ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ವಿರುದ್ಧದ ಲಸಿಕೆಯ ವಿವಿಧ ಅಡ್ಡ ಪರಿಣಾಮಗಳ ಕುರಿತು ಸರ್ಕಾರಿ ಸಮಿತಿಯು ಅಧ್ಯಯನ ಮಾಡುತ್ತಿದು, ಈ ಸಮಿತಿಯು ಲಸಿಕೆ ಪಡೆದ ನಂತರ ಒಬ್ಬ ವ್ಯಕ್ತಿಯ ಮರಣವನ್ನು ದೃಢಪಡಿಸಿದೆ. ಲಸಿಕೆಯಿಂದ ಆದ ಮೊದಲ ಸಾವು ಇದು ಎಂದು ತಿಳಿಸಿದೆ.
ಈ ಹಿರಿಯ ವ್ಯಕ್ತಿ ಮಾರ್ಚ್ 8ರಂದು ಕೊವಿಡ್ 19 ಲಸಿಕೆ ಪಡೆದಿದ್ದರು. ಅದಾದ ಬಳಿಕ ಅನಾಫಿಲ್ಯಾಕ್ಸಿಸ್ಗೆ ಒಳಗಾಗಿದ್ದರು. ಅನಾಫಿಲ್ಯಾಕ್ಸಿಸ್ ಮಾರಣಾಂತಿಕ ಅಲರ್ಜಿಯಾಗಿದೆ. ಮೈಮೇಲೆ ಕೆಂಪು ದದ್ದು ಏಳುವುದು, ವಾಂತಿ, ಉಸಿರಾಟದ ಸಮಸ್ಯೆಗಳು ಉಂಟಾಗುತ್ತವೆ. ಇವರಿಗೆ ಲಸಿಕೆ ತೆಗೆದುಕೊಂಡ ನಂತರ ರಿಯಾಕ್ಷನ್ ಆಗಿದೆ. ಅದರಿಂದಲೇ ಜೀವ ಕಳೆದುಕೊಂಡಿದ್ದಾರೆ ಎಂದು AEFI ಸಮಿತಿ ಅಧ್ಯಕ್ಷ ಡಾ. ಎನ್.ಕೆ.ಅರೋರಾ ದೃಢಪಡಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಕೊವಿಡ್ 19 ಲಸಿಕೆ ಸಂಬಂಧಿತ ಇದುವರೆಗೂ ಮೂವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಲ್ಲಿ ವರದಿಯಾಗುತ್ತಿದ್ದರೂ, ಕೇಂದ್ರ ಸರ್ಕಾರದ ಈ ಸಮಿತಿ ಒಂದೇ ಸಾವನ್ನು ದೃಢಪಡಿಸಿದೆ. ಹೀಗೆ ಲಸಿಕೆಯಿಂದ ಉಂಟಾಗುವ ರಿಯಾಕ್ಷನ್ಗಳು ನಿರೀಕ್ಷತವೇ ಆಗಿರುತ್ತವೆ. ಲಸಿಕೆಗಳಿಂದ ಅನಾಫಿಲ್ಯಾಕ್ಸಿಸ್ ಮತ್ತಿತರ ಅಲರ್ಜಿಗಳು ಉಂಟಾಗುವುದು ಸಾಮಾನ್ಯ. ಆದರೆ ಅವು ಕೆಲವೊಮ್ಮೆ ಮಾರಣಾಂತಿಕವಾಗಿ ಪರಿಣಮಿಸುತ್ತವೆ ಎಂದು ಸಮಿತಿ ಹೇಳಿದೆ.
ಜನವರಿ 16 ಮತ್ತು 19ರಂದು ಲಸಿಕೆ ಪಡೆದ ಇನ್ನಿಬ್ಬರಲ್ಲೂ ಅನಾಫಿಲ್ಯಾಕ್ಸಿಸ್ ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಚೇತರಿಸಿಕೊಂಡಿದ್ದಾರೆ ಎಂದೂ AEFI ವರದಿಯಲ್ಲಿ ತಿಳಿಸಿದೆ.