Wednesday, August 10, 2022

Latest Posts

ನಿಮ್ಮ ದೇಹ ಗಂಡಸಿನಂತೆ ಕಾಣುತ್ತಿದೆ ಎಂದ ಅಭಿಮಾನಿಗೆ ತಾಪ್ಸಿ ಪನ್ನು ಹೇಳಿದ್ದೇನು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಾಮಾನ್ಯವಾಗಿ ಯಾವುದೇ ಹೆಣ್ಣುಮಕ್ಕಳಿಗೆ ನಿಮ್ಮ ದೇಹ ಹುಡುಗರ ರೀತಿ ಇದೆ ಎಂದರೆ ಇಷ್ಟ ಆಗೋದಿಲ್ಲ.
ಬದಲಾಗಿ ಸಿಟ್ಟು ಬರುತ್ತದೆ. ಆದರೆ ಬಹುಭಾಷಾ ತಾರೆ ತಾಪ್ಸಿ ಪನ್ನುಗೆ ಅಭಿಮಾನಿಯೊಬ್ಬರು ನಿಮ್ಮ ದೇಹ ಹುಡುಗನ ರೀತಿ ಇದೆ ಎಂದಿದ್ದಕ್ಕೆ ತಾಪ್ಸಿ ಖುಷಿಯಾಗಿದ್ದಾರೆ.
ಅ.15 ರಂದು ತಾಪ್ಸಿ ಅಭಿನಯದ ರಶ್ಮಿ ರಾಕೆಟ್ ಸಿನಿಮಾ ಜೀ5 ಒಟಿಟಿಯಲ್ಲಿ ತೆರೆಕಾಣಲಿದೆ. ಇದರಲ್ಲಿ ತಾಪ್ಸಿ ಅಥ್ಲೀಟ್ ಪಾತ್ರ ಮಾಡಿದ್ದಾರೆ. ಅದಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸಿ ದೇಹವನ್ನು ದಂಡಿಸಿದ್ದಾರೆ.
ಹುಡುಗನ ರೀತಿ ಕಾಣೋ ಇಷ್ಟು ಗಟ್ಟಿಯಾದ ದೇಹ ತಾಪ್ಸಿ ಅವರದ್ದೇ ಇರಬೇಕು ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
ಅದಕ್ಕೆ ತಾಪ್ಸಿ ಈ ಕಮೆಂಟ್ ನೆನಪಿನಲ್ಲಿರಲಿ. ಸೆ.23 ರವರೆಗೆ ಕಾಯಿರಿ. ನಿಜವಾಗಿಯೂ ಧನ್ಯವಾದ ಈ ಪ್ರಶಂಸೆ ಪಡೆಯೋದಕ್ಕೆ ನಾನು ತುಂಬಾ ಕಷ್ಟಪಟ್ಟಿದ್ದೇನೆ ಎಂದು ಹೇಳಿದ್ದಾರೆ. ಎಲ್ಲವನ್ನೂ ಪಾಸಿಟಿವ್ ಆಗಿಯೇ ತೆಗೆದುಕೊಳ್ಳುವ ತಾಪ್ಸಿ ಆಟಿಟ್ಯೂಡ್‌ಗೆ ಅಭಿಮಾನಿಗಳು ಮತ್ತೆ ಫಿದಾ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss