ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೀರಿಯಡ್ಸ್ ಸಮಯದಲ್ಲಿ ಆಕೆಯನ್ನು ಯಾವ ರೀತಿ ನೋಡಿಕೊಳ್ಳಬೇಕು ಗೊತ್ತಾ? ಪುರುಷರಿಗಾಗಿ ಟಿಪ್ಸ್ ಇಲ್ಲಿದೆ..

ಪ್ರತಿ ಹೆಣ್ಣು ತಾನು ಋತುಮತಿಯಾದಾಗಿನಿಂದ ತನ್ನ ವಯಸ್ಸಿನ ಮಿತಿ ದಾಟುವವರೆಗೆ ಪ್ರತಿ ತಿಂಗಳು ಅನುಭವಿಸುವ ವೇತನೆ ಹೇಳತೀರದು. ಇಂತಹ ಸಮಯದಲ್ಲಿ ಅವರಿಗೆ ಕಾಡುವ ಹೊಟ್ಟೆ ನೋವು, ಜ್ವರ, ವಾಂತಿ ಈ ಸಮಸ್ಯೆಗಳ ಜೊತೆ ಮನೆಯ ಜವಾಬ್ದಾರಿಯನ್ನು ಹೊತ್ತು ಸಾಗುವ ಶಕ್ತಿ ಆಕೆಯಲ್ಲಿದೆ. ಆದರೆ ಆಕೆಯ ಶಕ್ತಿಗೆ ನಮ್ಮದೊಂದಷ್ಟು ಸಹಾಯ ಮಾಡಿದರೆ ಚೆಂದ ಅಲ್ಲವೇ? ಮಹಿಳೆಯ ಆ ದಿನಗಳಲ್ಲಿ ಹೇಗೆ ನೋಡಿಕೊಳ್ಳಬೇಕು ತಿಳಿಯಿರಿ..

  • ಪೀರಿಯಡ್ಸ್ ಸಮಯದಲ್ಲಿ ಆಕೆಯ ಹಾರ್ಮೋನ್ಸ್ ಸಮತೋಲನದಲ್ಲಿರುವುದಿಲ್ಲ. ಹಾಗಾಗಿ ಆಕೆ ಹೆಚ್ಚು ಭಾವುಕಳಾಗುತ್ತಾಳೆ. ಕೋಪಗೊಳ್ಳುತ್ತಾಳೆ. ಆದರೆ ಇಂತಹ ಸಮಯದಲ್ಲಿ ಆಕೆಯನ್ನು ಪ್ರೀತಿಯಿಂದ ಕಾಳಜಿ ಮಾಡಿ.
  • ಯಾವುದೇ ಕಾರಣಕ್ಕೂ ಆಕೆಯ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ಹೇಳಬೇಡಿ. ಏನಾದರೂ ಕೂಡ ತಾಳ್ಮೆಯಿಂದ ಮಾತನಾಡಿ ಪರಿಸ್ಥಿತಿ ನಿಭಾಯಿಸಿ.
  • ಹೆಣ್ಣುಮಕ್ಕಳಿಗೆ ಪೀರಿಯಡ್ಸ್ ಸಮಯದಲ್ಲಿ ಬೇಕಿರುವುದು ಹೆಚ್ಚು ಕಾಳಜಿ. ಹಾಗಾಗಿ ಆ ವೇಳೆ ಆಕೆಗೆ ಬೇಕಿರುವ ಚಾಕೊಲೇಟ್, ಹೂವು, ಆಹಾರಗಳನ್ನು ಕೊಡಿ.
  • ಆಕೆ ಪೀರಿಯಡ್ಸ್ ನಲ್ಲಿರುವಾಗ ತುಂಬಾ ನೋವನ್ನು ಅನುಭವಿಸುತ್ತಾಳೆ. ಆಗ ಆಕೆಗೆ ಅಗತ್ಯವಿರುವುದು ವಿಶ್ರಾಂತಿ ಹಾಗಾಗಿ ಅವಳಿಗೆ ತನ್ನ ಮನೆ ಕೆಲಸಗಳಿಂದ ದೂರ ಉಳಿದು ರೆಸ್ಟ್ ಮಾಡಲು ತಿಳಿಸಿ.
  • ಪೀರಿಯಡ್ಸ್ ನಲ್ಲಿ ಹೆಣ್ಣುಮಕ್ಕಳಿಗೆ ಚಳಿ ಜಾಸ್ತಿಯಾಗುತ್ತದೆ. ಇಂತಹ ಸಮಯದಲ್ಲಿ ಆಕೆಯನ್ನು ನಿರ್ಲಕ್ಷಿಸಬೇಡಿ. ಬದಲಿಗೆ ಆಕೆಗೆ ಬೇಕಾಗುವ ಹೊದಿಕೆ, ಸ್ವೆಟರ್ ನೀಡಿ ಆರೈಕೆ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss