Sunday, July 3, 2022

Latest Posts

ಮೊದಲ ಬಾರಿಗೆ ಮಗನ ಮುಖ ತೋರಿಸಿದ್ರು ಶ್ರೇಯಾ ಘೋಷಾಲ್, ಹೇಗಿದ್ದಾನೆ ನೋಡಿ ದೇವ್ಯಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ಗಾಯಕಿ ಶ್ರೇಯಾ ಘೋಷಾಲ್ ತಾಯಿಯಾಗಿದ್ದಾರೆ. ಎಲ್ಲ ಸೆಲೆಬ್ರಿಟಿಗಳಂತೆ ಇವರೂ ಕೂಡ ತಮ್ಮ ಮಗನ ಫೋಟೊ ರಿವೀಲ್ ಮಾಡಿಯೇ ಇರಲಿಲ್ಲ.
ಆದರೆ ಇದೀಗ ಶ್ರೇಯಾ ಹಾಗೂ ಶಿಲಾದಿತ್ಯ ಪುತ್ರನನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಮಗನಿಗೆ ದೇವ್ಯಾನ್ ಎಂದು ಹೆಸರಿಟ್ಟಿದ್ದು, ಆತನ ಮುದ್ದು ಮುಖದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ನಾನು ದೇವ್ಯಾನ್, ನನಗೀಗ ಆರು ತಿಂಗಳು. ಸದ್ಯಕ್ಕೆ ನಾನು ಈ ಜಗತ್ತನ್ನು ಅನುಭವಿಸುತ್ತಿದ್ದೇನೆ. ಒಳ್ಳೆಯ ಹಾಡುಗಳನ್ನು ಕೇಳುತ್ತೇನೆ. ಫೋಟೊಗಳಿರುವ ಪುಸ್ತಕಗಳನ್ನು ನೋಡುತ್ತೇನೆ. ಸಿಲ್ಲಿ ಜೋಕ್‌ಗಳಿಗೆ ಜೋರಾಗಿ ನಗ್ತೇನೆ ಹಾಗೂ ಅಮ್ಮನ ಜೊತೆ ಹೆಚ್ಚು ಮಾತನಾಡುತ್ತೇನೆ, ನನ್ನ ಎಲ್ಲ ಮಾತುಗಳು ಅಮ್ಮನಿಗೆ ಅರ್ಥವಾಗುತ್ತೆ. ನನ್ನನ್ನು ಇಷ್ಟೊಂದು ಪ್ರೀತಿಸಿದಕ್ಕೆ, ಆಶೀರ್ವಾದ ಕಳಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ’ ಎಂದು ಶ್ರೇಯಾ ಪೋಸ್ಟ್ ಮಾಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳು ಮಗುವಿನ ಮುದ್ದಾದ ಫೋಟೊ ನೋಡಿ ಕ್ಯೂಟ್ ಎಂದಿದ್ದು, ದೇವ್ಯಾನ್‌ಗೆ ಒಳ್ಳೆಯದಾಗಲಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss