Monday, August 8, 2022

Latest Posts

ಹೊಸನಗರ ವಿಂಗಡಣೆ: ಕ್ಷೇತ್ರ ಮರಳಿ ಪಡೆಯುವವರೆಗೆ ನಮ್ಮ ಹೋರಾಟ ಎಂದ ಚನ್ನಬಸವ ಸ್ವಾಮೀಜಿ

ಹೊಸದಿಗಂತ ವರದಿ, ಶಿವಮೊಗ್ಗ:

ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯ ಸಮಯದಲ್ಲಿ ಹೊಸನಗರ ಕ್ಷೇತ್ರವನ್ನು ತೀರ್ಥಹಳ್ಳಿ ಮತ್ತು ಸಾಗರ ಕ್ಷೇತ್ರಕ್ಕೆ ಸೇರಿಸಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಕೈಬಿಡಲಾಗಿತ್ತು. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಮಾಡಿರುವುದರಿಂದ ನಮ್ಮ ಕ್ಷೇತ್ರ ನಷ್ಟವಾಗಿದೆ. ಈ ಕ್ಷೇತ್ರವನ್ನು ಮರಳಿ ಪಡೆಯುವವರೆವಿಗೆ ನಮ್ಮ ಹೋರಾಟ ನಿಲ್ಲದು ಎಂದು ಹೊಸನಗರ ತಾಲೂಕು ಮೂಲಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಮಾಜಿ ಶಾಸಕ ಬಿ.ಸ್ವಾಮಿರಾವ್‌ ನೇತೃತ್ವದಲ್ಲಿ ಮಾವಿನಕೊಪ್ಪದಿಂದ ಹೊಸನಗರ ತಾಲ್ಲೂಕು ಕಚೇರಿಯವರೆವಿಗೆ ಕ್ಷೇತ್ರವನ್ನು ಮರಳಿ ಪಡೆಯವ ಸಲುವಾಗಿ ಪ್ರತಿಭಟನೆ ನಡೆಸಿ ಹೊಸನಗರದ ತಹಶೀಲ್ದಾರ್‌ರವರಿಗೆ ಮನವಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಹೊಸನಗರ ಕ್ಷೇತ್ರವನ್ನು ಮರಳಿ ಪಡೆಯುವ ಯತ್ನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಹೊಸನಗರ ತಾಲೂಕು ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡು ಸುಮಾರು ವರ್ಷಗಳು ಕಳೆದಿದೆ. ಕಳೆದು ಹೋಗುವ ಸಂದರ್ಭದಲ್ಲಿ ಎಲ್ಲ ಪಕ್ಷದ ರಾಜಕೀಯ ನಾಯಕರು ಹೋರಾಟ ಮಾಡಿದ್ದರೆ ಈಗ ಕಷ್ಟ ಪಡುವ ಅಗತ್ಯವಿರಲಿಲ್ಲ. ಅದರೆ ಈಗ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡಾಗಿದೆ ಈ ಕ್ಷೇತ್ರವನ್ನು ಮರಳಿ ಪಡೆಯುವವರೆವಿಗೆ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss