ದೇಶದಲ್ಲೆಷ್ಟು ಜಲ ಮೂಲಗಳಿವೆ? ಇದೇ ಮೊದಲ ಬಾರಿಗೆ ‘ಜಲಗಣತಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನಗಣತಿ, ಹುಲಿಗಣತಿ ಕೇಳಿದ್ದೀರಾ, ಆದರೆ ಜಲಗಣತಿ ಕೇಳಿದ್ದೀರಾ? ಕೇಳಿರೋದಿಲ್ಲ, ಏಕೆಂದರೆ ದೇಶದಲ್ಲಿ ಇದೇ ಮೊದಲ ಬಾರಿಗೆ ಜಲಗಣತಿ ಮಾಡಲಾಗಿದೆ.

ಜಲಶಕ್ತಿ ಸಚಿವಾಲಯ ದೇಶದ ಜಲ ಮೂಲಗಳ ಲೆಕ್ಕಾಚಾರ ಮಾಡಿದೆ. ದೇಶದಲ್ಲಿ 24,24,540 ಜಲಮೂಲಗಳಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸಂಖ್ಯೆಯಲ್ಲಿ ಶೇ.97.1ರಷ್ಟು ಗ್ರಾಮೀಣ ಪ್ರದೇಶದಲ್ಲಿದೆ ಹಾಗೂ 2.9 ರಷ್ಟು ಮಾತ್ರ ನಗರ ಪ್ರದೇಶದಲ್ಲಿದೆ.

ಆರನೇ ಸಣ್ಣ ನೀರಾವರಿ ಗಣತಿಯ ಸಹಯೋಗದೊಂದಿದಗೆ ಕೇಂದ್ರ ಪ್ರಾಯೋಜಿತ ಯೋಜನೆಯಾದ ನೀರಾವರಿ ಗಣತಿ ಅಡಿಯಲ್ಲಿ ಈ ಸೆನ್ಸಸ್ ಕೈಗೊಂಡಿದೆ. ಜಲಮೂಗಳ ಈಗಿನ ಸ್ಥಿತಿ, ವಿಧ, ಅತಿಕ್ರಮಗಳಗಳ ಬಗ್ಗೆ ಮಾಹಿತಿ ದೊರೆಕಿದೆ. ಶೇಖರಣಾ ಸಾಮರ್ಥ್ಯ, ಸಂಗ್ರಹಣೆಯ ಸ್ಥಿತಿ ಸೇರಿದಂತೆ ಜಲಮೂಲಗಳ ಎಲ್ಲಾ ಪ್ರಮುಖ ಮಾಹಿತಿ ಸರ್ಕಾರಕ್ಕೆ ದೊರಕಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಉತ್ತರ ಪ್ರದೇಶ ಹಾಗೂ ತ್ರಿಪುರಾ ನೀರಿನ ಮೂಲಗಳ ಸಂಖ್ಯೆಯಲ್ಲಿ ಅಗ್ರ ರಾಜ್ಯಗಳಾಗಿವೆ, ಒಟ್ಟಾರೆ ಶೇ.63ರಷ್ಟು ನೀರಿನ ಸಂಪನ್ಮೂಲಗಳು ಈ ರಾಜ್ಯಗಳಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!