ದಿನಭವಿಷ್ಯ | ಭಾನುವಾರದ ರಾಶಿಫಲಗಳು ಹೀಗಿವೆ ನೋಡಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮೇಷ

ವಿರಾಮದ ದಿನ. ಹೆಚ್ಚಿನ ಒತ್ತಡಗಳಿಲ್ಲ. ಬಂಧುಮಿತ್ರರ ಜತೆ ಕೂಡಿ ಕಳೆಯುವ ಅವಕಾಶ. ಕುಟುಂಬ ಸದಸ್ಯರಿಂದ ಉತ್ತಮ ಸಹಕಾರ.

ವೃಷಭ
ಬಿರುಸು ಮಾತು ಮನೆಯ ಶಾಂತಿ ಕೆಡಿಸಬಹುದು. ಹಾಗಾಗಿ ಮಾತಿನಲ್ಲಿ ಸೌಮ್ಯತೆಯಿರಲಿ. ಇತರರ ಭಾವನೆಗೆ ಪ್ರತಿಸ್ಪಂದಿಸಿರಿ.

ಮಿಥುನ
ಉದ್ಯೋಗದಲ್ಲಿ ಅನಿಶ್ಚಿತತೆ. ಇದರಿಂದ ಮನಸ್ಸಿಗೆ ವ್ಯಾಕುಲ. ಆಪ್ತರ ಸಂಗದಲ್ಲಿ ಸಾಂತ್ವನ ಪಡೆಯುವಿರಿ. ಹಣಕಾಸು ಬಿಕ್ಕಟ್ಟು ಹೆಚ್ಚಬಹುದು.

ಕಟಕ
ಆತ್ಮೀಯ ಕೌಟುಂಬಿಕ ಪರಿಸರ. ಇದರಿಂದ ನಿಮ್ಮ ದಿನವು ನಿರಾಳವಾಗಿ ಮತ್ತು ಸಂತೋಷದಿಂದ ಕಳೆಯುವುದು. ಬಂಧುಗಳಿಂದ ಒಳ್ಳೆಯ ಸುದ್ದಿ ಸಿಗಬಹುದು.

ಸಿಂಹ
ಕೌಟುಂಬಿಕ ಸಂಘರ್ಷ ಉಂಟಾದೀತು. ಭಿನ್ನಮತ ಪರಿಹರಿಸಲು ಆದ್ಯತೆ ಕೊಡಿ. ನನ್ನದೇ ನಿಲುವು ಸರಿಯೆಂಬ ಜಿಗುಟು ಸ್ವಭಾವ ಬಿಡಬೇಕು. ಹೊಂದಾಣಿಕೆ ಮುಖ್ಯ.

ಕನ್ಯಾ
ಸಣ್ಣಪುಟ್ಟ ವಿವಾದ, ಜಗಳಗಳಿಂದ ದೂರವಿರಿ. ಇಲ್ಲವಾದಲ್ಲಿ ನಿಮ್ಮ ಮನಶ್ಯಾಂತಿ ಹಾಳಾದೀತು. ವದಂತಿ ಹರಡುವವರನ್ನು ಹತ್ತಿರ ಬಿಡಬೇಡಿ.

ತುಲಾ
ಸುಲಭವೆಂದು ಭಾವಿಸಿದ ವಿಷಯವೊಂದು  ಕಷ್ಟವಾದೀತು. ಇದರಿಂದ ಅನವಶ್ಯ ಒತ್ತಡಕ್ಕೆ ಸಿಲುಕುವಿರಿ. ಕೌಟುಂಬಿಕ ಬೇಡಿಕೆಗಳು ಹೆಚ್ಚುತ್ತವೆ. ಅಧಿಕ ಖರ್ಚು.

ವೃಶ್ಚಿಕ
ಆಪ್ತರ ವರ್ತನೆಯಿಂದ ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಎಲ್ಲದಕ್ಕೂ ಇತರರನ್ನು ಅವಲಂಬಿಸದಿರಿ. ನಿಮ್ಮದೇ ಸ್ವಂತಿಕೆ ಬೆಳೆಸಿಕೊಳ್ಳಿ.

ಧನು
ಕುಟುಂಬ ಸದಸ್ಯರ ಸಮ್ಮುಖದಲ್ಲಿ ಹೆಚ್ಚು ಕಾಲ ಕಳೆಯುವ ಅವಕಾಶ. ಕೌಟುಂಬಿಕ ಬದ್ಧತೆ ಈಡೇರಿಸುವಿರಿ. ಇತರರ ಮನಸ್ಸು ಗೆಲ್ಲುವಿರಿ. ಆರ್ಥಿಕ ಸುಧಾರಣೆ.

ಮಕರ
ಸಾಮಾಜಿಕ ಕಾರ್ಯದಲ್ಲಿ ಇಂದು ಹೆಚ್ಚು ತೊಡಗಿಕೊಳ್ಳುವ ಅವಕಾಶ. ಕೆಲವರು ನಿಮ್ಮನ್ನು ಟೀಕಿಸಬಹುದು. ಅದಕ್ಕೆ ಎದೆಗುಂದದಿರಿ.

ಕುಂಭ
ಆರ್ಥಿಕ ಹೊರೆ ಹೆಚ್ಚುವಂತಹ ಪ್ರಸಂಗ ಉಂಟಾದೀತು. ಅದನ್ನು ಸಮಾಧಾನದಿಂದ ನಿಭಾಯಿಸಿ. ಸೂಕ್ತ ಆರ್ಥಿಕ ನೆರವು ನಿಮಗೆ ಒದಗಲಿದೆ.

ಮೀನ
ಸಕಾಲದಲ್ಲಿ ನಿಮ್ಮ ಕಾರ್ಯ ಮುಗಿಸಿ. ಇಲ್ಲವಾದರೆ ಕೆಲಸದ ಹೊರೆ ಹೆಚ್ಚಲಿದೆ. ಬಂಧುಗಳ ಜತೆಗಿನ ಸಂಬಂಧ ಹಾಳಾಗುವ ಪ್ರಸಂಗ ಒದಗೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!