ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಟೋದಲ್ಲಿ ಮೂರು ಜನಕ್ಕಿಂತ ಹೆಚ್ಚು ಕೂರೋದು ಹಿಂಸೆ, ಹೆಚ್ಚೆಂದರೆ ಕಂಬಿ ಮೇಲೆ ಒಬ್ಬರು ಹಾಗೂ ಡ್ರೈವರ್ ಪಕ್ಕ ಒಬ್ಬರು ಕೂರೋದನ್ನು ನೋಡಿದ್ದೀರಿ, ಆದರೆ ಈ ಆಟೋದಲ್ಲಿ 19 ಮಂದಿ ಕುಳಿತಿದ್ದಾರೆ.
ಒಬ್ಬರ ಮೇಲೊಬ್ಬರು, ಅಕ್ಕಪಕ್ಕದಲ್ಲಿ ಅಂಟಿಕೊಂಡು ಒಟ್ಟಾರೆ ಒಂದು ಆಟೋದಕ್ಕಿ 19 ಮಂದಿ ಟ್ರಾವೆಲ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಕೂತವರನ್ನು ಕೂರಿಸಿದವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದ್ದು. ಆಟೋ ಚಾಲಕನೊಬ್ಬ ಒಂದೇ ಬಾರಿಗೆ ತನ್ನ ಆಟೋದಲ್ಲಿ 19 ಪ್ರಯಾಣಿಕರನ್ನು ಹೊತ್ತೊಯ್ಯುವ ಮೂಲಕ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾನೆ. ಫೆಬ್ರವರಿ 15 ಶನಿವಾರ ರಾತ್ರಿಯ ವೇಳೆ ಆಟೋ ಚಾಲಕ ತನ್ನ ಆಟೋದಲ್ಲಿ 19 ಜನರನ್ನು ಕೂರಿಸಿಕೊಂಡು ಬರುತ್ತಿದ್ದ ವೇಳೆ ಬರುವಾಸಾಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪಾಯಿಂಟ್ ಬಳಿ ಪೊಲೀಸರು ಆಟೋವನ್ನು ನಿಲ್ಲಿಸಿದಾಗ, ಸಂಚಾರ ನಿಯಮವನ್ನು ಉಲ್ಲಂಘಿಸಿ ಚಾಲಕ ಆಟೋವನ್ನು ಓಡಿಸಿದ್ದಾನೆ ಎಂದು ತಿಳಿದಿದೆ.
ಅಷ್ಟೇ ಅಲ್ಲದೆ ಒಂದು ಪುಟ್ಟ ಆಟೋದೊಳಗೆ 19 ಜನರಿರುವುದನ್ನು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಆಟೋ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
View this post on Instagram