ಮನೆಯೆಲ್ಲಾ ಗುಡಿಸಿ, ನೆಲ ವರೆಸಿ, ಸ್ನಾನ ಮಾಡಿ, ದೇವರ ಮನೆಯಲ್ಲಿ ಚಂದದ ಅಲಂಕಾರ ಮಾಡಿ, ಊದಿನಬತ್ತಿ ಹಚ್ಚಿ ಪೂಜೆ ಮಾಡಿದರೆ ಮನೆಯಲ್ಲಾ ಘಮ ಘಮ.
ಊದಿನ ಕಡ್ಡಿಗೆ ಸ್ವಲ್ಪ ಬೆಂಕಿ ತಾಗಿಸಿದರೂ ಸಾಕು. ಕಿಡಿ ಉಳಿದುಬಿಡುತ್ತದೆ. ಇದರಿಂದ ನಿಧಾನವಾಗಿ ಕಡ್ಡಿ ಉರಿದು, ಮನೆಯೆಲ್ಲಾ ಪರಿಮಳ ಬೀರುತ್ತದೆ.
ಆದರೆ ಊದಿನಕಡ್ಡಿಗೆ ಬೆಂಕಿ ಹತ್ತೋದು ಹೇಗೆ? ಇದರಿಂದ ಸುವಾಸನೆ ಬರೋದು ಹೇಗೆ?
ಪ್ರತಿಯೊಂದು ಕಂಪನಿಯೂ ಊದಿನಬತ್ತಿ ತಯಾರಿಕೆಯಲ್ಲಿ ವಿಧವಿಧನ ಕೆಮಿಕಲ್ಸ್ ಬಳಸಿರುತ್ತದೆ. ಈ ಕೆಮಿಕಲ್ನಿಂದ ಅಗರಬತ್ತಿಗೆ ಬೆಂಕಿ ಹತ್ತುತ್ತದೆ. ಹೆಚ್ಚಿನ ಪಕ್ಷ ಚಾರ್ಕೋಲ್ ಅಥವಾ ಮರದ ಪುಡಿಯನ್ನು ಅಗರಬತ್ತಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರಿಂದ ಕಿಡಿ ಹೊತ್ತಿ ನಿಧಾನವಾಗಿ ಸುವಾಸನೆ ಹೊರಬೀರುತ್ತದೆ.