ದಿನಭವಿಷ್ಯ | ಇಂದು ನಿಮ್ಮ ಕಾರ್ಯದಲ್ಲಿ ಯಶಸ್ಸು, ವೃತ್ತಿಯಲ್ಲಿ ಉನ್ನತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೇಷ
ಮಾಡಲು ಹಲವು ಕಾರ್ಯಗಳಿವೆ. ಆದರೆ ಯಾವುದೂ ಪೂರ್ಣ ಗೊಳ್ಳುವುದಿಲ್ಲ. ಹೊಸ ದಾರಿ ಕಂಡುಹುಡುಕಿ. ಸೂಕ್ತ ನೆರವನ್ನೂ ಪಡೆಯಿರಿ.

ವೃಷಭ
ನಿಮ್ಮ ಉದ್ದೇಶವೊಂದು ಈಡೇರುವುದು. ಆದರೂ ಮನದಲ್ಲಿ ತೃಪ್ತಿಯಿಲ್ಲ. ಏನೋ ಕೊರಗು ಬಾಧಿಸುವುದು. ಆತ್ಮೀಯರು ನಿಮ್ಮಿಂದ ದೂರ ಸರಿಯಬಹುದು.

ಮಿಥುನ
ಇಂದು ನಿಮ್ಮ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಸಂಭವನೀಯ ವಿಘ್ನವು ದೂರವಾಗುವುದು. ಬಂಧುಗಳಿಂದ ಸೂಕ್ತ ಸಹಕಾರ ಲಭ್ಯ. ವೃತ್ತಿಯಲ್ಲಿ ಉನ್ನತಿ.

ಕಟಕ
ಕೆಲಸದ ಒತ್ತಡವು ನಿಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡಬಹುದು. ಕುಟುಂಬಸ್ಥರ ಜತೆ ಕಾಲ ಕಳೆಯುವ ಯೋಜನೆಗೆ ಅಡ್ಡಿ ತಂದೀತು. ಆರ್ಥಿಕ ಕೊರತೆ ಕಾಡುವುದು.

ಸಿಂಹ
ಹಣದ ಕೊರತೆ ಕಾಡ ಬಹುದು. ಆದರೆ ಅದನ್ನು ಸರಿಯಾಗಿ ನಿಭಾಯಿಸಬಲ್ಲಿರಿ. ಬಂಧುಗಳಿಂದ ನೆರವು. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುವುದು.

ಕನ್ಯಾ
ವೃತ್ತಿಯಲ್ಲಿನ ಒತ್ತಡ ಕಡಿಮೆಯಾಗುವುದು. ಇದರಿಂದ ಮನಸ್ಸಿಗೆ ನಿರಾಳ. ಆಪ್ತರ ಜತೆಗೆ ಉಲ್ಲಾಸದ ಕಾಲ ಕಳೆಯುವ ಅವಕಾಶ. ಆರ್ಥಿಕ ಉನ್ನತಿ.

ತುಲಾ
ನಿಮ್ಮ ಕಾರ್ಯಗಳನ್ನು ಸಕಾಲದಲ್ಲಿ ಮುಗಿಸಲು ಸಮರ್ಥರಾಗುವಿರಿ. ಇದರಿಂದ ಮೆಚ್ಚುಗೆ ಪಡೆಯುವಿರಿ. ಆರೋಗ್ಯ ಸಮಸ್ಯೆ ಕಾಡಬಹುದು.

ವೃಶ್ಚಿಕ
ವೃತ್ತಿ, ವ್ಯವಹಾರ, ಕೌಟುಂಬಿಕ ಪರಿಸ್ಥಿತಿ ಎಲ್ಲವೂ ಇಂದು ನಿಮಗೆ ಪೂರಕವಾಗಿ ಸಾಗುವುದು. ಸಂತೋಷ, ವಿನೋದ ಎಲ್ಲವನ್ನು ಅನುಭವಿಸುವಿರಿ.

ಧನು
ಹೊಸ ಆರ್ಥಿಕ ವ್ಯವಹಾರ ನಡೆಸುವ ಮುನ್ನ ಸಮಾಲೋಚನೆ ನಡೆಸಿ. ಕೌಟುಂಬಿಕ ಪರಿಸರ ಹಿತಕರ. ಬಂಧುಗಳಿಂದ ಮನಮೆಚ್ಚುವ ಮಾತು.

ಮಕರ
ಇಂದು ನಿಮಗೆ ತೃಪ್ತಿಕರ ದಿನ. ಕೆಲವು ವಿಷಯಗಳಲ್ಲಿ ನೀವಿಂದು ಸಫಲತೆ ಕಾಣುವಿರಿ. ಕಾಡುತ್ತಿದ್ದ ಚಿಂತೆ ಪರಿಹಾರ. ಆಪ್ತರ ಜತೆ ಸಂವಾದ.

ಕುಂಭ
ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ನೀವು ಸ್ವತಂತ್ರರು ನಿಜ. ಆದರೆ ಅದರಿಂದ ಇತರರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಿ. ಅವರಿಗೂ ಭಾವನೆಗಳಿವೆ.

ಮೀನ
ಕೆಲಸಮಯದ ನಿಮ್ಮ ಪ್ರಯತ್ನವು ಫಲ ನೀಡುವುದು. ನಿಮ್ಮ ಉದ್ದೇಶ ಸಫಲತೆ ಕಾಣುವುದು. ಆಪ್ತೇಷ್ಟರಿಂದ ನಿಮಗೆ ಒಳಿತಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!