ಹೊಸದಿಗಂತ ಡಿಜಿಟಲ್ ಡೆಸ್ಕ್:
ವರದಕ್ಷಿಣೆ ನೀಡದ ಪತಿಯನ್ನು ಹಿಂಸೆ ಮಾಡಿ, ಆಕೆಯ ಗುಪ್ತಾಂಗಕ್ಕೆ ಲಟ್ಟಣಿಗೆ ತೂರಿಸಿ ಪತಿ ಕೊಂದಿದ್ದಾನೆ.
ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಪತಿ ಸುರ್ಜೀತ್ ತನ್ನ ಹೆಂಡತಿ ರೇಷ್ಮಾ(28) ಳನ್ನು ಭೀಕರವಾಗಿ ಕೊಂದು ಹಾಕಿದ್ದಾನೆ. ಪತ್ನಿಯ ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಆಕೆಯ ಖಾಸಗಿ ಅಂಗಕ್ಕೆ ಲಟ್ಟಣಿಗೆ ತುರುಕಿ ಹಿಂಸೆ ನೀಡಿ ಕೊಂದಿದ್ದಾನೆ. ಕೃತ್ಯ ಎಸಗುವಾಗ ಆತ ಮದ್ಯದ ಅಮಲಿನಲ್ಲಿದ್ದ.
ಮರಣೋತ್ತರ ಪರೀಕ್ಷೆಯ ವೇಳೆ ಮಹಿಳೆಯ ಇಡೀ ದೇಹದ ಮೇಲೆ ಗಾಯಗಳ ಗುರುತುಗಳು ಪತ್ತೆಯಾಗಿದ್ದು, ಇದಲ್ಲದೇ ಆಕೆಯ ಮರ್ಮಾಂಗದೊಳಗೆ ವಸ್ತುವಿರುವುದು ಕಂಡುಬಂದಿದೆ. ಬಳಿಕ ಹೊರತೆಗೆದಾಗ ಚಪಾತಿ ಮಾಡುವ ಲಟ್ಟಣಿಗೆಯನ್ನು ತುರುಕಿ ಹಿಂಸಿಸಿರುವುದು ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಲಟ್ಟಣಿಗೆ ಮಹಿಳೆಯ ಕರುಳಿನವರೆಗೂ ತಲುಪಿ ಹಾನಿಗೊಳಿಸಿದ್ದರಿಂದ ಆಕೆ ಸಾವನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.
ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಆರೋಪಿಯ ಸಹೋದರರೂ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.