮುಂದೆ ಒಳಿತು ಕಾದಿದೆ.

ಮಕರ
ನೀರಸ ದಿನ. ಹೆಚ್ಚಿನ ಏರುಪೇರು ಸಂಭವಿಸದು. ಆದರೆ ಸದ್ಯದಲ್ಲೆ ಒಳ್ಳೆಯ ಬೆಳವಣಿಗೆಯೊಂದು ಸಂಭವಿಸುವುದು, ನಿರೀಕ್ಷಿಸಿ.

ಕುಂಭ
ಇತರರೊಂದಿಗೆ ನಿಮ್ಮ ಉತ್ತಮ ಸಂವಹನ ಕಲೆಯಿಂದಾಗಿ ವೃತ್ತಿಯಲ್ಲಿ  ಬೆಳವಣಿಗೆ ಸಾಸುವಿರಿ. ಅಡ್ಡಿಗಳು ಒದಗಿದರೂ ಅದನ್ನು ನಿಭಾಯಿಸುವಿರಿ.

ಮೀನ
ಉತ್ಸಾಹದ ದಿನ. ಎಲ್ಲವೂ ನೀವು ಅಂದುಕೊಂಡಂತೆ ನಡೆಯುವುದು. ನಿಮ್ಮ ವಿರೋಗಳು ಹಿನ್ನಡೆ ಸಾಸುವರು. ಆರ್ಥಿಕ ಪ್ರಗತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!