ಜಮ್ಮುವಿನಲ್ಲಿ ಪ್ರವಾಸಿಗರ ಮನಸೆಳೆದ ಹೌಸ್‌ಬೋಟ್ ಉತ್ಸವ: ಪ್ರಕೃತಿ ಸೌಂದರ್ಯಕ್ಕೆ ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮವು ಮತ್ತಷ್ಟು ಅಭಿವೃದ್ದಿಗೊಂಡಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯು ಆಯೋಜಿಸಿದ್ದ ಹೌಸ್‌ಬೋಟ್ ಉತ್ಸವ ಪ್ರವಾಸಿಗರನ್ನು ಮನಸೂರೆಗೊಳಿಸಿದ್ದು, ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಈ ಕುರಿತು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆ ಟ್ವಿಟರ್ ನಲ್ಲಿ ದಾಲ್ ಸರೋವರ ಮತ್ತು ನಾಗೀನ್ ಸರೋವರದಲ್ಲಿ ನಡೆದ ಹೌಸ್‌ಬೋಟ್ ಉತ್ಸವದ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದೆ.

ಡಿಸೆಂಬರ್ 7-8 ರಂದು ದಾಲ್ ಲೇಕ್ ಶ್ರೀನಗರದಲ್ಲಿ ನಡೆದ ಹೌಸ್‌ಬೋಟ್ ಉತ್ಸವದ ಕೆಲವು ನೋಟಗಳು ಎಂದು ಶೀರ್ಷಿಕೆಯನ್ನು ಇದಕ್ಕೆ ನೀಡಲಾಗಿದೆ. ಹಲವಾರು ಕಾಶ್ಮೀರಿ ಜನಪದ ಕಲಾವಿದರು ಲೇಸರ್ ಶೋ ಮತ್ತು ಲೈವ್ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿದ್ದಾರೆ.

ಜನವರಿಯಿಂದ 1.62 ಕೋಟಿಗೂ ಹೆಚ್ಚು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ, ಇದು ಭಾರತದ ಸ್ವಾತಂತ್ರ್ಯದ ಕಳೆದ 75 ವರ್ಷಗಳಲ್ಲಿ ಹಿಂದಿನ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚು ಜನಸಂದಣಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!